Advertisment

ಟೀಮ್​​ ಇಂಡಿಯಾಗೆ ಬಿಗ್​​ ಶಾಕ್​​; 3ನೇ ಟೆಸ್ಟ್​​ನಿಂದ ಸ್ಟಾರ್​ ವೇಗಿ ಬುಮ್ರಾ ಔಟ್​​​

author-image
Ganesh Nachikethu
Updated On
ಟೀಮ್​​ ಇಂಡಿಯಾಗೆ ಬಿಗ್​​ ಶಾಕ್​​; 3ನೇ ಟೆಸ್ಟ್​​ನಿಂದ ಸ್ಟಾರ್​ ವೇಗಿ ಬುಮ್ರಾ ಔಟ್​​​
Advertisment
  • ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​ ನಡುವಿನ 3ನೇ ಟೆಸ್ಟ್
  • ಮುಂಬೈನ ವಾಂಖೆಡೆ ಸ್ಟೇಡಿಯಮ್​​ನಲ್ಲಿ ನಡೆಯಲಿರೋ ಪಂದ್ಯ
  • ಮೂರನೇ ಟೆಸ್ಟ್​ ಪಂದ್ಯದಿಂದ ಸ್ಟಾರ್​ ಪ್ಲೇಯರ್​ ಬುಮ್ರಾ ಔಟ್!

ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​ ನಡುವಿನ 3ನೇ ಟೆಸ್ಟ್​​ ಪಂದ್ಯಕ್ಕೆ ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ ಸಾಕ್ಷಿಯಾಗಲಿದೆ. ಈ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಅನಿವಾರ್ಯ ಆಗಿರೋ ಕಾರಣ ಎಲ್ಲರ ಚಿತ್ತ ಪಂದ್ಯದತ್ತ ನೆಟ್ಟಿದೆ. ನ್ಯೂಜಿಲೆಂಡ್​​​ ವಿರುದ್ಧ ಕ್ಲೀನ್​ ಸ್ವೀಪ್ ಸೋಲಿನಿಂದ ಬಚಾವ್​ ಆಗಲು ಟೀಮ್​ ಇಂಡಿಯಾ ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಆಘಾತದ ಸುದ್ದಿ ಒಂದಿದೆ.

Advertisment

3ನೇ ಟೆಸ್ಟ್​ನಿಂದ ಬೂಮ್ರಾ ಔಟ್​​

ಟೀಮ್​ ಇಂಡಿಯಾ ಪರ ಬ್ಯಾಕ್​ ಟು ಬ್ಯಾಕ್​​ ಪಂದ್ಯಗಳನ್ನು ಆಡುತ್ತಿರೋ ಟೆಸ್ಟ್‌ ತಂಡದ ಉಪನಾಯಕ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಅವರನ್ನು ಕರೆತರುವ ಆಲೋಚನೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.

ವರ್ಕ್​​ಲೋಡ್​ ಕಡಿಮೆ ಮಾಡಲು ನಿರ್ಧಾರ

ಗಾಯದ ಸಮಸ್ಯೆಯಿಂದ ಕಮ್‌ಬ್ಯಾಕ್‌ ಮಾಡಿದ ನಂತರ ಬುಮ್ರಾ ಏಕದಿನ ಮತ್ತು ಟಿ20 ವಿಶ್ವಕಪ್‌ ಸೇರಿ ಹಲವು ಟೂರ್ನಿಗಳು ಆಡಿದ್ದಾರೆ. ನಿರಂತರ ಕ್ರಿಕೆಟ್‌ ಆಡುತ್ತಿರುವ ಬುಮ್ರಾ ವರ್ಕ್‌ ಲೋಡ್‌ ಕಡಿಮೆ ಮಾಡುವ ನಿರ್ಧಾರ ಬಿಸಿಸಿಐನದ್ದು.

ಬುಮ್ರಾ ಬದಲಿಗೆ ಹರ್ಷಿತ್ ರಾಣಾ ಎಂಟ್ರಿ

ನ್ಯೂಜಿಲೆಂಡ್​​ ವಿರುದ್ಧದ ಮಹತ್ವದ ಕೊನೆಯ ಟೆಸ್ಟ್​ ಪಂದ್ಯಕ್ಕಾಗಿ ಟೀಮ್​ ಇಂಡಿಯಾಗೆ ಎಂಟ್ರಿ ನೀಡಿರೋ ಸ್ಫೋಟಕ ಬೌಲರ್​ ಯಾರು ಅಲ್ಲ, ಹರ್ಷಿತ್​ ರಾಣಾ. ಇವರು ಈಗಾಗಲೇ ನೆಟ್‌ ಬೌಲರ್ ಆಗಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಇತ್ತೀಚೆಗೆ ರಣಜಿ ಡಿ ಗುಂಪಿನ ಪಂದ್ಯದಲ್ಲಿ ಮನಮೋಹಕ ಪ್ರದರ್ಶನ ನೀಡಿದ ಈ ಪ್ಲೇಯರ್‌ ಈಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Advertisment

ರಣಜಿಯಲ್ಲಿ ಮಿಂಚಿದ್ದ ಹರ್ಷಿತ್​​ ರಾಣಾ

ಇತ್ತೀಚೆಗೆ ನಡೆದ ರಣಜಿ ಟೂರ್ನಿಯ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಹರ್ಷಿತ್ ರಾಣಾ ಅಮೋಘ ಪ್ರದರ್ಶನ ನೀಡಿದ್ರು. ಮೊದಲನೇ ಇನ್ನಿಂಗ್ಸ್​ನಲ್ಲಿ 80 ರನ್​ ನೀಡಿ 5 ವಿಕೆಟ್​​ ಕಬಳಿಸಿದ್ದ ರಾಣಾ ಬ್ಯಾಟ್​​ನಿಂದಲೂ ಕೊಡುಗೆ ನೀಡಿದ್ರು. 78 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 59 ರನ್‌ ಬಾರಿಸಿ ಔಟ್ ಆದರು. 2ನೇ ಇನಿಂಗ್ಸ್‌ನಲ್ಲೂ ಹರ್ಷಿತ್ ರಾಣಾ 61 ರನ್‌ ನೀಡಿ 2 ವಿಕೆಟ್‌ ಪಡೆದಿದ್ರು. ಹೀಗಾಗಿ ಇವರಿಗೆ ಟೀಮ್​ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment