ರೋಹಿತ್ ಬಳಿಕ ಟೀಮ್ ಇಂಡಿಯಾದ ಕ್ಯಾಪ್ಟನ್​ ಯಾರು.. ಮಾಜಿ ಪ್ಲೇಯರ್ ಹೇಳಿದ್ದು ಏನು?

author-image
Bheemappa
Updated On
ರೋಹಿತ್ ಬಳಿಕ ಟೀಮ್ ಇಂಡಿಯಾದ ಕ್ಯಾಪ್ಟನ್​ ಯಾರು.. ಮಾಜಿ ಪ್ಲೇಯರ್ ಹೇಳಿದ್ದು ಏನು?
Advertisment
  • ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದರಿಂದ ನಾಯಕ ಸ್ಥಾನ ಖಾಲಿ
  • ಈಗಾಗಲೇ ನಾಯಕನಾಗಿ ಬೂಮ್ರಾ ಎಷ್ಟು ಪಂದ್ಯಗಳನ್ನು ಆಡಿದ್ದಾ?
  • ಭಾರತದ ಟೆಸ್ಟ್​ ತಂಡದ ನಾಯಕ ಯಾರು ಎನ್ನುವುದರ ಬಗ್ಗೆ ಚರ್ಚೆ

ಟೀಮ್ ಇಂಡಿಯಾದ ಟೆಸ್ಟ್​ ಕ್ರಿಕೆಟ್​ನ ನಾಯಕತ್ವ ಸ್ಥಾನಕ್ಕೆ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರಿತ್​ ಬೂಮ್ರಾ ಉತ್ತಮ ಆಯ್ಕೆ ಎಂದು ಮಾಜಿ ಕ್ರಿಕೆಟರ್​ರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ರೋಹಿತ್ ಶರ್ಮಾ ಅವರು ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಬೂಮ್ರಾ ಹೆಸರನ್ನು ಸೂಚಿಸಲಾಗಿದೆ.

1983ರಲ್ಲಿ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರನಾಗಿದ್ದ ಮದನ್​ ಲಾಲ್ ಅವರು ಟೀಮ್ ಇಂಡಿಯಾದ ಟೆಸ್ಟ್​ ಕ್ಯಾಪ್ಟನ್​ ಸ್ಥಾನದ ಕುರಿತು ಮಾತನಾಡಿದ್ದಾರೆ. ರೋಹಿತ್ ಶರ್ಮಾ ಅವರು ಟೆಸ್ಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದರಿಂದ ಸದ್ಯ ಭಾರತದ ಟೆಸ್ಟ್​ ಕ್ರಿಕೆಟ್​ ತಂಡದ ನಾಯಕ ಸ್ಥಾನ ಖಾಲಿ ಆಗಿದೆ. ಹೀಗಾಗಿ ಈ ಸ್ಥಾನಕ್ಕೆ ಜಸ್​ಪ್ರಿತ್ ಬೂಮ್ರಾ ಅವರನ್ನು ನೇಮಕ ಮಾಡುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಭಾರತದ ಟೆಸ್ಟ್​ ಕ್ರಿಕೆಟ್​ ತಂಡದ ನಾಯಕನಾಗಲು ಬೂಮ್ರಾ ಸರಿಯಾದ ಆಟಗಾರ. ಫಿಟ್ನೆಸ್​ ದೊಡ್ಡ ವಿಷಯವಲ್ಲ. ಅದು ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲ. ಫಿಟ್​ ಆಗಿದ್ದರೇ ಅವರೇ ಮೊದಲ ಆಯ್ಕೆ ಎಂದು ಮಾಜಿ ಕ್ರಿಕೆಟರ್​ ಮದನ್ ಲಾಲ್ ಅವರು ಹೇಳಿದ್ದಾರೆ. ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡಿದ ಮೇಲೆ ನಾಯಕ ಯಾರೆಂಬುದರ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಪಾಕ್​ನ 500 ಡ್ರೋಣ್ ಹೊಡೆದುರುಳಿಸಿದ್ದು ಹೇಗೆ..? ಭಾರತದ ರಕ್ಷಣಾ ಮೂಲಗಳಿಂದ ವಿಡಿಯೋ ರಿಲೀಸ್

publive-image

ಬೂಮ್ರಾ ಅವರಿಗೆ ಈಗಾಗಲೇ ನಾಯಕತ್ವದ ಅನುಭವ ಇದೆ. ಹೊಸದಾಗಿ ಏನು ಹೇಳುವುದು ಅವಶ್ಯಕತೆ ಇರುವುದಿಲ್ಲ. 2022ರಲ್ಲಿ ಬರ್ಮಿಂಗ್ಹ್ಯಾಮ್​ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕೊನೆ ಪಂದ್ಯದ ನಾಯಕತ್ವವನ್ನು ಬೂಮ್ರಾ ವಹಿಸಿಕೊಂಡಿದ್ದರು. ಇದಾದ ಮೇಲೆ 2024-25ರಲ್ಲಿ ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಎರಡು ಪಂದ್ಯಗಳಿಗೆ ಕ್ಯಾಪ್ಟನ್​ ಆಗಿ ಸಕ್ಸಸ್​ ಕಂಡಿದ್ದಾರೆ.

ಜಸ್​ಪ್ರಿತ್ ಬೂಮ್ರಾ ಅವರು ನಾಯಕನಾಗಿ ಇದುವರೆಗೆ 15 ವಿಕೆಟ್​ಗಳನ್ನು ಉರುಳಿಸಿ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದು ಅಲ್ಲದೇ ಬಾರ್ಡರ್​ ಗವಾಸ್ಕರ್ ಸರಣಿಯ ಪರ್ತ್​ ಟೆಸ್ಟ್​ನಲ್ಲಿ 18 ಓವರ್​ ಬೌಲಿಂಗ್ ಮಾಡಿ, 6 ಓವರ್ ಮೇಡಿನ್ ಮಾಡಿದ್ದರು. ಕೇವಲ 30 ರನ್​ ನೀಡಿ ಆಸ್ಟ್ರೇಲಿಯಾದ ಪ್ರಮುಖ 5 ವಿಕೆಟ್​ಗಳನ್ನು ಉರುಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment