/newsfirstlive-kannada/media/post_attachments/wp-content/uploads/2025/03/Bumrah.jpg)
ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ. ಇವರು ಗಾಯಕ್ಕೆ ತುತ್ತಾದ ಕಾರಣ ಇನ್ನೂ ಚೇತರಿಸಿಕೊಳ್ಳುತ್ತಲೇ ಇದ್ದಾರೆ. ಇಷ್ಟೇ ಅಲ್ಲ ಐಪಿಎಲ್ ಆರಂಭಿಕ ಪಂದ್ಯಗಳನ್ನು ಆಡೋದು ಡೌಟ್ ಆಗಿದೆ. ಇದು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಗ್ ಶಾಕ್ ಆಗಿದೆ.
ಅಸಲಿಗೆ ಆಗಿದ್ದೇನು?
ಭಾರತ ಕ್ರಿಕೆಟ್ ತಂಡದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ. ಇವರು ಗಾಯದ ಸಮಸ್ಯೆಯಿಂದ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ನಡೆದಿದ್ರು. ಈಗ ಬುಮ್ರಾ ಚೇತರಿಕೆ ಕಾಣುತ್ತಿದ್ದಾರೆ. ಬುಮ್ರಾ ರಾಷ್ಟ್ರೀಯ ಕ್ರಿಕೆಟ್ ಅಕಡಾಮಿನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಏಪ್ರಿಲ್‌ನಲ್ಲಿ ಮುಂಬೈ ತಂಡವನ್ನು ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬೈ ಇಂಡಿಯನ್ ತನ್ನ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾರ್ಚ್ 23ನೇ ತಾರೀಕು ಆಡಲಿದೆ. ಗುಜರಾತ್ ಟೈಟಾನ್ಸ್ ವಿರುದ್ಧ (ಮಾರ್ಚ್ 29) ಮತ್ತು ಕೆಕೆಆರ್ ವಿರುದ್ಧ (ಮಾರ್ಚ್ 31) ಆಡಲಿದೆ. ಈ ಮೂರು ಪಂದ್ಯಗಳಿಗೂ ಬುಮ್ರಾ ಅಲಭ್ಯರಾಗಲಿದ್ದಾರೆ.
ಬುಮ್ರಾ ಬದಲಿಗೆ ಯಾರು?
ಇನ್ನು, ಬುಮ್ರಾ ಅನುಪಸ್ಥಿತಿಯಲ್ಲಿ ಮುಂಬೈ ತಂಡದ ಬೌಲಿಂಗ್ ವಿಭಾಗವನ್ನು ಟ್ರೆಂಟ್ ಬೋಲ್ಟ್ ಹಾಗೂ ದೀಪಕ್ ಚಹಾರ್ ಲೀಡ್ ಮಾಡಲಿದ್ದಾರೆ. ಬುಮ್ರಾ ಸ್ಥಾನ ತುಂಬಲು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾರ್ಬಿನ್ ಬಾಷ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಬುಮ್ರಾ ಇತ್ತೀಚಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಜುರಿಗೆ ಒಳಗಾದರು.
ಇದನ್ನೂ ಓದಿ:ತೂಕ ಹೆಚ್ಚಾಗ್ತೀನಿ ಎಂದು ತಿನ್ನೋದು ಬಿಟ್ಟಿದ್ದೀರಾ? ಹಾಗಾದ್ರೆ ಈ ಆಹಾರ ಸೇವಿಸಿ ಫಿಟ್ ಆಗಿರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ