Advertisment

ಭೀಕರ ರಸ್ತೆ ಅಪಘಾತ, ಹೆದ್ದಾರಿ ಸೇತುವೆ ಗೋಡೆಗೆ ಗುದ್ದಿದ ಬಸ್​!12 ಜನರ ಸಾವು

author-image
Gopal Kulkarni
Updated On
ಭೀಕರ ರಸ್ತೆ ಅಪಘಾತ, ಹೆದ್ದಾರಿ ಸೇತುವೆ ಗೋಡೆಗೆ ಗುದ್ದಿದ ಬಸ್​!12 ಜನರ ಸಾವು
Advertisment
  • ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ರಣಭೀಕರ ಅಪಘಾತ 12 ಬಲಿ, 37 ಗಾಯ
  • ಹೆದ್ದಾರಿ ಸೇತುವೆಯ ಗೋಡೆಗೆ ವೇಗವಾಗಿ ಬಂದು ಬಡಿದು ನಜ್ಜುಗುಜ್ಜಾದ ಬಸ್
  • ಅಪಘಾತಕ್ಕೆ ಕಾರಣವೇನು ಎಂದು ಇನ್ನೂ ತಿಳಿದು ಬಂದಿಲ್ಲ ಎಂದ ಪೊಲೀಸರು​

ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 12 ಜನರ ದುರ್ಮರಣವನ್ನು ಅಪ್ಪಿದ್ದು, 40 ಜನರಿಗೆ ಗಂಭೀರ ಗಾಯಗಳಾಗಿವೆ. ಸಲಾಸರ್​ದಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಬರುತ್ತಿದ್ದ ಬಸ್ ಸಿಕಾರ್ ಜಿಲ್ಲೆಯ ಲಕ್ಷ್ಮೀಗರ್ ಸಮೀಪದಲ್ಲಿ ಹೆದ್ದಾರಿಯ ಸೇತುವೆ ಗೊಡೆಗೆ ಗುದ್ದಿದೆ ಪರಿಣಾಮವಾಗಿ 12 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.ಇನ್ನು ಗಂಭೀರವಾಗಿ ಗಾಯಗೊಂಡಿರುವವರಲ್ಲಿ ಅನೇಕರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಲಕ್ಷ್ಮೀನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.

Advertisment

ಪೊಲೀಸರು ಹೇಳುವ ಪ್ರಕಾರ ಈ ಒಂದು ಘಟನೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನಡೆದಿದೆ. ಸಲಾಸರ್​ನಿಂದ ಬರುತ್ತಿದ್ದ ಬಸ್​ ವಿಪರೀತ ವೇಗದಿಂದಾಗಿ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯ ಸೇತುವೆಯ ಗೋಡೆಗೆ ಗುದ್ದಿದೆ ಪರಿಣಾಮವಾಗಿ ಸ್ಥಳದಲ್ಲಿಯೇ 12 ಜನರು ಪ್ರಾಣ ಕಳೆದುಕೊಂಡಿದ್ದು ಬಹಳಷ್ಟು ಜನರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಸಿಕಾರ್ ಜಿಲ್ಲೆಯ ಎಸ್​ಪಿ ಭುವನ್ ಭೂಷಣ್ ಹೇಳಿದ್ದಾರೆ.

ಇದನ್ನೂ ಓದಿ:3 ದಿನ ಮನೆಯಲ್ಲಿ ಮಗ ಸತ್ತಿದ್ದೂ ಗೊತ್ತಾಗಲಿಲ್ಲ.. ತುತ್ತು ಅನ್ನ ತಿಂದಿಲ್ಲ; ಅಂಧ ಅಪ್ಪ, ಅಮ್ಮನ ಕರುಣಾಜನಕ ಕಥೆ!

ಎಸ್​ ಕೆ ಆಸ್ಪತ್ರೆಯ ಅಧೀಕ್ಷಕರು ಹೇಳುವ ಪ್ರಕಾರ ಅಪಘಾತವಾದಾಗ ಸ್ಥಳದಲ್ಲಿಯೇ ಸುಮಾರು 7 ಜನರ ಸಾವನ್ನಪ್ಪಿದ್ದರು. ಆಸ್ಪತ್ರೆಗೆ ಕರೆತಂದಿದ್ದ 37 ಜನರಲ್ಲಿ ಇಬ್ಬರು ಮೃತಪಟ್ಟಿದ್ದರು. ಇನ್ನು ಮೂವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನು ಗಾಯಾಳುಗಳಲ್ಲಿ 7 ಜನರನ್ನು ಜೈಪುರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. 22 ರಿಂದ 23 ಜನರಿಗೆ ಇನ್ನೂ ಚಿಕಿತ್ಸೆಯು ಮುಂದುವರಿದೆ ಎಂದು ಮಹೇಂದ್ರ ಕಿಚಡ್​ ಹೇಳಿದ್ದಾರೆ.

Advertisment

ಇದನ್ನೂ ಓದಿ:ಎಂಟು ಗುಂಡಿಗೆಯ ಪ್ಯಾಂಟಮ್​ ಇನ್ನಿಲ್ಲ.. ಸೇನಾ ಕಾರ್ಯಾಚರಣೆಯಲ್ಲಿ ಜೀವ ಬಿಟ್ಟ ಧೈರ್ಯಶಾಲಿ ಶ್ವಾನ; ಆಗಿದ್ದೇನು?

ಇನ್ನೂ ಭೀಕರ ಅಪಘಾತದ ವಿಚಾರವಾಗಿ ಮಾತನಾಡಿರುವ ರಾಜಸ್ಥಾನ

ನದ ಸಿಎಂ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿರುವ ಭಜನ್​ಲಾಲ್ ಶರ್ಮಾ. ಈ ಒಂದು ಅಪಘಾತ ನಿಜಕ್ಕೂ ಹೃದಯ ವಿದ್ರಾವಕ. ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಶ್ರೀರಾಮನಲ್ಲಿ ಬೇಡಿಕೊಳ್ಳುತ್ತೇನೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ನೋವನ್ನು ವ್ಯಕ್ತಪಡಿಸಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಈ ಘಟನೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ತನಿಖೆಯ ನಡೆಯುತ್ತಿದ್ದು ಈ ಭೀಕರ ಅಪಘಾತ ಹೇಗಾಯಿತು ಎಂದು ಸದ್ಯದಲ್ಲಿಯೇ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ವೇಗದಿಂದ ಬಂದ ಬಸ್​ ಏಕಾಏಕಿ ದಿಕ್ಕುತಪ್ಪಿದಂತಾಗಿ ಸೇತುವೆಯ ಗೋಡೆಗೆ ಭೀಕರವಾಗಿ ಡಿಕ್ಕಿ ಹೊಡೆಯಿತು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment