ವಿಜಯಪುರದಲ್ಲಿ ಭೀಕರ ಅಪಘಾತ.. ಲಾರಿ ಗುದ್ದಿದ ಹೊಡೆತಕ್ಕೆ ಪ್ರಯಾಣಿಕರಿದ್ದ ಬಸ್​ ಪುಡಿಪುಡಿ

author-image
Ganesh
Updated On
ವಿಜಯಪುರದಲ್ಲಿ ಭೀಕರ ಅಪಘಾತ.. ಲಾರಿ ಗುದ್ದಿದ ಹೊಡೆತಕ್ಕೆ ಪ್ರಯಾಣಿಕರಿದ್ದ ಬಸ್​ ಪುಡಿಪುಡಿ
Advertisment
  • ಓರ್ವ ಸಾವು, ಹಲವು ಮಂದಿ ಗಾಯಗೊಂಡಿದ್ದಾರೆ
  • ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
  • ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ವಿಜಯನಗರ: ಖಾಸಗಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬಯ್ಯನ ಕೆರೆ ಬಳಿ ನಡೆದಿದೆ.

ಸೂರಪೂರ ಮೂಲದ ಮೋಯ್ನುದ್ದೀನ್ (32) ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ಬರ್ತಿದ್ದ ಖಾಸಗಿ ಬಸ್, ಹೊಸಪೇಟೆ ಕಡೆಯಿಂದ ಕೂಡ್ಲಿಗಿ ಕಡೆ ಹೊರಟಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಕಂಗನಾ ಕೆನ್ನೆಗೆ ಹೊಡೆದ CISF ಅಧಿಕಾರಿ ಯಾರು..? ಕುಲ್ವಿಂದರ್ ಕೌರ್ ಕುರಿತ 7 ವಿಚಾರಗಳು ಇಲ್ಲಿದೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment