ಮೋದಿ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಗುಡ್‌ನ್ಯೂಸ್‌.. ಹೇಗಿದೆ ಹೊಸ ತೆರಿಗೆ ನೀತಿ? ಯಾರಿಗೆ ಎಷ್ಟು ಟ್ಯಾಕ್ಸ್?

author-image
admin
Updated On
PM internship scheme; ಅರ್ಜಿ ಆರಂಭ.. 500 ಕಂಪನಿ, 90 ಸಾವಿರಕ್ಕೂ ಹೆಚ್ಚು ಪೋಸ್ಟ್, ತಕ್ಷಣ ಅಪ್ಲೇ ಮಾಡಿ
Advertisment
  • ದೇಶದ ಮಧ್ಯಮ ವರ್ಗದ ಜನತೆ ನಿಟ್ಟುಸಿರು ಬಿಟ್ಟ ನಿರ್ಧಾರ
  • 2025ನೇ ಬಜೆಟ್‌ನಲ್ಲಿ ಆದಾಯ ತೆರಿಗೆದಾರರಿಗೆ ಬಂಪರ್ ಗಿಫ್ಟ್
  • 12 ಲಕ್ಷ ರೂಪಾಯಿ ಆದಾಯದವರೆಗೆ ಯಾವುದೇ ಟ್ಯಾಕ್ಸ್ ಇಲ್ಲ!

2025ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಡೀ ದೇಶದ ಮಧ್ಯಮ ವರ್ಗದ ಜನತೆ ನಿಟ್ಟುಸಿರು ಬಿಡುವಂತ ಮಹತ್ವದ ಘೋಷಣೆ ಮಾಡಿದೆ. ಮಧ್ಯಮ ವರ್ಗದ ಆದಾಯ ತೆರಿಗೆಯ ಹೊರೆಯನ್ನ ಇಳಿಸಿದ್ದು, ₹12 ಲಕ್ಷದವರೆಗೂ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿದೆ.

2025ನೇ ಬಜೆಟ್‌ನಲ್ಲಿ ಆದಾಯ ತೆರಿಗೆದಾರರಿಗೆ ಬಂಪರ್ ಗಿಫ್ಟ್ ಸಿಕ್ಕಿದೆ. 12 ಲಕ್ಷ ರೂಪಾಯಿ ಆದಾಯದವರೆಗೆ ಯಾವುದೇ ಟ್ಯಾಕ್ಸ್ ಕಟ್ಟುವಂತಿಲ್ಲ.

ಇದನ್ನೂ ಓದಿ: BUDGET 2025: ಎಲ್ಲಾ ಸರ್ಕಾರಿ ಶಾಲೆಗಳಿಗೆ ಇಂಟರ್​ನೆಟ್ ಸೌಲಭ್ಯ.. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಸಾಮಾಜಿಕ ಭದ್ರತೆ 

ಹೊಸ ತೆರಿಗೆ ನೀತಿಯಲ್ಲಿ ಯಾರಿಗೆ ಎಷ್ಟು?

12 ಲಕ್ಷ ರೂಪಾಯಿಯವರೆಗೆ ತೆರಿಗೆ ವಿನಾಯಿತಿ
ಆದಾಯ 0-4 ಲಕ್ಷ ರೂಪಾಯಿ - ತೆರಿಗೆ ಇಲ್ಲ
ಆದಾಯ 4-8 ಲಕ್ಷ ರೂಪಾಯಿ - ಶೇಕಡಾ 5ರಷ್ಟು ತೆರಿಗೆ
ಆದಾಯ 8-12 ಲಕ್ಷ ರೂಪಾಯಿ - ಶೇಕಡಾ 10ರಷ್ಟು ತೆರಿಗೆ
ಆದಾಯ 12-16 ಲಕ್ಷ ರೂಪಾಯಿ - ಶೇಕಡಾ 15ರಷ್ಟು ತೆರಿಗೆ
ಆದಾಯ 16 ಲಕ್ಷ ಮೇಲ್ಪಟ್ಟವರಿಗೆ ಶೇಕಡಾ 20ರಷ್ಟು ತೆರಿಗೆ
ಆದಾಯ 20 ಲಕ್ಷದಿಂದ 24 ಲಕ್ಷದವರೆಗೆ ಶೇಕಡಾ 25ರಷ್ಟು ತೆರಿಗೆ
ಆದಾಯ 24 ಲಕ್ಷ ಮೇಲ್ಪಟ್ಟವರಿಗೆ ಶೇಕಡಾ 30ರಷ್ಟು ತೆರಿಗೆ

publive-image

ಇದು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಹೊಸ ತೆರಿಗೆ ಸ್ಲ್ಯಾಬ್ ಆಗಿದ್ದು, ಆದಾಯ ತೆರಿಗೆ ಪಾವತಿದಾರರು 12 ಲಕ್ಷದವರೆಗೂ ಆದಾಯ ತೆರಿಗೆ ವಿನಾಯಿತಿ ಮಾಡಲು ಅವಕಾಶ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment