newsfirstkannada.com

9 ಕೋಟಿ ಮಹಿಳೆಯರ ಲಕ್ ಬದಲಿಸಲಿದೆ ಲಕ್​ಪತಿ ದೀದಿ ಯೋಜನೆ; ಏನಿದು? 10 ಲಾಭಗಳು ಏನು?

Share :

Published February 1, 2024 at 1:26pm

    ಲಕ್​ಪತಿ ದೀದಿ ಯೋಜನೆ ಘೋಷಿಸಿದ ಸೀತಾರಾಮನ್

    ಲಕ್​ಪತಿ ದೀದಿಯ 10 ಪ್ರಯೋಜನಗಳು ಇಲ್ಲಿವೆ

    ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಮಂಡನೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಮಹಿಳೆಯರಿಗಾಗಿ ‘ಲಕ್​ಪತಿ ದೀದಿ ಯೋಜನೆ’ಯನ್ನು ಪರಿಚಯಿಸುತ್ತಿರೋದಾಗಿ ಘೋಷಣೆ ಮಾಡಿದ್ದಾರೆ.

ಏನಿದು ಲಕ್​ಪತಿ ದೀದಿ ಯೋಜನೆ..?
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೇಂದ್ರ ಸರ್ಕಾರ ಲಕ್​ಪತಿ ದೀದಿ ಯೋಜಯನೆಯನ್ನು ಆರಂಭಿಸಿದೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಮುಂದೆ ತರುವುದು ಈ ಯೋಜನೆಯ ಉದ್ದೇಶ. ಲಕ್​ಪತಿ ಯೋಜನೆ ಮೂಲಕ 9 ಕೋಟಿ ಮಹಿಳೆಯರ ಲಕ್ ಬದಲಾಗಲಿದೆ ಅನ್ನೋದು ಕೇಂದ್ರದ ವಾದ. ಈ ಮೂಲಕ ಮಹಿಳೆಯರನ್ನು ಸಂಪೂರ್ಣವಾಗಿ ಸ್ವಾವಲಂಬಿಗಳಾಗಿ ಮಾಡೋದಾಗಿದೆ.

ಲಕ್​​ಪತಿ ದೀದಿಯ 10 ಪ್ರಯೋಜನಗಳು..!

  1. ಆರ್ಥಿಕ ಜ್ಞಾನ ಹೊಂದಿರುವ ಮಹಿಳೆಯರನ್ನು ಬಲಪಡಿಸಲು ಸಮಗ್ರ ಆರ್ಥಿಕ ಸಾಕ್ಷರತಾ ಕಾರ್ಯಾಗಾರ ನಡೆಸಲಾಗುತ್ತಿದೆ.
  2. ಕಾರ್ಯಾಗಾರದಲ್ಲಿ ಬಜೆಟ್, ಉಳಿತಾಯ, ಹೂಡಿಕೆಯಂತಹ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ
  3. ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹಣ ಉಳಿತಾಯಕ್ಕೆ ಪ್ರೋತ್ಸಾಹಿಸಲಾಗುತ್ತದೆ
  4. ಮಹಿಳೆಯರಿಗೆ ಕಿರುಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ
  5. ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಗೆ ಗಮನ ನೀಡಲಾಗುತ್ತದೆ
  6. ಉದ್ಯಮಿಯಾಗಲು ಬಯಸುವ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ
  7. ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಲಾಗಿದೆ. ಇದಕ್ಕಾಗಿ ಕೈಗೆಟುಕುವ ದರದಲ್ಲಿ ವಿಮಾ ಸೌಲಭ್ಯ ಪರಿಚಯಿಸಲಾಗುತ್ತದೆ. ಇದರಿಂದ ಅವರ ಕುಟುಂಬದ ಭದ್ರತೆಯೂ ಹೆಚ್ಚುತ್ತದೆ.
  8. ಮಹಿಳೆಯರಿಗೆ ಡಿಜಿಟಲ್ ಬ್ಯಾಂಕಿಂಗ್ ಸರ್ವೀಸ್, ಮೊಬೈಲ್ ವ್ಯಾಲೆಟ್ಸ್​ ಮತ್ತು ಪಾವತಿಗಳಿಗಾಗಿ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಪ್ರೋತ್ಸಾಹ
  9. ಜೊತೆಗೆ ಅನೇಕ ರೀತಿಯ ಸಬಲೀಕರಣ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ.
  10. ಈ ಮೂಲಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಲಾಗುತ್ತದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

9 ಕೋಟಿ ಮಹಿಳೆಯರ ಲಕ್ ಬದಲಿಸಲಿದೆ ಲಕ್​ಪತಿ ದೀದಿ ಯೋಜನೆ; ಏನಿದು? 10 ಲಾಭಗಳು ಏನು?

https://newsfirstlive.com/wp-content/uploads/2024/02/NIRMALA-1.jpg

Load More