/newsfirstlive-kannada/media/post_attachments/wp-content/uploads/2024/11/uttarakhand-Bus-Tragedy.jpg)
ಉತ್ತರಾಖಂಡ್‌ನ ಅಲ್ಮೋರಾದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಭೀಕರ ಬಸ್ ದುರಂತ ಸಂಭವಿಸಿದೆ. 200 ಅಡಿ ಕಂದಕಕ್ಕೆ ಯಾತ್ರಿಗಳು, ಪ್ರಯಾಣಿಕರಿದ್ದ ಬಸ್ ಉರುಳಿಬಿದ್ದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಲ್ಲಿಯವರೆಗೆ 36 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ರಕ್ಷಣಾ ಕಾರ್ಯ ಇನ್ನೂ ಮುಂದುವರಿದಿದೆ.
ದೇವಭೂಮಿಯಲ್ಲಿ ಈ ದುರಂತ ನಡೆದಿದ್ದು ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು, NDRF, SDRF ಸಿಬ್ಬಂದಿ ಆಗಮಿಸಿದ್ದಾರೆ. ಬಸ್‌ನಲ್ಲಿ ಒಟ್ಟು 35 ಮಂದಿ ಪ್ರಯಾಣಿಕರಿದ್ದರು. ಅಲ್ಮೋರಾ ಬಳಿ ತೆರಳುತ್ತಿದ್ದಾಗ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ.
ಬಸ್ ಅಪಘಾತದಲ್ಲಿ ಸಾವಿನ ಸಂಖ್ಯೆ 30ರ ಗಡಿ ದಾಟುವ ಆತಂಕ ಇದ್ದು, ಅಲ್ಮೋರಾ SP ದೇವೇಂದ್ರ ಪಿಂಚಾ ಅವರು ಈ ಮಾಹಿತಿಯನ್ನು ಖಚಿತ ಪಡಿಸಿದ್ದಾರೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ನೀಡಲಾಗುತ್ತಿದೆ.
ಇದನ್ನೂ ಓದಿ: ಓಮ್ನಿ ಕಾರಿಗೆ ತಗುಲಿದ ಬೆಂಕಿ.. ಕಾರಿನಲ್ಲೇ ವ್ಯಾಪಾರಿ ಸಜೀವ ದಹನ
ಬಸ್ ಉರುಳಿ ಬಿದ್ದಿರುವ ಕಂದಕದ ಜಾಗ ಅತ್ಯಂತ ಅಪಾಯಕಾರಿಯಾಗಿದ್ದು, ರಕ್ಷಣಾ ಕಾರ್ಯ ಕಷ್ಟಕರವಾಗಿದೆ. ರಕ್ಷಣಾ ಸಿಬ್ಬಂದಿ, ಪೊಲೀಸರು ಅಪಘಾತದ ಸ್ಥಳಕ್ಕೆ ಆಗಮಿಸಿ ಬದುಕುಳಿದವರ ರಕ್ಷಿಸಲು ಮುಂದಾಗಿದ್ದಾರೆ. ಬಸ್ ಬಿದ್ದಿರುವ ಜಾಗವನ್ನ ನೋಡಿದ್ರೆ ಯಾರೊಬ್ಬರು ಬದುಕುವ ಸಾಧ್ಯತೆಯೇ ಇಲ್ಲ ಎನ್ನಲಾಗಿದೆ. ಮೃತಪಟ್ಟವರ ಸ್ವವಿವರಗಳನ್ನು ಉತ್ತರಾಖಂಡ ಸರ್ಕಾರ ಕಲೆ ಹಾಕುತ್ತಿದ್ದು ಇನ್ನೂ ಅಧಿಕೃತವಾಗಿ ಪ್ರಕಟ ಮಾಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ