newsfirstkannada.com

ಬಸ್​ ಮತ್ತು ಹಾಲಿನ ಟ್ಯಾಂಕರ್​ ನಡುವೆ ಭೀಕರ ಅಪಘಾತ; 18 ಜನರು ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

Share :

Published July 10, 2024 at 8:37am

    ಡಬಲ್​ ಡೆಕ್ಕರ್​ ಬಸ್​ ಮತ್ತು ಹಾಲಿನ ಟ್ಯಾಂಕರ್ ನಡುವೆ ಅಪಘಾತ

    ಅಪಘಾತದಲ್ಲಿ ಸಂಪೂರ್ಣ ನಜ್ಜುಗುಜ್ಜಾದ ಪ್ರಯಾಣಿಕರಿದ್ದ ಬಸ್​

    ಅಪಘಾತದ ಭೀಕರತೆ ತಿಳಿದು CM ಯೋಗಿ ಆದಿತ್ಯನಾಥ್ ಸಂತಾಪ

ಡಬಲ್​ ಡೆಕ್ಕರ್​ ಬಸ್​ ಮತ್ತು ಹಾಲಿನ ಟ್ಯಾಂಕರ್​​ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಉತ್ತರ ಪ್ರದೇಶ ಉನ್ನಾವೊದಲ್ಲಿ ನಡೆದಿದೆ. ಅಪಘಾತದ ಭೀಕರತೆಗೆ 18 ಜನರು ಸಾವನ್ನಪ್ಪಿದ್ದು, ಸುಮಾರು 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಲಕ್ನೋ-ಆಗ್ರಾ ಎಕ್ಸ್​​ಪ್ರೆಸ್​​ವೇನಲ್ಲಿ ಬುಧವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ಬಸ್​​ ಬಿಹಾರದ ಸೀತಾರ್ಮಹಿಯಿಂದ ದೆಹಲಿ ಕಡೆ ತೆರಳುತ್ತಿತ್ತು. ಈ ವೇಳೆ ಗರ್ಹಾ ಗ್ರಾಮದ ಬಳಿ ಹಾಲಿನ ಟ್ಯಾಂಕರ್​ಗೆ ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ವರುಣಾರ್ಭಟಕ್ಕೆ ಮುಂಬೈ, ಅಸ್ಸಾಂ ತತ್ತರ.. ಸಾಲು ಸಾಲು ಸಾವು ನೋವು

ಬಸ್​ ಡಿಕ್ಕಿ ಹೊಡೆದಂತೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್​ನಲ್ಲಿದ್ದ ಪ್ರಯಾಣಿಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಇನ್ನು ಕೆಲವರು ಬಸ್​ನಲ್ಲೇ ಸಿಲುಕಿ ಸಾವನ್ನಪ್ಪಿದ್ದಾರೆ.

ಅಪಘಾತ ನಡೆದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೊಲೀಸರು ಮತ್ತು ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಂತ್ರಸ್ತರನ್ನು ಹೊರತೆಗೆದಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ

ಭೀಕರ ಅಪಘಾತಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸಂತಾಪ ಸೂಚಿಸಿದ್ದಾರೆ ‘‘ದುಃಖದಲ್ಲಿರುವ ಕುಟುಂಬಳಿಗೆ ಸಂತಾಪ ಸೂಚಿಸುತ್ತಿದ್ದೇನೆ. ಜಿಲ್ಲಾಧಿಕಾರಿಯೊಂದಿಗೆ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದೇನೆ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ.. ಡಿಕೆಶಿ ಲೆಕ್ಕಾಚಾರವೇನು? ಜನರು ಎಲ್ಲಾ ದಾಖಲೆಗಳನ್ನು ಬದಲಾವಣೆ ಮಾಡ್ಬೇಕಾಗುತ್ತಾ?

ಸಾರಿಗೆ ಸಚಿವ ದಯಾಶಂಕರ್​ ಸಿಂಗ್​ ‘‘ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’’ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​ ಮತ್ತು ಹಾಲಿನ ಟ್ಯಾಂಕರ್​ ನಡುವೆ ಭೀಕರ ಅಪಘಾತ; 18 ಜನರು ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

https://newsfirstlive.com/wp-content/uploads/2024/07/Truck-Accident-1.jpg

Load More