/newsfirstlive-kannada/media/post_attachments/wp-content/uploads/2024/12/MONEY-BURNY.jpg)
ಹೇಳಿ, ಕೇಳಿ ಇದು ಚಳಿಗಾಲ! ಚಳಿಯಿಂದ ರಕ್ಷಣೆ ಪಡೆಯಲು ದಪ್ಪ ದಪ್ಪ ಬಟ್ಟೆಗಳ ಧರಿಸುವುದರ ಜೊತೆಗೆ ಇನ್ನು ಕೆಲವರು ಬೆಂಕಿಯ ಮೊರೆ ಹೋಗ್ತಾರೆ. ಇಲ್ಲ, ಹೀಟರ್ ಅಥವಾ ಕ್ವಿಲ್ಟ್​​ಗಳ ಮುಂದೆ ಚಳಿ ಕಾಯಿಸುತ್ತಾರೆ. ಆದರೆ ಇಲ್ಲೊಬ್ಬ ತನಗೆ ಚಳಿ ಆಗ್ತಿದೆ ಎಂದು ಮನೆಯ ಒಲೆಗೆ ಲಕ್ಷಗಟ್ಟಲೆ ಹಣ ಹಾಕಿ ಸುಡುತ್ತಾ ಬೆಂಕಿ ಕಾಯಿಸಿಕೊಳ್ಳುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಮೈಸೂರು ಚಾಮುಂಡಿ ದೇವಿಯ ಸೀರೆಗಳ ಕಳ್ಳತನ ಆರೋಪ; ನಾಡದೇವತೆ ಸನ್ನಿಧಿಯಲ್ಲಿ ಹೊಸ ಸಂಚಲನ
ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಫೆಡರ್ ಬಾಲ್ವನೋವಿಚ್ ಎಂಬಾತ ಚಳಿ ಕಾಯಿಸಿಕೊಳ್ಳಲು ತನ್ನ ಮನೆಯಲ್ಲಿದ್ದ ಚಿಮಣಿಗೆ ಕಂತೆ ಕಂತೆ ಹಣವನ್ನ ಹಾಕಿ ಸುಡುತ್ತಿದ್ದಾನೆ. ಈ ವಿಡಿಯೋ ನೋಡಿದ ಜನರು ಅಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮಗೆ ದುಡ್ಡು ಹೆಚ್ಚಾದ್ರೆ ಬಡವರಿಗೆ ದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಫೆಡೊರ್ ಬಾಲ್ವನೋವಿಚ್ (Fedor Balvanovich) ಸೋಶಿಯಲ್ ಮೀಡಿಯಾ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅಮೆರಿಕ ಮೂಲದ ಬಾಲ್ವನೋವಿಚ್, ಅವರ ಈ ವಿಡಿಯೋ ಒಂದು ಮಿಲಿಯನ್​​ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ನೋಟುಗಳು ನಕಲಿ ಇರಬಹುದೇ?
ವೀಡಿಯೋ ನೋಡಿದ ಬಳಿಕ ಕೆಲವರು ನೋಟುಗಳು ನಕಲಿ ಇರಬಹುದು ಎಂದು ಊಹಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯು ಈ ರೀತಿ ಮಾಡಿರಬಹುದು ಅಂತಲೂ ಚರ್ಚೆ ಆಗ್ತಿದೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ