/newsfirstlive-kannada/media/post_attachments/wp-content/uploads/2024/06/Bus-Accident.jpg)
ಹಿಮಾಚಲ ಪ್ರದೇಶ: ಸರ್ಕಾರಿ ಬಸ್ (HRTC) ಅಪಘಾತಕ್ಕೀಡಾಗಿ ಚಾಲಕ ಮತ್ತು ಕಂಡಕ್ಟರ್ ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಶಿಮ್ಲಾ ಜಿಲ್ಲೆಯ ಜುಬ್ಬಲ್ ಉಪವಿಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬೆಳಗ್ಗೆ 6.45ಕ್ಕೆ ಬಸ್ ಪಲ್ಟಿ ಹೊಡೆದಿದೆ. ಕುದ್ದುವಿನಿಂದ ಜುಬ್ಬಲ್ನ ಗಿಲ್ತಾರಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಚೌರಿಯನ್ ಗ್ರಾಮದ ಬಳಿ ನೆಲಕ್ಕುರುಳಿದೆ. ಚಾಲಕ ಕರಮ್ ದಾಸ್ ಮತ್ತು ಕಂಡಕ್ಟರ್ ರಾಕೇಶ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಮತ್ತಿಬ್ಬರನ್ನು ನೇಪಾಳ ಮೂಲದ ಬಿರ್ಮಾ ದೇವಿ ಮತ್ತು ಧನ್ ಶಾ ಎಂದು ಗುರುತಿಸಲಾಗಿದೆ.
#HimachalPradesh: Four dead after bus falls into gorge in Shimla's Jubbal#BusAccident#Shimla#bus#Jubbal#accidentpic.twitter.com/AyZOB7iTRP
— Sunder Singh Bisht (@SunderSingh0912)
#HimachalPradesh: Four dead after bus falls into gorge in Shimla's Jubbal#BusAccident#Shimla#bus#Jubbal#accidentpic.twitter.com/AyZOB7iTRP
— akjha (@akjha673) June 21, 2024
">June 21, 2024
ಅಪಘಾತದಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಜಿಯೇಂದರ್ ರಂಗ್ತಾ, ದೀಪಿಕಾ ಠಾಕೂರ್ ಮತ್ತು ಹಸ್ತ್ ಬಹದ್ದೂರ್ ಎಂದು ಗುರುತಿಸಲಾಗಿದೆ. ಸದ್ಯ ಅವರಿಗೆ ರೋಹ್ರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ