ಟೀಮ್​ ಇಂಡಿಯಾದಲ್ಲಿ ಅಚ್ಚರಿ ಬೆಳವಣಿಗೆ; ರೋಹಿತ್​​ ಅಲ್ಲ, ಬುಮ್ರಾ ಟೆಸ್ಟ್​ ಕ್ಯಾಪ್ಟನ್​​!

author-image
Ganesh Nachikethu
Updated On
ಟೀಮ್​ ಇಂಡಿಯಾದಲ್ಲಿ ಅಚ್ಚರಿ ಬೆಳವಣಿಗೆ; ರೋಹಿತ್​​ ಅಲ್ಲ, ಬುಮ್ರಾ ಟೆಸ್ಟ್​ ಕ್ಯಾಪ್ಟನ್​​!
Advertisment
  • ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿ
  • ನಾಳೆಯಿಂದ ಪರ್ತ್​​ ಸ್ಟೇಡಿಯಮ್​​ನಲ್ಲಿ ಮೊದಲ ಟೆಸ್ಟ್​ ಪಂದ್ಯ ಶುರು
  • ಜಸ್ಪ್ರೀತ್ ಬುಮ್ರಾಗೆ ಭಾರತ ಟೆಸ್ಟ್​ ತಂಡದ ನಾಯಕತ್ವದ ಜವಾಬ್ದಾರಿ

ಬರೋಬ್ಬರಿ 24 ವರ್ಷಗಳ ಬಳಿಕ ಮಹತ್ವದ ಟೆಸ್ಟ್​ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್​​ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿತ್ತು. 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್​ವಾಶ್​ ಆಗಿತ್ತು. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳು ಸೋತಿರುವುದು ಇದೇ ಮೊದಲಾಗಿತ್ತು.

ಹೀನಾಯ ಸೋಲಿನ ಬೆನ್ನಲ್ಲೇ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಅಧ್ಯಕ್ಷ ಅಜಿತ್​ ಅಗರ್ಕರ್​​​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಮುಖ್ಯ ಕೋಚ್​​ ಗೌತಮ್​ ಗಂಭೀರ್​​​ ಸಭೆ ನಡೆಸಿ ​ಸುದೀರ್ಘ ಚರ್ಚೆ ಮಾಡಿದ್ರು. ಹೇಗಾದ್ರೂ ಮಾಡಿ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಂ ಇಂಡಿಯಾ ಅರ್ಹತೆ ಪಡೆಯಬೇಕು ಎಂದು ಚರ್ಚಿಸಿದ್ರು. ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್​​ ಪಂದ್ಯಗಳ ಸರಣಿ ಗೆಲ್ಲಲೇಬೇಕು. ಅದರಲ್ಲೂ 4 ಪಂದ್ಯ ಗೆದ್ರೆ ಮಾತ್ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶ ಸಿಗಲಿದೆ ಎಂಬುದು ಒಟ್ಟಾರೆ ಚರ್ಚೆ.

ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸರಣಿ ನಾಳೆಯಿಂದಲೇ ಶುರುವಾಗಲಿದೆ. ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಟ್ರೋಪಿ ಗೆದ್ದಿತ್ತು. 2016 ರಿಂದಲೂ ಟೀಮ್​ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುತ್ತಲೇ ಬಂದಿದೆ. ಟೀಮ್​ ಇಂಡಿಯಾ ಈಗಿರೋ ಪರಿಸ್ಥಿತಿ ನೋಡಿದ್ರೆ ಗೆಲ್ಲೋದು ಕಷ್ಟವಾಗಿದೆ. ಎಷ್ಟೇ ಕಷ್ಟ ಆದ್ರೂ ಪರ್ವಾಗಿಲ್ಲ ಆಸೀಸ್ ಸರಣಿ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಸಜ್ಜಾಗಿದೆ.

ತಂಡದಿಂದ ರೋಹಿತ್​ ಶರ್ಮಾ ಔಟ್​​

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಭಾರೀ ಬದಲಾವಣೆ ಆಗಲಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ರೋಹಿತ್​​ ಮತ್ತು ರಿತಿಕಾ ಜೋಡಿ 2ನೇ ಮಗುವಿಗೆ ಜನ್ಮ ನೀಡಿದ ಕಾರಣ ಇವರು ಮೊದಲ ಟೆಸ್ಟ್​ಗೆ ಲಭ್ಯರಿಲ್ಲ.

ಬುಮ್ರಾಗೆ ಕ್ಯಾಪ್ಟನ್ಸಿ ಜವಾಬ್ದಾರಿ

ರೋಹಿತ್​​ ಅಲಭ್ಯತೆಯಲ್ಲಿ ಟೀಮ್​ ಇಂಡಿಯಾವನ್ನು ಬುಮ್ರಾ ​​ಮುನ್ನಡೆಸಲಿದ್ದಾರೆ. ಸದ್ಯ ಜಸ್​ಪ್ರಿತ್​ ಬುಮ್ರಾ ಭಾರತ ಟೆಸ್ಟ್​ ತಂಡದ ಉಪನಾಯಕ. ಹಾಗಾಗಿ ಇವರೇ ತಂಡವನ್ನು ಲೀಡ್​ ಮಾಡಲಿದ್ದಾರೆ ಎಂದು ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ ಘೋಷಿಸಿದೆ.

ಈ ಬಗ್ಗೆ ಏನಂದ್ರು ಬುಮ್ರಾ?

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ನಾವು ಪಾಠ ಕಲಿತಿದ್ದೇವೆ. ಇಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ. ಅಷ್ಟೇ ಅಲ್ಲ ಇಲ್ಲಿನ ಫಲಿತಾಂಶಗಳು ಕೂಡ ಡಿಫಿರೆಂಟ್​​ ಆಗಿವೆ. ಟಾಸ್‌ ವೇಳೆಗೆ ಟೀಮ್ ಇಂಡಿಯಾ ಪ್ಲೇಯಿಂಗ್​​ ಎಲೆವೆನ್​​​ ಡಿಸೈಡ್​ ಆಗಲಿದೆ. ಗೆದ್ರೂ ಸೋತ್ರೂ ಶೂನ್ಯದಿಂದಲೇ ಆರಂಭಿಸಬೇಕು. ನಮಗೆ ಯಾವುದೇ ಒತ್ತಡ ಇಲ್ಲ ಎಂದರು.

ಇದನ್ನೂ ಓದಿ:ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ಮೊದಲ ಟೆಸ್ಟ್​ನಿಂದ ವಿರಾಟ್ ​ಕೊಹ್ಲಿ ಆಪ್ತ ಔಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment