ದಿಢೀರ್ ಕುಸಿದು ಬಿದ್ದ ಕಟ್ಟಡ.. ಹಾಸನದಲ್ಲಿ ನಾಲ್ವರು ಬೀದಿ ಬದಿ ವ್ಯಾಪಾರಿಗಳ ದುರಂತ ಅಂತ್ಯ

author-image
Gopal Kulkarni
Updated On
ದಿಢೀರ್ ಕುಸಿದು ಬಿದ್ದ ಕಟ್ಟಡ.. ಹಾಸನದಲ್ಲಿ ನಾಲ್ವರು ಬೀದಿ ಬದಿ ವ್ಯಾಪಾರಿಗಳ ದುರಂತ ಅಂತ್ಯ
Advertisment
  • ಹಾಸನದ ಬೇಲೂರಿನಲ್ಲಿ ದಿಢೀರ್ ಕುಸಿದು ಬಿದ್ದ ಕಟ್ಟಡ
  • ಕಟ್ಟಡದ ಕೆಳಗೆ ವ್ಯಾಪಾರ ಮಾಡುತ್ತಿದ್ದ ನಾಲ್ವರ ದುರ್ಮರಣ
  • ಕಟ್ಟದ ಅವಶೇಷಗಳ ಅಡಿ ಇನ್ನೂ ಹಲವರು ಸಿಲುಕಿರುವ ಶಂಕೆ

ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲೊಂದು ಭಾರೀ ದುರಂತ ನಡೆದು ಹೋಗಿದೆ. ಪಾಳು ಬಿದ್ದಿದ್ದ ಕಟ್ಟಡದ ಕೆಳಗೆ ಎಂದಿನಂತೆ ವ್ಯಾಪಾರ ಮಾಡುತ್ತಿದ್ದವರು ದುರಂತ ಅಂತ್ಯ ಕಂಡಿದ್ದಾರೆ. ಇಂದು ಎಂದಿನಂತೆ ವ್ಯಾಪಾರಕ್ಕೆ ಬಂದು ಕುಳಿತದ್ದರು ಹಲವು ವ್ಯಾಪಾರಿಗಳು. ಈ ವೇಳೆ ದಿಢೀರ್​​​ನೇ ಕಟ್ಟಡ ಕುಸಿದು ಬಿದ್ದಿದೆ. ಕುಸಿದು ಬಿದ್ದ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ ವ್ಯಾಪಾರಿಗಳಲ್ಲಿ 4 ಜನ ವ್ಯಾಪಾರಿಗಳು ದುರಂತ ಅಂತ್ಯ ಕಂಡಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭೀಕರ ಅಪಘಾತ.. ಇನ್ನೋವಾ ಕಾರಿನಲ್ಲಿದ್ದ 5 ಮಂದಿ ದಾರುಣ ಅಂತ್ಯ, ಓರ್ವನ ಸ್ಥಿತಿ ಚಿಂತಾಜನಕ

ಇನ್ನು ಮೃತರಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಹೇಳಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಹಲವು ವ್ಯಾಪಾರಿಗಳು ಸಿಲುಕಿಕೊಂಡಿರುವ ಶಂಕೆಯೂ ಇದೆ.

ಸದ್ಯ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅವಶೇಷಗಳ ಅಡಿ ಇನ್ನೂ ಹಲವರು ಸಿಲುಕಿರುವ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment