ಚಾಂಪಿಯನ್ಸ್​ ಟ್ರೋಫಿ: ಟೀಮ್​ ಇಂಡಿಯಾದಿಂದ ಹೊರಬಿದ್ದ ಸ್ಟಾರ್​​ ವೇಗಿ ಬುಮ್ರಾ

author-image
Ganesh Nachikethu
Updated On
ಬಾಂಗ್ಲಾ ವಿರುದ್ಧ T20 ಸರಣಿ; ಟೀಮ್​ ಇಂಡಿಯಾಗೆ ಸಿಕ್ಕೇಬಿಟ್ರು ಜೂನಿಯರ್​ ಬುಮ್ರಾ!
Advertisment
  • ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ
  • ಟೂರ್ನಿ ಫೈನಲ್​​​​ ಪಂದ್ಯ ಮಾರ್ಚ್ 9ನೇ ತಾರೀಕು ನಡೆಯಲಿದೆ
  • ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಜಸ್ಪ್ರೀತ್ ಬುಮ್ರಾ..!

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಫೆಬ್ರವರಿ 19ನೇ ತಾರೀಕಿನಿಂದ ಶುರುವಾಗಲಿದೆ. ಈ ಮೆಗಾ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಲಿದೆ. ಟೂರ್ನಿಯ ಫೈನಲ್​​​​ ಪಂದ್ಯ ಮಾರ್ಚ್ 9ನೇ ತಾರೀಕು ನಡೆಯಲಿದೆ.

ಇನ್ನು, ಟೀಮ್ ಇಂಡಿಯಾದ ಎಲ್ಲಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇದಕ್ಕೂ ಮುನ್ನ ಟೀಮ್​ ಇಂಡಿಯಾಗೆ ಆಘಾತದ ಸುದ್ದಿ ಒಂದಿದೆ. ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿ ಆಡೋ ಬಗ್ಗೆ ಡೌಟ್​ ಇದೆ. ಇವರು ಗ್ರೂಪ್ ಹಂತದ ಪಂದ್ಯ ಆಡುವುದು ಬಹುತೇಕ ಅನುಮಾನ ಎಂದು ತಿಳಿದು ಬಂದಿದೆ.

ಬುಮ್ರಾಗೆ ಗಂಭೀರ ಗಾಯ

ಇತ್ತೀಚೆಗೆ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯಿತು. ಇವರು 5ನೇ ಟೆಸ್ಟ್ ಪಂದ್ಯದಲ್ಲಿ ತೀವ್ರವಾಗಿ ಗಾಯಗೊಂಡರು. ಹಾಗಾಗಿ ಸಿಡ್ನಿ ಟೆಸ್ಟ್​ ಪಂದ್ಯ ನಡೆಯುತ್ತಿರುವ ಹೊತ್ತಲ್ಲೇ ಮೈದಾನದಿಂದ ಹೊರ ನಡೆದರು. ಈಗ ಬುಮ್ರಾ ಫಿಟ್ನೆಸ್​​ ಬಗ್ಗೆ ಆತಂಕ ಶುರುವಾಗಿದೆ.

ಗ್ರೂಪ್​​ ಹಂತದ ಪಂದ್ಯಗಳಿಂದ ಬುಮ್ರಾ ಔಟ್​​

ಬುಮ್ರಾ ಚಾಂಪಿಯನ್ಸ್ ಟ್ರೋಫಿಯ ಗೂಪ್ರ್ ಹಂತದ ಪಂದ್ಯ ಆಡೋದು ಡೌಟ್. ಇವರು ಬೆನ್ನಿನ ಊತ ಮತ್ತು ಸ್ನಾಯು ಸೆಳೆತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಬುಮ್ರಾ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಇದ್ದಾರೆ.

ಎನ್‌ಸಿಎಗೆ ಬುಮ್ರಾ!

ಇನ್ನು, ಸ್ಟಾರ್​ ವೇಗಿ ಬುಮ್ರಾ ಎನ್‌ಸಿಎಗೆ ಹೋಗಲಿದ್ದಾರೆ. ಮಾರ್ಚ್ ಮೊದಲ ವಾರದ ವೇಳೆಗೆ ಇವರು ಸಂಪೂರ್ಣ ಫಿಟ್​​ ಆಗುವ ನಿರೀಕ್ಷೆ ಇದೆ. ಬುಮ್ರಾ ಚಾಂಪಿಯನ್ಸ್ ಟ್ರೋಫಿಯ ಟೀಮ್ ಇಂಡಿಯಾದ 15 ಸದಸ್ಯರ ತಂಡದ ಭಾಗವಾಗಿದ್ದಾರೆ. ಹಾಗಾಗಿ ಬಿಸಿಸಿಐ ಆಯ್ಕೆಗಾರರು ಬುಮ್ರಾ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

ಇದನ್ನೂ ಓದಿ:ಬೆಳಗ್ಗೆ ತಿಂಡಿ ತಿನ್ನೋದು ಮರೆಯುತ್ತಿದ್ದೀರಾ? ಹಾಗಾದ್ರೆ ಸಕ್ಕರೆ ಕಾಯಿಲೆ ಬರೋದು ಗ್ಯಾರಂಟಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment