newsfirstkannada.com

40 ಅಡಿ ಆಳದ ಕಮರಿಗೆ ಬಿದ್ದ ಬಸ್​​; 11 ಸಾವು, 20 ಮಂದಿಗೆ ಗಾಯ

Share :

Published April 10, 2024 at 6:37am

Update April 10, 2024 at 6:38am

    ‘ಮುರುಮ್​’ ಮಣ್ಣಿನ ಹೊಂಡಕ್ಕೆ ಬಿದ್ದ ಖಾಸಗಿ ಬಸ್​

    ಕಂಪನಿ ಉದ್ಯೋಗಿಗಳನ್ನು ಹೊತ್ತೊಯ್ದು ಸಾಗುತ್ತಿದ್ದ ಖಾಸಗಿ ಬಸ್​

    30ಕ್ಕೂ ಹೆಚ್ಚು ಜನರಿದ್ದ ಬಸ್​.. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು

ಛತ್ತೀಸ್​ಗಢ: ಖಾಸಗಿ ಬಸ್​ವೊಂದು ಅಪಘಾತಕ್ಕೀಡಾಗಿದ್ದು ಸುಮಾರು 11 ಜನರು ಸಾವನ್ನಪ್ಪಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರದಂದು ದುರ್ಗ್​ ಜಿಲ್ಲೆಯಲ್ಲಿ ‘ಮುರುಮ್​’ ಮಣ್ಣಿನ ಹೊಂಡಕ್ಕೆ ಖಾಸಗಿ ಬಸ್​​ ಬಿದ್ದಿದೆ. ರಾತ್ರಿ 8:30ರ ಸುಮಾರಿಗೆ ಬಸ್​ ಅಪಘಾತವಾಗಿದೆ. ಬಸ್​ ಅಪಘಾತದಲ್ಲಿ 11 ಜನರು ಅಸುನೀಗಿದ್ದಾರೆ.

ಡಿಸ್ಟಿಲರಿ ಕಂಪನಿಯ ಉದ್ಯೋಗಿಗಳು ಬಸ್​ನಲ್ಲಿ ಮನೆಗೆ ತೆರಳುತ್ತಿದ್ದರು. ಕುಮ್ಹಾರಿ ಪೊಲೀಸ್​ ಠಾಣೆಯ ಖಾಪ್ರಿ ಗ್ರಾಮದ ಬಳಿ ಬಸ್​ ಸಂಚರಿಸುವ ವೇಳೆ ಮಣ್ಣಿನ ಹೊಂಡಕ್ಕೆ ಬಿದ್ದಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಹರೀಶ್​ ಪಾಟೀಲ್​ ಹೇಳಿದ್ದಾರೆ.

ಇದನ್ನೂ ಓದಿ: ಬಿಸಿಲು ಎಂದು AC ಬಳಸೋರೆ ಎಚ್ಚರ! ಇದು ಎಷ್ಟು ಡೇಂಜರ್ಸ್​ ಗೊತ್ತಾ?

ಇನ್ನು ಬಸ್​ನಲ್ಲಿ 30ಕ್ಕೂ ಹೆಚ್ಚು ಜನರಿದ್ದರು. ಬಸ್​ ಸ್ಕಿಡ್​ ಆದ ಕಾರಣ 40 ಅಡಿ ಆಳದ ‘ಮುರುಮ್​​’ ಗಣಿಯಲ್ಲಿ ಹೋಗಿ ಬಿದ್ದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮುರುಮ್’ ವಿಶೇಷ ಮಣ್ಣಾಗಿದ್ದು, ಅದನ್ನು ನಿರ್ಮಾಣ ಕೆಲಸಕ್ಕೆ ಬಳಸುತ್ತಾರೆ. ಆದರೆ ಆ ಪ್ರದೇಶದಕ್ಕೆ ಸಂಚರಿಸುತ್ತಿದ್ದಾಗ ಬಸ್​​ ಅಪಘಾತಕ್ಕೀಡಾಗಿದೆ. ಘಟನೆ ನಡೆದಂತೆ ಪೊಲೀಸ್​ ತಂಡಕ್ಕೆ​ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಚರಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

40 ಅಡಿ ಆಳದ ಕಮರಿಗೆ ಬಿದ್ದ ಬಸ್​​; 11 ಸಾವು, 20 ಮಂದಿಗೆ ಗಾಯ

https://newsfirstlive.com/wp-content/uploads/2024/04/Private-Bus.jpg

Load More