ಭೀಕರ ಬಸ್​​ ಅಪಘಾತ; ಸ್ಥಳದಲ್ಲೇ ಕಣ್ಣು ಮುಚ್ಚಿದ 6 ಪ್ರಯಾಣಿಕರು; ಹಲವರ ಸ್ಥಿತಿ ಗಂಭೀರ

author-image
Ganesh Nachikethu
Updated On
ಭೀಕರ ಬಸ್​​ ಅಪಘಾತ; ಸ್ಥಳದಲ್ಲೇ ಕಣ್ಣು ಮುಚ್ಚಿದ 6 ಪ್ರಯಾಣಿಕರು; ಹಲವರ ಸ್ಥಿತಿ ಗಂಭೀರ
Advertisment
  • ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಬಸ್​​
  • ಭೀಕರ ಬಸ್​ ಅಪಘಾತದಲ್ಲಿ ಆರು ಮಂದಿ ಸಾವು
  • 22ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳು

ಪೌರಿ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ಸೊಂದು ಆಳವಾದ ಕಂದಕಕ್ಕೆ ಬಿದ್ದಿದೆ. ಈ ಭೀಕರ ಬಸ್​ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿರೋ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಅಪಘಾತ ಆಗಿದ್ದು ಹೇಗೆ?

ಉತ್ತರಾಖಂಡದ ಪೌರಿಯಲ್ಲಿ ನಡೆದ ದುರ್ಘಟನೆ ಇದು. ಪೌರಿಯಿಂದ ಸೆಂಟ್ರಲ್ ಶಾಲೆಗೆ ಹೋಗುವ ಮಾರ್ಗ ಮಧ್ಯೆ ಬಸ್​ ಅಪಘಾತಕ್ಕೀಡಾಗಿದೆ. ಇದುವರೆಗೂ 6 ಮಂದಿ ಸಾವನ್ನಪ್ಪಿದ್ದು, 22ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಪೌರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 100 ಮೀಟರ್ ದೂರದಲ್ಲಿರೋ ಕಂದಕಕ್ಕೆ ಬಿದ್ದಿದೆ. ಬಸ್ ಕೆಳಗೆ ಬಿದ್ದ ನಂತರ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಬಸ್ಸಿನ ಬ್ರೇಕ್ ಫೇಲ್ಯೂರ್​ ಆದ ಕಾರಣ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:IPL ಬ್ರ್ಯಾಂಡ್ ವ್ಯಾಲ್ಯೂ ಬರೋಬ್ಬರಿ 1 ಲಕ್ಷ ಕೋಟಿ; ಇದರಲ್ಲಿ ಆರ್​​​ಸಿಬಿ ತಂಡದ ಪಾಲು ಎಷ್ಟು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment