Buffer zone.. ರಾಜ್ಯ ಸರ್ಕಾರದ ತೀರ್ಮಾನಕ್ಕೆ ಪರಿಸರವಾದಿಗಳು ತೀವ್ರ ವಿರೋಧ; ಕಾರಣವೇನು?

author-image
Veena Gangani
Updated On
ಪವರ್ ಶೇರಿಂಗ್ ಫೈಟ್​​ನಲ್ಲಿ ಭಾರೀ ಟ್ವಿಸ್ಟ್.. 2 ದಿನ ಸೈಲೆಂಟ್ ಆಗಿದ್ದ ಡಿಕೆಶಿ ದಿಢೀರ್ ದೆಹಲಿಗೆ ದೌಡು..!
Advertisment
  • ರಾಜ್ಯ ಸರ್ಕಾರದ ತೀರ್ಮಾನಕ್ಕೆ ವಿರೋಧ ಏಕೆ?
  • ಬೆಂಗಳೂರಿನ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತಾ?
  • ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಒಪ್ಪಿಗೆ

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರವು ಕೆರೆಗಳ ಸುತ್ತಲಿನ ಬಫರ್ ಜೋನ್ ಅನ್ನು ಕಡಿಮೆ ಮಾಡುವ ಮಸೂದೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ಮಸೂದೆ-2025ಕ್ಕೆ ರಾಜ್ಯದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.

ಇದನ್ನೂ ಓದಿ:ಎರಡನೇ ಪಾಯಿಂಟ್​​​ನಲ್ಲೂ ಸಿಕ್ಕಿಲ್ಲ ಯಾವುದೇ ಕುರುಹು.. SIT ಮುಂದಿನ ಪ್ಲಾನ್ ಏನು?

publive-image

ಆದರೆ, ಕೆರೆಗಳ ಸುತ್ತಲಿನ ಬಫರ್ ಜೋನ್ ಕಡಿಮೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರವು ರಾಜ್ಯದ ಕೆರೆಗಳನ್ನು ಭವಿಷ್ಯಕ್ಕಾಗಿ ರಕ್ಷಿಸಬೇಕಾದ ಸಂದರ್ಭದಲ್ಲಿ ಬಫರ್ ಜೋನ್ ಕಡಿಮೆ ಮಾಡುವುದು ಕೆರೆ ಸುತ್ತ ಕಮರ್ಷಿಯಲ್ ಮತ್ತು ಇಂಡಸ್ಟ್ರೀಯಲ್ ಚಟುವಟಿಕೆಗೆ ಅವಕಾಶ ಕೊಟ್ಟಂತೆ ಆಗುತ್ತೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆರೆಗಳ ಸುತ್ತಲಿನ ಬಫರ್ ಜೋನ್ ಕಡಿಮೆ ಮಾಡಲಾಗುತ್ತಿದೆ ಎಂದು ಅನೇಕರು ಟೀಕಿಸಿದ್ದಾರೆ.

ಬಫರ್ ಜೋನ್ ಎಂದರೆ, ಕೆರೆಯ ಸುತ್ತಲಿನ ಖಾಲಿ ಜಾಗ, ಈ ಜಾಗದಲ್ಲಿ ಪ್ರವಾಹ ನಿಯಂತ್ರಣ, ಪರಿಸರ ಸಂರಕ್ಷಣೆ ಮಾಡಲಾಗುತ್ತೆ. ಬಫರ್ ಜೋನ್ ನಲ್ಲಿ ಯಾವುದೇ ಕಟ್ಟಡಗಳನ್ನು ಕಟ್ಟುವಂತಿಲ್ಲ. ಇನ್ನೂ ಈಗ ಕಾಯಿದೆಯ ತಿದ್ದುಪಡಿ ಮೂಲಕ ಈ ಬಫರ್ ಜೋನ್ ಪ್ರದೇಶವನ್ನು ಕಡಿಮೆ ಮಾಡಲಾಗುತ್ತಿದೆ. ಕೆರೆಯ ಗಾತ್ರಕ್ಕೆ ಅನುಗುಣವಾಗಿ ಬಫರ್ ಜೋನ್ ಅನ್ನು ಕಡಿಮೆ ಮಾಡಿ ಹೊಸ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತರಲಾಗುತ್ತಿದೆ. ಹೊಸ ತಿದ್ದುಪಡಿ ಕಾಯಿದೆಯಲ್ಲಿ ಕೆರೆಗಳ ಗಾತ್ರಕ್ಕೆ ಅನುಗುಣವಾಗಿ 3 ಮೀಟರ್​ನಿಂದ 30 ಮೀಟರ್​ವರೆಗೂ ಮಾತ್ರ ಬಫರ್ ಜೋನ್ ಇರಲಿದೆ.

publive-image

ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದ ಸಮಿತಿ ಶಿಫಾರಸ್ಸು ಆಧಾರದ ಮೇಲೆ ಕ್ಯಾಬಿನೆಟ್​ಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸಮಿತಿಯು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿತ್ತು ಎಂದು ರಾಜ್ಯದ ಸಣ್ಣ ನೀರಾವರಿ ಖಾತೆ ಸಚಿವ ಬೋಸರಾಜ್ ಹೇಳಿದ್ದಾರೆ. ಕರ್ನಾಟಕ ಟ್ಯಾಂಕ್ ಕನ್ಸರವೇಷನ್ ಅಂಡ್ ಡೆವಲಪ್ ಮೆಂಟ್ ಅಥಾರಿಟಿ ಆ್ಯಕ್ಟ್ ನಡಿ ಕೆರೆ ಸುತ್ತ 30 ಮೀಟರ್​ವರೆಗೂ ಬಫರ್ ಜೋನ್ ಇರಬೇಕು. ಆದರೆ, ಕೆಲವು ಜಿಲ್ಲೆಗಳಲ್ಲಿ ಕೆರೆಗಳು ಒಂದು ಎಕರೆಗಿಂತ ಕಡಿಮೆ ಇವೆ. ಅಂಥ ಕೆರೆಗಳಲ್ಲಿ 30 ಮೀಟರ್​ವರೆಗೂ ಬಫರ್ ಜೋನ್ ಬಿಟ್ಟರೇ, ಅಗತ್ಯ ಚಟುವಟಿಕೆಗಳಿಗೆ ತೊಂದರೆಯಾಗುತ್ತೆ. ಹೀಗಾಗಿ ಕೆರೆಗಳ ಸುತ್ತಲಿನ ಬಫರ್ ಜೋನ್ ಅಳತೆಯ ಬಗ್ಗೆ ಪುನರ್ ಪರಿಶೀಲನೆ ಮಾಡಲು ನಿರ್ಧರಿಸಲಾಯಿತು.

ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!

ಆದ್ರೆ ಹೀಗೆ ಬಫರ್ ಜೋನ್ ಕಡಿಮೆ ಮಾಡುವುದರಿಂದ ಪ್ರವಾಹದ ರಿಸ್ಕ್ ಜಾಸ್ತಿಯಾಗುತ್ತೆ. ಬೆಂಗಳೂರಿನ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತೆ. ಬೆಂಗಳೂರಿನಲ್ಲಿ ಶೇ.5ಕ್ಕಿಂತ ಕಡಿಮೆ ಪ್ರದೇಶದಲ್ಲಿ ಮಾತ್ರವೇ ಕೆರೆಗಳಿವೆ. ಸರ್ಕಾರದ ಈ ನಿರ್ಧಾರವು ಸಾರ್ವಜನಿಕ ಹಿತಾಸಕ್ತಿಗಿಂತ ರಿಯಲ್ ಎಸ್ಟೇಟ್ ಲಾಬಿ, ಹಿತಾಸಕ್ತಿಯನ್ನು ರಕ್ಷಣೆ ಮಾಡುತ್ತೆ. ದೊಡ್ಡ ಮಟ್ಟದ ಒತ್ತುವರಿಯನ್ನು ಸಕ್ರಮಗೊಳಿಸುತ್ತೆ ಎಂದು ಪರಿಸರವಾದಿಗಳು ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಫರ್ ಜೋನ್ ಅನ್ನು ಎಷ್ಟಕ್ಕೆ ಹೊಸ ತಿದ್ದುಪಡಿ ಕಾಯಿದೆಯಲ್ಲಿ ನಿಗದಿ?

6 ಸೆಂಟ್ ನಿಂದ 1 ಎಕರೆವರೆಗಿನ ಕೆರೆ-- 3 ಮೀಟರ್
1-10 ಎಕರೆವರೆಗಿನ ಕೆರೆ-6 ಮೀಟರ್
10-25 ಎಕರೆವರೆಗಿನ ಕೆರೆ- 12 ಮೀಟರ್
25- 100 ಎಕರೆವರೆಗಿನ ಕೆರೆ- 24 ಮೀಟರ್
100 ಎಕರೆಗೂ ಹೆಚ್ಚು ವಿಶಾಲ ಕೆರೆ- 30 ಮೀಟರ್

ರಾಜ್ಯ ಸರ್ಕಾರ ಬಫರ್ ಜೋನ್ ಒತ್ತುವರಿಯ ತೆರವು ಬಗೆಗಿನ ಜವಾಬ್ದಾರಿಯಿಂದ ಎಸ್ಕೇಪ್ ಆಗಲು ಹೊರಟಿದೆ ಎಂದು ಪ್ರೆಂಡ್ಸ್ ಆಫ್ ಲೇಕ್ಸ್ ಸಂಘಟನೆಯ ಸ್ಥಾಪಕ ರಾಮ ಪ್ರಸಾದ್ ಹೇಳಿದ್ದಾರೆ. ಎಲ್ಲ ಕೆರೆಗಳಲ್ಲೂ ಒತ್ತುವರಿಗಳಿವೆ. ಇಂಥ ಒತ್ತುವರಿಗಳನ್ನು ಸರ್ಕಾರ ತೆರವುಗೊಳಿಸುವ ಬದಲು ಕಾನೂನುಬದ್ದಗೊಳಿಸುತ್ತಿದೆ. ರಾಜ್ಯ ಸರ್ಕಾರವೇ ಬಿಲ್ಡರ್​ಗಳಿಗೆ ಬಫರ್ ಜೋನ್ ನಲ್ಲಿ ಬ್ರಿಡ್ಜ್, ರಸ್ತೆ ನಿರ್ಮಿಸಿ ಒತ್ತುವರಿಗೆ ಪೋತ್ಸಾಹ ನೀಡುತ್ತಿದೆ ಎಂದು ರಾಮಪ್ರಸಾದ್ ಟೀಕಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment