newsfirstkannada.com

ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. 6 ಮಂದಿ ಸಜೀವ ದಹನ.. 32 ಪ್ರಯಾಣಿಕರಿಗೆ ಗಾಯ.. ಮತ್ತಷ್ಟು ಸಾವು ನೋವಿನ ಆತಂಕ

Share :

Published May 15, 2024 at 9:24am

    ಟ್ರಕ್ ಹಾಗೂ ಬಸ್ ನಡುವೆ ಭೀಕರ ಡಿಕ್ಕಿಯಾಗಿ ದುರಂತ

    ಅಪಘಾತದ ತೀವ್ರತೆಗೆ ಹೊತ್ತಿ ಉರಿದ ಟ್ರಕ್ ಹಾಗೂ ಬಸ್

    ವೋಟ್ ಮಾಡಿ ವಾಪಸ್ ಆಗುತ್ತಿದ್ದ ಪ್ರಯಾಣಿಕರು ಸಾವು

ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯ ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಾಪಟ್ಲಾದಿಂದ ಹೈದರಾಬಾದ್‌ಗೆ ಹೋಗುತ್ತಿದ್ದ ಬಸ್, ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಜೀವ ದಹನವಾಗಿದ್ದಾರೆ.

ಈ ರಸ್ತೆ ಅಪಘಾತದಲ್ಲಿ 32 ಮಂದಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಪಘಾತದ ಭಯಾನಕ ದೃಶ್ಯಗಳು ವೈರಲ್ ಆಗುತ್ತಿವೆ. ದೃಶ್ಯಗಳಲ್ಲಿ ಬಸ್ ಹೊತ್ತಿ ಉರಿಯುತ್ತಿರೋದನ್ನು ಕಾಣಬಹುದು. ಡಿಕ್ಕಿಯಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಬಸ್ ಮತ್ತು ಟ್ರಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬಾಪಟ್ಲದಿಂದ ಮತ ಚಲಾಯಿಸಿ ಹಿಂತಿರುಗುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ:ಆರ್​ಸಿಬಿಗೆ ಬಿಗ್ ಶಾಕ್ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್.. ಪಾಯಿಂಟ್ಸ್​ ಟೇಬಲ್​ನಲ್ಲಿ ಭಾರೀ ಬದಲಾವಣೆ..!

ಬಸ್ಸಿನಲ್ಲಿ 42 ಮಂದಿ ಪ್ರಯಾಣ
ಹೈದರಾಬಾದ್-ವಿಜಯವಾಡ ಹೆದ್ದಾರಿಯ ಚಿಲಕಲೂರಿಪೇಟೆ ಮಂಡಲದ ಬಳಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ಕೂಡಲೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ವೇಳೆ ಬಸ್‌ನಲ್ಲಿ 42 ಮಂದಿ ಪ್ರಯಾಣಿಸುತ್ತಿದ್ದರು ಎಂದು ಗಾಯಾಳುಗಳು ತಿಳಿಸಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ 8 ವರ್ಷದ ಬಾಲಕಿಯೂ ಸೇರಿದ್ದಾಳೆ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!

ಮೃತರು ಬಾಪಟ್ಲಾ ಜಿಲ್ಲೆಯ ನಿವಾಸಿಗಳು. 35 ವರ್ಷದ ಬಸ್ ಚಾಲಕ ಅಂಜಿ, 65 ವರ್ಷದ ಉಪ್ಪಗುಂದೂರು ಕಾಶಿ, 55 ವರ್ಷದ ಉಪ್ಪಗುಂದೂರು ಲಕ್ಷ್ಮಿ ಮತ್ತು 8 ವರ್ಷದ ಮುಪ್ಪರಾಜು ಖ್ಯಾತಿ ಶಾಸ್ತ್ರಿ ಮೃತ ದುರ್ದೈವಿಗಳು. ಇಬ್ಬರ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ. ದುರ್ಘಟನೆಯಲ್ಲಿ 32 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಲಕಲೂರಿಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಗುಂಟೂರಿಗೆ ವರ್ಗಾಯಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. 6 ಮಂದಿ ಸಜೀವ ದಹನ.. 32 ಪ್ರಯಾಣಿಕರಿಗೆ ಗಾಯ.. ಮತ್ತಷ್ಟು ಸಾವು ನೋವಿನ ಆತಂಕ

https://newsfirstlive.com/wp-content/uploads/2024/05/bus-accident-2.jpg

Load More