ಟೀಂ ಇಂಡಿಯಾಗೆ ಕೈಕೊಟ್ಟ ಜಸ್​ಪ್ರಿತ್ ಬೂಮ್ರಾ.. ಗಿಲ್, ಗಂಭೀರ್​ಗೆ ಬಿಗ್​ ಚಾಲೆಂಜ್..!

author-image
Ganesh
Updated On
ಗೆದ್ದರಷ್ಟೇ ಸರಣಿ ಜೀವಂತ! ಇತಿಹಾಸ ಬೇರೆನೇ ಹೇಳ್ತಿದೆ.. ಇಲ್ಲಿ ನುಗ್ಗಿ ಹೊಡೆದ್ರೆನೇ ಚರಿತ್ರೆ..!
Advertisment
  • ಎಡ್ಜ್​​ಬಾಸ್ಟನ್​ ಟೆಸ್ಟ್​ಗೂ ಮುನ್ನ ಟೆನ್ಶನ್.. ಟೆನ್ಶನ್!
  • ಲೀಡ್ಸ್​ನಲ್ಲೇ ಬಯಲಾಗಿದೆ ಗಿಲ್ ಪಡೆಯ ಬೌಲಿಂಗ್ ಸ್ಟ್ರೆಂಥ್
  • ಟೀಮ್ ಇಂಡಿಯಾ ಬಗ್ಗೆ ಇತಿಹಾಸ ಹೇಳ್ತಿದೆ ಕರಾಳ ಕಥೆ

ಇಂಡೋ-ಇಂಗ್ಲೆಂಡ್ ಟೆಸ್ಟ್​ ಸರಣಿಯ 2ನೇ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​​ಬಾಸ್ಟನ್​ನಲ್ಲಿ ನಡೆಯಲಿರುವ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಕಮ್​ಬ್ಯಾಕ್ ನಿರೀಕ್ಷೆಯಲ್ಲಿದೆ. ಆದರೆ ಟೀಮ್ ಇಂಡಿಯಾಗೆ ಗೆಲುವು ಅಷ್ಟು ಸುಲಭವಿಲ್ಲ. ಯಾಕೆಂದರೆ ಬೂಮ್ರಾ ಬಲ ಟೀಮ್​ ಇಂಡಿಯಾಗಿಲ್ಲ!

2ನೇ ಟೆಸ್ಟ್​ನಿಂದ ಬೂಮ್ರಾಗೆ ರೆಸ್ಟ್​

ವರ್ಕ್​ಲೋಡ್ ಮ್ಯಾನೇಜ್​ಮೆಂಟ್​ ಸಲುವಾಗಿ ಬೂಮ್ರಾ 3 ಪಂದ್ಯಗಳಲ್ಲಷ್ಟೇ ಆಡ್ತಾರೆ ಎನ್ನಲಾಗಿತ್ತು. ಟೆಸ್ಟ್ ಸರಣಿ ತಂಡ ಪ್ರಕಟಿಸಿದಾಗಲೇ ಸೆಲೆಕ್ಷನ್ ಕಮಿಟಿಯೇ ಈ ಕುರಿತು ತಿಳಿಸಿತ್ತು. ಅದರಂತೆಯೇ ಜಸ್​ಪ್ರಿತ್ ಬೂಮ್ರಾ, ಮುಂದಿನ ಟೆಸ್ಟ್​​ನಿಂದ ಹೊರಗುಳಿಯಲಿದ್ದಾರೆ.

ಬೂಮ್ರಾ ಲಭ್ಯತೆಯಲ್ಲೇ ಟೀಮ್ ಇಂಡಿಯಾಗೆ ಸೋಲು

ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಬ್ಯಾಟಿಂಗ್ ವರ್ಸಸ್ ಇಂಡಿಯನ್ ಬೌಲಿಂಗ್ ಅಟ್ಯಾಕ್​ನ ಬಗ್ಗೆ ಚರ್ಚೆ ನಡೆದಿತ್ತು. ಬೂಮ್ರಾ ಒಬ್ಬರೇ ಭಾರತದ ಬಲ ಎನ್ನಲಾಗಿತ್ತು. ಆ ಮಾತಿನಂತೆ ಲೀಡ್ಸ್​ನಲ್ಲಿ ಜಸ್​ಪ್ರೀತ್ ಬೂಮ್ರಾ ಮಾರಕ ದಾಳಿ ನಡೆಸಿದ್ರು. ಉಳಿದವರಿಂದ ಸಾಥ್​ ಸಿಗಲಿಲ್ಲ. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್, ಕನ್ನಡಿಗ ಪ್ರಸಿದ್ಧ್ ಕೃಷ್ಣರ ಸ್ಪೆಲ್​ಗಳು, ಟೀಮ್ ಇಂಡಿಯಾದ ಬೌಲಿಂಗ್ ವೀಕ್​ನೆಸ್ ಎಕ್ಸ್​​ಪೋಸ್​ ಮಾಡಿವೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ.. ಜಿಲ್ಲಾಧಿಕಾರಿಗಳಿಂದ ಮಹತ್ವದ ಸೂಚನೆ..!

ತಂಡಕ್ಕೆ ಸಂಕಷ್ಟ

ಲೀಡ್ಸ್​ ಟೆಸ್ಟ್​ನಲ್ಲಿ ನಡೆದಿದ್ದು ಜಸ್​ಪ್ರೀತ್ ಬೂಮ್ರಾ ಶೋ. ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಬೇಟೆಯಾಡಿದ್ದ ಬೂಮ್ರಾ, 2ನೇ ಇನ್ನಿಂಗ್ಸ್​ನಲ್ಲಿ ವಿಕೆಟ್​ ಲೆಸ್ ಆದರು. ಎಫೆಕ್ಟೀವ್ ಸ್ಪೆಲ್​ ಹಾಕಿದ್ರು. ಎದುರಾಳಿ ಇಂಗ್ಲೆಂಡ್ ಬ್ಯಾಟರ್​ಗಳ ಮೇಲೆ ಒತ್ತಡ ಹೇರಿದ್ರು. ಮೊದಲ ಪಂದ್ಯದಲ್ಲಿ ಭಾರತದ ಬೌಲಿಂಗ್​ಗೆ ಏಕಾಂಗಿಯಾಗಿ ಬಲ ತುಂಬಿದ ಬೂಮ್ರಾ ಮುಂದಿನ ಪಂದ್ಯವನ್ನ ಆಡಲ್ಲ.

ಬೂಮ್ರಾ ಇಲ್ದೆ ಗೆಲುವು ಕಷ್ಟ..!

ಲೀಡ್ಸ್​ನಲ್ಲಿ ಸೋತಿರುವ ಟೀಮ್ ಇಂಡಿಯಾಗೆ ಎಡ್ಜ್​ಬಾಸ್ಟನ್​​​ನಲ್ಲಿ ಗೆಲುವು ಅನಿವಾರ್ಯ. ಬೂಮ್ರಾ ಇಲ್ಲದ ಟೀಮ್ ಇಂಡಿಯಾಗೆ ಗೆಲುವು ಸುಲಭದ್ದಿಲ್ಲ. ಮತ್ತೊಂದೆಡೆ ಎಡ್ಜ್​ಬಾಸ್ಟನ್​ನಲ್ಲಿ 58 ವರ್ಷಗಳಿಂದ ಟೀಮ್ ಇಂಡಿಯಾ ಗೆದ್ದೇ ಇಲ್ಲ. ಈ ಮೈದಾನದಲ್ಲಿ ಆಡಿರುವ 8 ಪಂದ್ಯಗಳ ಪೈಕಿ 7ರಲ್ಲಿ ಹೀನಾಯವಾಗಿ ಸೋತಿರೋ ಟೀಮ್ ಇಂಡಿಯಾ, ಒಂದೇ ಒಂದು ಪಂದ್ಯದಲ್ಲಷ್ಟೇ ಡ್ರಾ ಕಂಡಿದೆ. ಜಸ್​​ಪ್ರಿತ್​ ಬೂಮ್ರಾ ಇಲ್ದೇ ಬಡವಾಗಲಿರುವ ಟೀಮ್ ಇಂಡಿಯಾ, ಮುಂದೆ ಇಂಗ್ಲೆಂಡ್​​ ಗೆಲ್ಲೋ ಫೇವರಿಟ್ ಅನಿಸಿದೆ.

ಇದನ್ನೂ ಓದಿ: ನಾಯಕ ಮಾಡಿದ ತಪ್ಪುಗಳೇ ಹೊರೆಯಾದ್ವು.. ಪ್ಲಾನ್​-ಬಿ ಇಲ್ಲದೆ ಗಿಲ್ ಇದೆಂಥ ಯಡವಟ್ಟು..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment