/newsfirstlive-kannada/media/post_attachments/wp-content/uploads/2025/04/NAIL-1.jpg)
ಅದೇನೋ ಒಂದ್ ಗಾದೆ.. ಉಗುರು ಹೋಗೋ ಕೆಲಸಕ್ಕೆ ಕೊಡ್ಲಿ ತಂದ್ರು ಅಂತ.. ಇಲ್ಲಿ ಉದರೋ ಕಂಟಕವೇ ಆತಂಕ ತಂದೊಡ್ಡಿದೆ.. ಮೊದಲು ಕೂದಲು.. ಇವಾಗ ಉಗುರು.. ಮುಂದೇನು ಅನ್ನೋ ಭಯ ಶುರುವಾಗಿದೆ.. ಉಗರು ಉದುರೋ ಸಮಸ್ಯೆಯಿಂದ ಹೈರಾಣಾಗಿರೋ ಜನರ ಪರದಾಟ ಹೀಗಿದೆ.
ಉಗುರು ಉದುರೋ ಸಮಸ್ಯೆ..
ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆ ಬಾಂಡ್‌ಗಾಂವ್.. ತಿಂಗಳ ಹಿಂದೆಯಷ್ಟೆ ಈ ಊರಿನ ಜನಕ್ಕೆ ಕೂದಲು ಉದುರುತ್ತಿದೆ ಅನ್ನೋ ಆತಂಕ ಕಾಡಿತ್ತು.. ಈ ಆತಂಕ ಮಾಸುವ ಮುಂಚೆನೇ ಮತ್ತೊಂದು ವಿಚಿತ್ರ ಕಾಯಿಲೆ ಎದುರಾಗಿದೆ. ಬಾಂಡ್‌ಗಾಂವ್ ಭಾಗದ ಜನರಲ್ಲಿ ಬೆರಳಿನಿಂದ ಉಗುರುಗಳು ಕಿತ್ತು ಬರ್ತಿವೆ.. ಒಬ್ಬರಲ್ಲ ಇಬ್ಬರಲ್ಲ ಸುಮಾರು 46 ಜನಕ್ಕೆ ಹೀಗೆ ಆಗ್ತಿದೆ. ಕಳೆದ 6 ದಿನದಲ್ಲಿ ಶೇಗಾಂವ್ ತಾಲೂಕಿನ 5 ಹಳ್ಳಿಗಳಲ್ಲಿ ಈ ರೋಗಲಕ್ಷಣ ಕಂಡುಬಂದಿದೆ.
ಇದನ್ನೂ ಓದಿ: ರಿಕ್ಕಿ ಮೇಲೆ ಪ್ರೀ-ಪ್ಲಾನ್ ಅಟ್ಯಾಕ್.. ಕಾಂಪೌಂಡ್ ಮೇಲೆ ನಿಂತು ಫೈರಿಂಗ್..!
ಉದುರುವಿಕೆ ಸಮಸ್ಯೆ!
ಬಾಂಡ್‌ಗಾಂವ್ ಗ್ರಾಮದಲ್ಲಿ 14 ಜನರಿಗೆ ಉಗುರು ಉದುರುವಿಕೆ ಸಮಸ್ಯೆ ಕಾಡ್ತಿದ್ರೆ, ಕಲ್ವಾಡ್ ಗ್ರಾಮದಲ್ಲಿ 13 ಜನ, ಕಥೋರಾ ಗ್ರಾಮದಲ್ಲಿ 10 ಮಂದಿಗೆ ವಿಚಿತ್ರ ರೋಗ ಕಾಣಿಸಿದೆ. ಮಚ್ಚಿಂದ್ರಖೇಡ್ ಗ್ರಾಮದಲ್ಲಿ 07 ಜನರಲ್ಲಿ ಉಗುರು ಹೋಗ್ತಿದೆ.. ಘುಯಿ ಗ್ರಾಮದಲ್ಲಿ ಇಬ್ಬರು ರೋಗಿಗಳು ಪತ್ತೆಯಾಗಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ತಕ್ಷಣವೇ ಸಮೀಕ್ಷೆ ಪ್ರಾರಂಭಿಸಿದೆ. ಚರ್ಮರೋಗ ತಜ್ಞ ಡಾ. ಬಾಲಾಜಿ ಅದ್ರಾರ್ ರೋಗಿಗಳ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಸಚಿವ ಪ್ರತಾಪ್‌ರಾವ್ ಜಾಧವ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪರಿಸರ ಮಾಲಿನ್ಯ.. ಕಲುಷಿತ ನೀರು ಸೇವನೆ.. ಕಾರಣ ಇರಬಹುದು ಅನ್ನೋದು ತಜ್ಞರ ಶಂಕೆ.. ಈ ಹಿಂದೆ ಸರ್ಕಾರ ವಿತರಿಸಿದ ಗೋಧಿ ತಿಂದು 18 ಗ್ರಾಮದಲ್ಲಿ 50ಕ್ಕೂ ಹೆಚ್ಚು ಜನ ಕೂದಲು ಕಳೆದ್ಕೊಂಡಿದ್ರು.. ಅದ್ಹೇನೆ ಇರಲಿ, ಉಗುರು ಉದುರುತ್ತಿರೋದು ಮಾತ್ರ ಗ್ರಾಮಗಳಲ್ಲಿ ಆತಂಕ ಹೆಚ್ಚಿಸಿದೆ.
ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ಸಾವಿರ, ಸಾವಿರ ಕೋಟಿ ಒಡೆಯ.. ರಿಕ್ಕಿ ಓದಿದ್ದು ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ