ಕಂದಕಕ್ಕೆ ಉರುಳಿ ಬಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​.. 15 ಜನರು ಸಾ*ವನ್ನಪ್ಪಿರುವ ಶಂಕೆ

author-image
AS Harshith
Updated On
ಕಂದಕಕ್ಕೆ ಉರುಳಿ ಬಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​.. 15 ಜನರು ಸಾ*ವನ್ನಪ್ಪಿರುವ ಶಂಕೆ
Advertisment
  • 30ಕ್ಕೂ ಹೆಚ್ಚು ಜನರಿದ್ದ ಬಸ್​ ಅಪಘಾತ
  • ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರಿದ್ದ ಬಸ್​
  • ವಿಪತ್ತು ನಿರ್ವಹಣಾ ಪಡೆಯಿಂದ ರಕ್ಷಣಾ ಕಾರ್ಯಚರಣೆ

30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದ್ದ ಬಸ್​ ಕಮರಿಗೆ ಉರುಳಿ ಬಿದ್ದ ಭೀಕರ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ. ಉತ್ತರಖಂಡಾದ ಅಲ್ಮೋರಾದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮಾರ್ಚುಲಾ ಸಾಲ್ಟ್​ ಪ್ರದೇಶದಲ್ಲಿ ಬಸ್​ ಕಮರಿಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ 15 ಜನರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಬಂದಿದೆ. ಸ್ಥಳದಲ್ಲಿ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಪಡೆ ಮೂರು ತಂಡಗಳಾಗಿ ರಕ್ಷಣಾ ಕಾರ್ಯಚರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಓಮ್ನಿ ಕಾರಿಗೆ ತಗುಲಿದ ಬೆಂಕಿ.. ಕಾರಿನಲ್ಲೇ ವ್ಯಾಪಾರಿ ಸಜೀವ ದಹನ

ಉತ್ತರಖಂಡಾದ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಘಟನಾ ಸ್ಥಳದಿಂದ ಗಾಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment