/newsfirstlive-kannada/media/post_attachments/wp-content/uploads/2024/07/Bus-raichur.jpg)
ರಾಯಚೂರು: ಬಸ್ ಹರಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಹೆದ್ದಾರಿಯಲ್ಲಿ ನಡೆದಿದೆ. ನಿಯಂತ್ರಣ ತಪ್ಪಿ ಖಾಸಗಿ ಬಸ್ ​​ಪಾದಚಾರಿ ಮೇಲೆ ಹರಿದಿದೆ.
ಅಂಕುಶದೊಡ್ಡಿ ಗ್ರಾಮದ ನಿವಾಸಿ ಸಿದ್ದಪ್ಪ (22) ಮೃತ ದುರ್ದೈವಿ. ಹೆದ್ದಾರಿ ರೋಡ್ ಕ್ರಾಸ್ ಮಾಡಿ ಮನೆಯತ್ತ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಬಸ್​ ಸಿದ್ದಪ್ಪನ ಮೇಲೆ ಹರಿದಿದೆ.
KA51 AB 3577 ನಂಬರ್ ನೋಂದಣಿಯ ಬಸ್ ಹರಿದಂತೆ ಸಿದ್ದಪ್ಪ ಉಸಿರು ನಿಲ್ಲಿಸಿದ್ದಾರೆ. ಅಪಘಾತ ಬಳಿಕ ಬಸ್ ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಿದ್ದಾನೆ. ಕೊನೆಗೆ ಗ್ರಾಮಸ್ಥರಿಂದ ಬಸ್ ಫಾಲೋ ಮಾಡಿ ಮಸ್ಕಿಯಲ್ಲಿ ಬಸ್ ತಡೆಯಲಾಗಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us