newsfirstkannada.com

ಮದುವೆ ದಿಬ್ಬಣ ಹೊರಟ ಬಸ್​ ಅಪಘಾತ; 10 ಮಂದಿ ಸಾವು

Share :

12-06-2023

    ಬಸ್​ ಉರುಳಿ ಬಿದ್ದು 10 ಜನ ಸಾವು

    ದಿಬ್ಬಣ ಹೊರಟವರು ಮಸಣ ಸೇರಿದರು

    ಬಸ್​ ಚಾಲಕನನ್ನು ಅರೆಸ್ಟ್​ ಮಾಡಿದ ಪೊಲೀಸರು

ಮದುವೆ ದಿಬ್ಬಣ ತೆರಳುತ್ತಿದ್ದ ಬಸ್​ ಉರುಳಿ ಬಿದ್ದು 10 ಜನರು ಸಾವನ್ನಪ್ಪಿದ ಘಟನೆ ಆಸ್ಟ್ರೇಲಿಯಾದ ವೈನ್​ ಪ್ರದೇಶದಲ್ಲಿ ನಡೆದಿದೆ. ಈ ಅಪಘಾತದಲ್ಲಿ 25 ಮಂದಿಗೆ ಗಾಯವಾಗಿದೆ.

ಸಿಡ್ನಿಯ ಉತ್ತರದಲ್ಲಿರುವ ನ್ಯೂ ಸೌತ್​ ವೇಲ್ಸ್​ ರಾಜ್ಯದ ಹಂಟರ್​ ವ್ಯಾಲಿ ಪ್ರದೇಶದ ಗ್ರೇಟಾ ಪಟ್ಟಣದ ವೈನ್​ ಕಂಟ್ರಿ ಡ್ರೈವ್​ನ ವೃತ್ತದ ಬಳಿ ಅಪಘಾತವಾಗಿದೆ. ರಾತ್ರಿ  11:30ಕ್ಕೆ ಈ ಅಪಘಾತ ಸಂಭವಿಸಿದೆ. ಮಂಜು ಕವಿದ ರಾತ್ರಿಯಲ್ಲಿ ಬಸ್​ ಪ್ರಯಾಣಿಸಿದ್ದರಿಂದ ಅಪಘಾತ ನಡೆದಿದೆ.

ಈಗಾಗಲೇ ಬಸ್​ ಚಾಲಕನನ್ನು ಪೊಲೀಸರು ಬಂಧಿಸಿದ್ದು,  ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್​ನಲ್ಲಿದ್ದವರು ವಾಂಡಿಸ್​​ ಎಸ್ಟೇಟ್​  ವೈನರಿಯಲ್ಲಿ  ನಡೆದ ಮದುವೆಯಲ್ಲಿ ಭಾಗವಹಿಸಿ ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇನ್ನು 18 ಮಂದಿಗೆ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ದಿಬ್ಬಣ ಹೊರಟ ಬಸ್​ ಅಪಘಾತ; 10 ಮಂದಿ ಸಾವು

https://newsfirstlive.com/wp-content/uploads/2023/06/Bus-Accident.jpg

Load More