/newsfirstlive-kannada/media/post_attachments/wp-content/uploads/2024/07/Road.jpg)
ವಿಶ್ವ ಎಲೆಕ್ಟ್ರಿಕ್ ವಾಹನಗಳತ್ತ ಮೊರೆ ಹೋಗುತ್ತಿವೆ. ಬಹುತೇಕ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿ ಬಳಕೆ ಮಾಡುತ್ತಿವೆ. ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗಾಗಿ ಚಾರ್ಜಿಂಗ್ ಸ್ಟೇಷನ್ ಕೂಡ ತೆರೆದಿವೆ. ಭಾರತದಲ್ಲೂ ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದ್ದು, ಅವುಗಳ ಬಳಕೆಗೆ ಉತ್ತೇಜನ ನೀಡುತ್ತಿವೆ.
ಆದರೀಗ ಎಲೆಕ್ಟ್ರಿಕ್ ವಾಹನಗಳ ಜಾರ್ಜಿಂಗ್ ಸ್ಟೇಷನ್ಗಳ ಮುಂದುವರೆದ ಭಾಗವಾಗಿ ವೈರ್ಲೆಸ್ ಜಾರ್ಜಿಂಗ್ ಮಾಡುವತ್ತ ಅನ್ವೇಷಣೆ ನಡೆಯುತ್ತಾ ಬಂದಿದೆ. ಅಚ್ಚರಿಯೆಂದರೆ ನಾರ್ವೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ಗಾಗಿ ವೈರ್ಲೆಸ್ ಚಾರ್ಜಿಂಗ್ ರಸ್ತೆಯನ್ನೇ ನಿರ್ಮಿಸಲಾಗಿದೆ.
ಚಾರ್ಜ್ ಮಾಡುವ ರಸ್ತೆ
ಇಸ್ರೇಲಿ ಹೈಟೆಕ್ ಕಂಪನಿಯಾದ ಎಲೆಕ್ಟ್ರಿಯಾನ್ ವೈರ್ಲೆಸ್ ಇಂತಹದೊಂದು ಅನ್ವೇಷನೆ ನಡೆಸಿ ಚಾಲನೆಗೆ ತಂದಿದೆ. ಎಲೆಕ್ಟ್ರಿಕ್ ವಾಹನ ಚಾಲಕರು ಚಾಲನೆಯಲ್ಲಿಯೇ ವಾಹನಗಳನ್ನು ಚಾರ್ಜ್ ಮಾಡಬಹುದಾದ ರಸ್ತೆಯನ್ನು ಈ ಕಂಪನಿ ನಿರ್ಮಿಸಿದೆ.
ರಸ್ತೆಯ ಮೇಲ್ಭಾಗದಲ್ಲಿ ವಿಶೇಷ ತಾಮ್ರದ ಪಟ್ಟಿಗಳನ್ನು ಬಳಸಿಕೊಂಡು ಅದರ ಮೂಲಕ ವಾಹನಗಳು ಚಲಿಸುವಾಗ ಚಾರ್ಜ್ ಆಗುತ್ತದೆ. 100 ಮೀಟರ್ ಉದ್ದದ ಹೊಸ ತಂತ್ರಜ್ಞಾನವನ್ನು ಎಲೆಕ್ಟ್ರಿಯಾನ್ ಕಂಪನಿ ಟ್ರೋಂಡ್ಹೈಮ್ನಲ್ಲಿ ನಿರ್ಮಿಸಿದೆ. ಮಾಹಿತಿ ಪ್ರಕಾರ ಒಂದು ವರ್ಷದವರೆಗೆ ಹೊಸ ತಂತ್ರಜ್ಞಾನದ ಬಗ್ಗೆ ನಿಗಾವಹಿಸಲಿದೆ.
ಚೀನಾದ ಯುಟಾಂಗ್ ಕಂಪನಿ ತಯಾರಿಸಿದ ಮೂರು ಎಲೆಕ್ಟ್ರಿಕ್ ಬಸ್ ಮತ್ತು ಮತ್ತೊಂದು ತಯಾರಿಕ ಕಂಪನಿಯಾದ ಹೈಗರ್ನಿಂದ ತಯಾರಿದ ಬಸ್ಸನ್ನು ಬಳಸಿಕೊಂಡು ಪ್ರಯೋಗ ನಡೆಸಲಾಗುತ್ತಿದೆ. ಒಂದು ವೇಳೆ ಈ ಪ್ರಯೋಗ ಸಕ್ಸಸ್ ಆದರೆ ವೈರ್ಲೆಸ್ ರಸ್ತೆ ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ.
ವಾಯುಮಾಲಿನ್ಯ ಸಮಸ್ಯೆ, ಕಚ್ಚಾ ತೈಲಗಳ ಅಭಾವ ಪ್ರಪಂಚದಾದ್ಯಂತ ಕಾಡುತ್ತಿದೆ. ಈ ಸಮಸ್ಯೆ ಹೋಗಲಾಡಿಸಲು ಅನೇಕ ದೇಶಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಉತ್ತೇಜನ ನೀಡುತ್ತಿವೆ. ಅದರ ಜಾರ್ಜಿಂಗ್ಗಾಗಿ ಸ್ಟೇಷನ್ಗಳನ್ನು ನಿರ್ಮಿಸಿ ಜಾರ್ಜ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದರೀಗ ಸಮಯದ ಉಳಿಕೆಗಾಗಿ ವಾಹನ ಚಾಲನೆಯ ವೇಳೆಯೇ ಚಾರ್ಜ್ ಆಗುವಂತೆ ರಸ್ತೆ ನಿರ್ಮಾಣ ಮಾಡಿರುವುದು ಜಗತ್ತಿಗೆ ಅಚ್ಚರಿಯ ವಿಚಾರಗಳಲ್ಲಿ ಒಂದಾಗಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಸ್ಟ್ಯಾಟಿಸ್ಟಾ ಹೇಳುವಂತೆ ಮಾರ್ಚ್ 2023ರ ವೇಳೆಯಲ್ಲಿ 2.3 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳು ಚಾಲ್ತಿಯಲ್ಲಿವೆ ಎಂದಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬಳಕೆ ಭಾರತದಲ್ಲಿ ಹೆಚ್ಚಾಗಿದೆ. ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ವೇಗವಾಗಿ ಬದಲಾಗುತ್ತಿದೆ. 2035ರ ವೇಳೆ ಆಟೋ ಮೊಬೈಲ್ ಮಾರುಕಟ್ಟೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದಿದೆ.
ಸರ್ಕಾರದ ವಾಹನ್ ವೆಬ್ಸೈಟ್ನಲ್ಲಿ ಆಗಸ್ಟ್ 8, 2023ರಲ್ಲಿ ಭಾರತದ ರಸ್ತೆಗಳಲ್ಲಿ 2.8 ಮಿಲಿಯನ್ ನೋಂದಾಯಿತ ಎಲೆಕ್ಟ್ರಿಕ್ ವಾಹನಗಳು ಚಲಿಸುತ್ತಿವೆ ಎಂದು ಹೇಳಿತ್ತು. ಪ್ರಸ್ತುತ 2024ರಲ್ಲಿ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ