ಇಂಗ್ಲೆಂಡ್​ ಬ್ಯಾಟರ್ಸ್​ ಬೆನ್ನೆಲುಬು ಮುರಿದ ಬುಮ್ರಾ.. ಆಲೌಟ್​, ಮುಂಬೈಕರ್​​ಗೆ ಮತ್ತೊಮ್ಮೆ 5 ವಿಕೆಟ್​ ಗೊಂಚಲು!

author-image
Bheemappa
Updated On
ಇಂಗ್ಲೆಂಡ್​ ಬ್ಯಾಟರ್ಸ್​ ಬೆನ್ನೆಲುಬು ಮುರಿದ ಬುಮ್ರಾ.. ಆಲೌಟ್​, ಮುಂಬೈಕರ್​​ಗೆ ಮತ್ತೊಮ್ಮೆ 5 ವಿಕೆಟ್​ ಗೊಂಚಲು!
Advertisment
  • ಬುಮ್ರಾ ಬೌಲಿಂಗ್​ಗೆ ಉತ್ತಮ ಸಾಥ್ ಕೊಟ್ಟ ಮೊಹಮ್ಮದ್ ಸಿರಾಜ್
  • ಎದುರಾಳಿನ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಭಾರತ ತಂಡ ಯಶಸ್ವಿ
  • ನಾಲ್ವರು ಬ್ಯಾಟ್ಸ್​​ಮನ್​ಗಳನ್ನ ಕ್ಲೀನ್ ಬೋಲ್ಡ್​ ಮಾಡಿರುವ ಬುಮ್ರಾ

ಮೂರನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡ​ ಕೇವಲ 387 ರನ್​ಗಳಿಗೆ ಆಲೌಟ್​ ಆಗಿದೆ. ಟೀಮ್ ಇಂಡಿಯಾ ಪರ ಬುಮ್ರಾ ಬೌಲಿಂಗ್​ ಎದುರಿಸಲು ಆಂಗ್ಲ ಬ್ಯಾಟ್ಸ್​ಮನ್​ಗಳು ದೊಡ್ಡ ಹರಸಾಹಸವೇ ಪಟ್ಟರು ಎನ್ನಬಹುದು.

ಇಂಗ್ಲೆಂಡ್​ನ ಲಾರ್ಡ್ಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಬೆನ್​ ಸ್ಟೋಕ್ಸ್​ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಅವರ ನಿರೀಕ್ಷೆಯಂತೆ ಇಂಗ್ಲೆಂಡ್ ಆಟಗಾರರು ಪ್ರದರ್ಶನ ತೋರಲಿಲ್ಲ ಎನ್ನಬಹುದು. ಏಕೆಂದರೆ ಟೆಸ್ಟ್​ನ 2ನೇ ದಿನದಾಟದ ಅರ್ಧದಲ್ಲೇ ಆಲೌಟ್​ ಆಗಿದ್ದಾರೆ. ಮೊದಲ ದಿನದ ಆರಂಭದಲ್ಲೇ ಬಿಗ್ ಶಾಕ್ ಕೊಟ್ಟಿದ್ದ ನಿತೀಶ್ ಕುಮಾರ್ ರೆಡ್ಡಿ, ಇಬ್ಬರು ಓಪನರ್ಸ್​ಗೆ ಪೆವಿಲಿಯನ್​ ದಾರಿ ತೋರಿಸಿದ್ದರು.

ಇದನ್ನೂ ಓದಿ: ಶಿವಣ್ಣ ಬರ್ತ್​ಡೇಗೆ ಗುಡ್​ನ್ಯೂಸ್​.. ಶಿವರಾಜ್​ ಕುಮಾರ್​ಗೆ ಮತ್ತೆ ದುನಿಯಾ ಸೂರಿ ಡೈರೆಕ್ಷನ್​

publive-image

ಮಧ್ಯಮ ಕ್ರಮಾಂಕದಲ್ಲಿ ಒಳ್ಳೆಯ ಬ್ಯಾಟಿಂಗ್ ಮಾಡಿದ ಆಲಿ ಪೋಪ್ 44 ಹಾಗೂ ಜೋ ರೂಟ್​ ಶತಕ ಟೀಮ್ ಇಂಡಿಯಾಕ್ಕೆ ಕೊಂಚ ಭಾರವಾಯಿತು. ಆದ್ರೆ ಪೋಪ್​ಗೆ ಜಡೇಜಾ ಬ್ರೇಕ್ ಹಾಕಿದ್ರೆ, ರೂಟ್​ಗೆ ಬುಮ್ರಾ ಬಿಗ್ ಶಾಕ್ ಕೊಟ್ಟರು. ಇದಾದ ಮೇಲೆ ಬ್ರೂಕ್ 11 ಹಾಗೂ ಸ್ಟೋಕ್ಸ್​ 44 ರನ್​ಗೆ ಬುಮ್ರಾ ಕ್ಲೀನ್ ಬೋಲ್ಡ್ ಮಾಡಿ ಸಂಭ್ರಮಿಸಿದರು. ಮೊಹಮ್ಮದ್ ಸಿರಾಜ್​ ಕೂಡ ಭಯಾನಕ ಬೌಲಿಂಗ್ ಮಾಡಿ ಎರಡು ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.

ಬೌಲಿಂಗ್​ನಲ್ಲಿ ಬಿರುಸಿನ ದಾಳಿ ಮಾಡಿದ ಬುಮ್ರಾ ಇನ್ನಿಂಗ್ಸ್​ನಲ್ಲಿ ಒಟ್ಟು ನಾಲ್ವರನ್ನು ಕ್ಲೀನ್ ಬೋಲ್ಡ್​ ಮಾಡಿರುವುದು ವಿಶೇಷ ಎನಿಸಿತು. ಇದರಿಂದ ಬುಮ್ರಾ ಅವರು ಈ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಗೊಂಚಲು ಪಡೆದು ಆರ್ಭಟಿಸಿದರು. ಸಿರಾಜ್ 2 ಹಾಗೂ ನಿತೀಶ್ ಕುಮಾರ್ ರೆಡ್ಡಿ 2 ವಿಕೆಟ್​ ಕಬಳಿಸಿದರು. ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದು ಆಂಗ್ಲರನ್ನ ಆಲೌಟ್ ಮಾಡಿದರು. ಇದರಿಂದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 112.3 ಓವರ್​ಗಳಲ್ಲಿ 387 ರನ್​ಗೆ ಆಲೌಟ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment