newsfirstkannada.com

ಘಾಟ್​ ರಸ್ತೆಯಲ್ಲಿ ಉರುಳಿ ಬಿದ್ದ ಸರ್ಕಾರಿ ಬಸ್​.. ಚಾಲಕ, ಕಂಡಕ್ಟರ್ ಸೇರಿ​ ನಾಲ್ವರು ಸಾವು

Share :

Published June 21, 2024 at 1:14pm

    ಬೆಳಗ್ಗೆ 6.45ಕ್ಕೆ ಸರ್ಕಾರಿ ಬಸ್​ ಅಪಘಾತ

    ಅಪಘಾತದಲ್ಲಿ ನಾಲ್ವರು ಸಾವು, ಮೂವರಿಗೆ ಗಂಭೀರ ಗಾಯ

    ಭೀಕರ ಅಪಘಾತದಲ್ಲಿ ನಜ್ಜುಗುಜ್ಜಾದ ಸರ್ಕಾರಿ ಬಸ್​

ಹಿಮಾಚಲ ಪ್ರದೇಶ: ಸರ್ಕಾರಿ ಬಸ್​ (HRTC) ಅಪಘಾತಕ್ಕೀಡಾಗಿ ಚಾಲಕ ಮತ್ತು ಕಂಡಕ್ಟರ್ ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಶಿಮ್ಲಾ ಜಿಲ್ಲೆಯ ಜುಬ್ಬಲ್​ ಉಪವಿಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬೆಳಗ್ಗೆ 6.45ಕ್ಕೆ ಬಸ್​ ಪಲ್ಟಿ ಹೊಡೆದಿದೆ. ಕುದ್ದುವಿನಿಂದ ಜುಬ್ಬಲ್​ನ ಗಿಲ್ತಾರಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್​ ಚೌರಿಯನ್​ ಗ್ರಾಮದ ಬಳಿ ನೆಲಕ್ಕುರುಳಿದೆ. ಚಾಲಕ ಕರಮ್​ ದಾಸ್​ ಮತ್ತು ಕಂಡಕ್ಟರ್​​ ರಾಕೇಶ್​​ ಕುಮಾರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಮತ್ತಿಬ್ಬರನ್ನು ನೇಪಾಳ ಮೂಲದ ಬಿರ್ಮಾ ದೇವಿ ಮತ್ತು ಧನ್​ ಶಾ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ​ಮೂವರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಜಿಯೇಂದರ್​ ರಂಗ್ತಾ, ದೀಪಿಕಾ ಠಾಕೂರ್​ ಮತ್ತು ಹಸ್ತ್​​ ಬಹದ್ದೂರ್​ ಎಂದು ಗುರುತಿಸಲಾಗಿದೆ. ಸದ್ಯ ಅವರಿಗೆ ರೋಹ್ರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಘಾಟ್​ ರಸ್ತೆಯಲ್ಲಿ ಉರುಳಿ ಬಿದ್ದ ಸರ್ಕಾರಿ ಬಸ್​.. ಚಾಲಕ, ಕಂಡಕ್ಟರ್ ಸೇರಿ​ ನಾಲ್ವರು ಸಾವು

https://newsfirstlive.com/wp-content/uploads/2024/06/Bus-Accident.jpg

Load More