/newsfirstlive-kannada/media/post_attachments/wp-content/uploads/2025/02/VIRAT-KOHLI-8.jpg)
ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ವಿಶ್ವದ ದಿಗ್ಗಜ ಬೌಲರ್ಗಳನ್ನ ನಿದ್ದೆಯಲ್ಲೂ ಕಾಡಿದ ಕಲಾಕಾರ. ಕೊಹ್ಲಿಯನ್ನ ಔಟ್ ಮಾಡೋಕೆ ಆಗದೇ ವಿಶ್ವ ಶ್ರೇಷ್ಠ ಬೌಲರ್ಸ್, ಲೆಜೆಂಡರಿ ಕ್ಯಾಪ್ಟನ್ಗಳೇ ಪರದಾಡಿದ ಹಲವು ಕಥೆಗಳನ್ನ ಇತಿಹಾಸ ಹೇಳುತ್ತೆ. ಈಗ ಕೊಹ್ಲಿ ಖದರ್ ಮಾಯವಾಗಿದೆ. ಸಾಮಾನ್ಯ ಬಸ್ ಡ್ರೈವರ್ಗೂ ಕೂಡ ವಿಶ್ವವನ್ನೇ ಗೆದ್ದ ವಿರಾಟನ ಔಟ್ ಮಾಡೋ ಕಲೆ ಗೊತ್ತಾಗಿದೆ.
ಬಸ್ ಡ್ರೈವರ್ಗೂ ಗೊತ್ತಾಯ್ತು ಹಣೆ ಬರಹ
ವಿರಾಟ್ ಕೊಹ್ಲಿ.. ಮಾರ್ಡ್ರನ್ ಡೇ ಕ್ರಿಕೆಟ್ ಕಂಡ ಗ್ರೆಟೆಸ್ಟ್ ಲೆಜೆಂಡ್.. ಕ್ರಿಕೆಟ್ನಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ಮೆರೆದಾಡ್ತಿರೋ ಸಾಮ್ರಾಟ. ಕೊಹ್ಲಿ ಪ್ಯಾಡ್ ಕ್ರಿಸ್ಗಳಿದ್ರೆ, ಎದುರಾಳಿಗಳ ಎದೆಯಲ್ಲಿ ಢವ ಢವ ಶುರುವಾಗ್ತಿತ್ತು. ಕ್ಯಾಪ್ಟನ್ಗೆ ಫೀಲ್ಡ್ ಸೆಟ್ ಮಾಡೋ ತಲೆಬಿಸಿಯಾದ್ರೆ, ಬೌಲರ್ಗೆ ಹೇಗಪ್ಪಾ ಬೌಲಿಂಗ್ ಮಾಡ್ಲಿ ಅನ್ನೋ ಭಯ ಕಾಡ್ತಿತ್ತು. ಈಗ ಕೊಹ್ಲಿಯನ್ನ ಕಟ್ಟಿ ಹಾಕೋದು ದೊಡ್ಡ ಸವಾಲೇ ಅಲ್ಲ. ಪ್ರೊಫೆಶನಲ್ ಕ್ರಿಕೆಟರ್ಸ್ ಬಿಡಿ. ಒಬ್ಬ ಸಾಮಾನ್ಯ ಬಸ್ ಡ್ರೈವರ್ಗೂ ಕೊಹ್ಲಿ ಹಣೆಬರಹ ಗೊತ್ತಾಗಿದೆ.
ಕಳಪೆ ಫಾರ್ಮ್ ಸುಳಿಗೆ ಸಿಲುಕಿ ಪರದಾಡ್ತಿರೋ ಕೊಹ್ಲಿ, ಬಿಸಿಸಿಐ ಬಾಸ್ಗಳ ಖಡಕ್ ಸೂಚನೆ ಮೇರೆ ರಣಜಿ ಟ್ರೋಫಿ ಪಂದ್ಯವನ್ನಾಡಿದ್ರು. ಕೊಹ್ಲಿಯಂತಹ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಅಖಾಡಕ್ಕೆ ಇಳಿದಿದ್ದು ರಣಜಿ ಟೂರ್ನಿಯ ರಂಗೇರಿಸಿತ್ತು. ಫುಲ್ ಎಕ್ಸೈಟ್ಮೆಂಟ್ನಲ್ಲಿ ಫ್ಯಾನ್ಸ್ ಮೈದಾನಕ್ಕೆ ದೌಡಾಯಿಸಿದ್ರೆ, ಎದುರಾಳಿ ರೈಲ್ವೇಸ್ ತಂಡದಲ್ಲಿ ಕೊಹ್ಲಿಯನ್ನ ಔಟ್ ಮಾಡೋದು ಹೇಗೆ ಅನ್ನೋ ಚಿಂತೆ ಕಾಡ್ತಿತ್ತು. ಹೀಗೆ ಟೆನ್ಶನ್ನಲ್ಲಿದ್ದ ವೇಳೆ ತಂಡದ ವೇಗಿ ಹಿಮಾಂಶು ಸಂಗ್ವಾನ್ಗೆ ಟೀಮ್ ಬಸ್ನ ಡ್ರೈವರ್ ಒಂದು ಟಿಪ್ಸ್ ಕೊಟ್ಟಿದ್ರಂತೆ. 5 ಅಥವಾ 6ನೇ ಸ್ಟಂಪ್ ಲೈನ್ನಲ್ಲಿ ಬಾಲಿಂಗ್ ಹಾಕಿ ಸಾಕಿ. ಕೊಹ್ಲಿ ತಾನಾಗೇ ಔಟ್ ಆಗ್ತಾರೆ ಎಂದು.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಮೊದಲ ODI ಪಂದ್ಯ ಯಾವಾಗ? ಈ ಚಾನೆಲ್ನಲ್ಲಿ ಫ್ರೀಯಾಗಿ ನೋಡಬಹುದು..
ಬಸ್ಡ್ರೈವರ್ ನೀಡಿದ ಟಿಪ್ಸ್ನ ಆನ್ಫೀಲ್ಡ್ನಲ್ಲಿ ರೈಲ್ವೇಸ್ ಟೀಮ್ ಸಖತ್ ಆಗಿ ವರ್ಕೌಟ್ ಮಾಡಿತು. ಕೊಹ್ಲಿ ಬ್ಯಾಟಿಂಗ್ ಬಂದ ಬಳಿಕ ಆಫ್ ಸ್ಟಂಪ್ ಲೈನ್ಲ್ಲಿ ಸತತವಾಗಿ ಎಸೆತಗಳನ್ನ ಹಾಕಿ ಕೆಣಕಲು ಟ್ರೈ ಮಾಡ್ತು. ಸಿಕ್ಕಾಪಟ್ಟೆ conscious ಆಗಿದ್ದ ಕೊಹ್ಲಿ ಎಲ್ಲಾ ಎಸೆತ ಬಿಟ್ರು. ಇದ್ರ ನಡುವೇ ಹಿಮಾಂಶು ಸಂಗ್ವಾನ್ ಒಂದು ಎಸೆತವನ್ನ ಒಳಗೆ ಹಾಕಿದ್ರು ಅಷ್ಟೇ. ಬಾಲ್ ಬಡಿದ ರಭಸಕ್ಕೆ ಆಫ್ ಸ್ಟಂಪ್ ಒಂದು ರೌಂಡ್ ವಾಕಿಂಗ್ಗೆ ಹೋಯ್ತು.
ಟೆಸ್ಟ್ನಲ್ಲೂ, ರಣಜಿಯಲ್ಲೂ ಫ್ಲಾಪ್..!
ಟೆಸ್ಟ್ನಲ್ಲಿ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, ರಣಜಿ ಅಖಾಡದಲ್ಲೂ ಮಕಾಡೆ ಮಲಗಿದ್ದಾಯ್ತು. ಇದೀಗ 8 ತಿಂಗಳ ಅಂತರದ ಬಳಿಕ ಏಕದಿನ ಫಾರ್ಮೆಟ್ ಕಮ್ಬ್ಯಾಕ್ ಮಾಡ್ತಿದ್ದಾರೆ. ವೈಟ್ಬಾಲ್ ಫಾರ್ಮೆಟ್ನಲ್ಲಾದ್ರೂ ಕೊಹ್ಲಿ ಫಾರ್ಮ್ಗೆ ಮರಳ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ. ಮಹತ್ವದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸವಾಲು ಮುಂದಿರೋದ್ರಿಂದ, ಇಂಗ್ಲೆಂಡ್ ಸರಣಿಯಲ್ಲಿ ಕೊಹ್ಲಿ ಪರ್ಫಾಮೆನ್ಸ್ ಮೇಲೆ ಎಲ್ಲರ ಹದ್ದಿನ ಕಣ್ಣಿದೆ.
ಉಳಿದ ಫಾರ್ಮೆಟ್ಗೆ ಹೋಲಿಸಿದ್ರೆ ಏಕದಿನ ಮಾದರಿಯಲ್ಲಿ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಕಳೆದ 2 ವರ್ಷದ ಅವಧಿಯಲ್ಲಿ ಸಾಲಿಡ್ ಆಟವಾಡಿದ್ದಾರೆ. ಈ ಟ್ರ್ಯಾಕ್ ರೆಕಾರ್ಡ್ ಸದ್ಯಕ್ಕೆ ಸಮಾಧಾನ ತರಿಸಿದೆ. ಆದ್ರೀಗ ಕೊಹ್ಲಿಯನ್ನ ಔಟ್ ಮಾಡೋ ಕಲೆ ಸಾಮಾನ್ಯ ಬಸ್ ಡ್ರೈವರ್ಗೂ ಗೊತ್ತಾಗಿದೆ. ಇಂಗ್ಲೆಂಡ್ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಬೌಲರ್ಸ್ ಕೊಹ್ಲಿ ವೀಕ್ನೆಸ್ ಮೇಲೆ ದಾಳಿ ನಡೆಸೋದು ಕನ್ಫರ್ಮ್. ಆ ವೀಕ್ನೆಸ್ನ ಕೊಹ್ಲಿ ಮೆಟ್ಟಿ ನಿಲ್ತಾರಾ ಅನ್ನೋದೇ ದೊಡ್ಡ ಪ್ರಶ್ನೆ.
ಇದನ್ನೂ ಓದಿ: Pushpalatha: ಕಳಚಿದ ಮತ್ತೊಂದು ಹಿರಿಯ ಕೊಂಡಿ.. ಖ್ಯಾತ ನಟಿ ಪುಷ್ಪಲತಾ ನಿಧನ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್