ಬಸ್​​-ಟ್ರಕ್​​​ ನಡುವೆ ಭೀಕರ ಅಪಘಾತ.. ಬೆಂಗಳೂರು ಮೂಲದ 8 ಮಂದಿ ಸಾವು, 30 ಜನರಿಗೆ ಗಾಯ

author-image
AS Harshith
Updated On
ಬಸ್​​-ಟ್ರಕ್​​​ ನಡುವೆ ಭೀಕರ ಅಪಘಾತ.. ಬೆಂಗಳೂರು ಮೂಲದ 8 ಮಂದಿ ಸಾವು, 30 ಜನರಿಗೆ ಗಾಯ
Advertisment
  • ತಿಮ್ಮಪ್ಪನ ದರ್ಶನ ಪಡೆದು ಬರುವಾಗ ಅಪಘಾತ
  • ಬಸ್​ ಅಪಘಾತದಲ್ಲಿ ಸಾವನ್ನಪ್ಪಿದ ಎಂಟು ಮಂದಿ
  • ನಿಯಂತ್ರಣ ಕಳೆದುಕೊಂಡು ಟ್ರಕ್​ಗೆ ಡಿಕ್ಕಿ ಹೊಡೆದ ಬಸ್

ಚಿಕ್ಕಬಳ್ಳಾಪುರ: ಭೀಕರ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ ಘಟನೆ ಆಂಧ್ರದ ಚಿತ್ತೂರು ಬಳಿ ನಡೆದಿದೆ. ಅಪಘಾತದಲ್ಲಿ 30 ಪ್ರಯಾಣಿಕರು ಗಾಯಗೊಂಡಿದ್ದಾರೆ.

publive-image

ನಿನ್ನೆ ಶುಕ್ರವಾರ ಸಂಜೆ ನಡೆದಿರುವ ಅಪಘಾತ ಇದಾಗಿದೆ. ಚಿತ್ತೂರು -ಬೆಂಗಳೂರು ಹೆದ್ದಾರಿಯ ಮೊಗಲಿ ಘಾಟ್ ಬಳಿ ಎಪಿಎಸ್ಆರ್​​​ಟಿಸಿ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೃತರಲ್ಲಿ ಬಹುತೇಕರು ಬೆಂಗಳೂರಿನವರು ಎನ್ನಲಾಗಿದೆ.

publive-image

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಬರುವಾಗ ಕಾರಿನ ಮೇಲೆ ಬಿದ್ದ ಲಾರಿ; ಕರ್ನಾಟಕದ ಮೂವರು ಸಾವು

ಪ್ರಯಾಣಿಕರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಸ್​​ನಲ್ಲಿ ವಾಪಸ್ ತೆರಳುವ ವೇಳೆ ದುರ್ಘಟನೆ ನಡೆದಿದೆ. ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಎಪಿಎಸ್​​ಆರ್​​​ಟಿಸಿ ಬಸ್ ಅಪಘಾತಕ್ಕೀಡಾಗಿದೆ. ಹೀಗಾಗಿ 8 ಜನರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಅಯ್ಯೋ..ಹಸಿವು..ಹಸಿವು! ಬಳ್ಳಾರಿಯಲ್ಲಿ ತೂಕದ ಲೆಕ್ಕಚಾರದಲ್ಲಿ ಊಟ.. ಜೈಲೂಟ ಸಾಲದೆ ಪರದಾಡುತ್ತಿರೋ ದಾಸ

publive-image

ಬಸ್ ನಿಯಂತ್ರಣ ಕಳೆದುಕೊಂಡು ಟ್ರಕ್ ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಪಲಮನೇರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

publive-image

ದುರ್ಘಟನೆ ಬಗ್ಗೆ ತಿಳಿದ ಆಂಧ್ರ ಸಿ ಎಂ ಚಂದ್ರಬಾಬು ನಾಯ್ಡು ಮೃತ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment