ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್​ಗೆ ಕೈಕೊಟ್ಟ ರೋಹಿತ್​​; ಕೊಹ್ಲಿ ಆಪ್ತ ಟೀಮ್​ ಇಂಡಿಯಾ ಕ್ಯಾಪ್ಟನ್​​

author-image
Ganesh Nachikethu
Updated On
ಟೀಮ್ ಇಂಡಿಯಾಕ್ಕೆ ಮೊದಲ ದಿನವೇ ಬಿಗ್ ಶಾಕ್.. ಪ್ರಮುಖ ವಿಕೆಟ್​ ಪತನ, ಸಂಕಷ್ಟದಲ್ಲಿ ರೋಹಿತ್ ಪಡೆ
Advertisment
  • ಭಾರತ, ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಸ್ಕಾರ್ ಟ್ರೋಫಿ!
  • 22ನೇ ತಾರೀಕಿನಿಂದ ಆಸೀಸ್​ ವಿರುದ್ಧ ಮೊದಲ ಟೆಸ್ಟ್​​ ಪಂದ್ಯ ಶುರು
  • ರೋಹಿತ್​ ಬದಲಿಗೆ ಕೊಹ್ಲಿ ಆಪ್ತನಿಗೆ ಟೀಮ್​ ಇಂಡಿಯಾ ಕ್ಯಾಪ್ಟನ್​​

ನವೆಂಬರ್​​ 22ನೇ ತಾರೀಕಿನಿಂದ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಸ್ಕಾರ್ ಟ್ರೋಫಿ ಟೆಸ್ಟ್ ಸರಣಿ ಶುರುವಾಗಲಿದೆ. ಮಹತ್ವದ ಟೆಸ್ಟ್​ ಸರಣಿಗೆ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

ಇದನ್ನೂ ಓದಿ:‘ಭೂತದ ವೇಷದಲ್ಲೂ ಬ್ಯೂಟಿಫುಲ್​ ಆಗಿ ಕಾಣೋ ಏಕೈಕ ಚೆಲುವೆ’- ದೀಪಿಕಾ ದಾಸ್‌ ಹೊಸ ಅವತಾರ; ಏನಿದರ ವಿಶೇಷ?

publive-image

ಬಹುನಿರೀಕ್ಷಿತ ಬಾರ್ಡರ್-ಗವಸ್ಕಾರ್ ಟ್ರೋಫಿ ಟೆಸ್ಟ್ ಸರಣಿ 2024ರ ನವೆಂಬರ್ 22 ರಿಂದ 2025ರ ಜನವರಿ 7 ರವರೆಗೆ ನಡೆಯಲಿದೆ. ಈ ಟೆಸ್ಟ್​​ ಸರಣಿಗಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯಕ್ಕೆ ಪ್ಲೇಯಿಂಗ್​ ಎಲೆವೆನ್​ ಹೇಗಿರಲಿದೆ? ಅನ್ನೋ ಚರ್ಚೆ ಜೋರಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಔಟ್​ ಆಗಿದ್ದಾರೆ. ಇವರು ಟೆಸ್ಟ್ ಪಂದ್ಯದಿಂದಲ್ಲೂ ಹೊರ ಉಳಿಯೋ ಸಾಧ್ಯತೆ ಇದೆ. 5 ಟೆಸ್ಟ್ ಪಂದ್ಯಗಳು ಕ್ರಮವಾಗಿ ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ.

publive-image

ಇತಿಹಾಸ ನಿರ್ಮಿಸಿದ್ದ ಭಾರತ ತಂಡ

ಹಲವು ವರ್ಷಗಳಿಂದ ಟೀಮ್​ ಇಂಡಿಯಾ ಬಾರ್ಡರ್ ಗವಾಸ್ಕರ್ ಟೆಸ್ಟ್ ಟೂರ್ನಿ ಗೆಲ್ಲುತ್ತಲೇ ಬರುತ್ತಿದೆ. 2018-19 ಮತ್ತು 2020-21ರ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಭಾರತ ಈ ಹಿಂದಿನ ಎರಡೂ ಪ್ರವಾಸದಲ್ಲೂ ಕಾಂಗರೂ ತಂಡ 2-1 ಅಂತರದಿಂದ ಸೋಲಿಸಿತ್ತು. ಈಗ ಟೀಮ್ ಇಂಡಿಯಾ ಹ್ಯಾಟ್ರಿಕ್ ಟೆಸ್ಟ್ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಬುಮ್ರಾ ಕ್ಯಾಪ್ಟನ್​ ಎಂದ ಗಂಭೀರ್​​

ಪರ್ತ್‌ನಲ್ಲಿ ನಡೆಯಲಿರೋ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಮುನ್ನಡೆಸಲಿದ್ದಾರೆ ಎಂದು ಮುಖ್ಯ ಕೋಚ್​​ ಗಂಭೀರ್​​ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಾತಾಡಿದ ಗಂಭೀರ್​​, ಮೊದಲ 2 ಪಂದ್ಯಗಳಿಗೆ ರೋಹಿತ್​ ಡೌಟ್​ ಅನ್ನೋ ಮಾತುಗಳು ಕೇಳಿ ಬಂದಿವೆ. ಪಂದ್ಯದ ಪ್ಲಾನ್​ ಬಗ್ಗೆ ಮೊದಲೇ ಚರ್ಚೆ ಮಾಡುತ್ತೇವೆ. ರೋಹಿತ್​ ಬದಲಿಗೆ ಟೀಮ್​ ಇಂಡಿಯಾವನ್ನು ಬುಮ್ರಾ ಮುನ್ನಡೆಸಲಿದ್ದಾರೆ ಎಂದರು.

publive-image

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್

ಪರ್ತ್‌ನಲ್ಲಿ ನಡೆಯಲಿರೋ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಜತೆಗೆ ಧ್ರುವ್ ಜುರೆಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಮುನ್ನಡೆಸಬಹುದಾಗಿದೆ. 3ನೇ ಕ್ರಮಾಂಕದಲ್ಲಿ ಶುಭ್ಮನ್​ ಗಿಲ್, 4ನೇ ಕ್ರಮಾಂಕದಲ್ಲಿ ಕೊಹ್ಲಿ ಆಡಲಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್‌ 5ನೇ ಕ್ರಮಾಂಕ ಮತ್ತು ರಾಹುಲ್​​ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬ್ಯಾಟಿಂಗ್​ ಮಾಡಲಿದ್ದಾರೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಟೆಸ್ಟ್ ಕ್ರಿಕೆಟ್‌ಗೆ ಪಾರ್ದಪಣೆ ಮಾಡಬಹುದು. ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಆಕಾಶ ದೀಪ್ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದು. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ತಂಡದಿಂದ ಹೊರಗೆ ಉಳಿಯಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment