/newsfirstlive-kannada/media/post_attachments/wp-content/uploads/2024/05/Tracktor-Accident-3.jpg)
ಕೊಪ್ಪಳ: ಇಲ್ಲಿನ ಹೊಸಲಿಂಗಾಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಬಸ್ವೊಂದು ಟ್ರ್ಯಾಕ್ಟರ್ ಟ್ರ್ಯಾಲಿಗೆ ಹಿಂಬದಿಯಿಂದ ಗುದ್ದಿದೆ. ಪರಿಣಾಮ ಟ್ರ್ಯಾಲಿಯಲ್ಲಿದ್ದ ನಾಲ್ವರು ಮೃತರಾಗಿದ್ದಾರೆ. ಟ್ರ್ಯಾಲಿಯಲ್ಲಿದ್ದ 9 ಜನರಿಗೆ ಗಂಭೀರ ಗಾಯವಾಗಿದೆ.
ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ನಡೆದಿದ್ದ ಘಟನೆ ಇದಾಗಿದೆ. ಸಾವನ್ನಪ್ಪಿದವರು ಯಲಬುರ್ಗಾದ ಕರಮುಡಿ ಮೂಲದವರು ಎಂದು ಗುರುತಿಸಲಾಗಿದೆ.
ಹುಲಿಗಿ ದರ್ಶನಕ್ಕೆ ಕುಟುಂಬಸ್ಥರು
ಒಂದೇ ಕುಟುಂಬದವರು ಯಲಬುರ್ಗಾದಿಂದ ಹುಲಿಗಿ ದರ್ಶನಕ್ಕೆ ಟ್ರ್ಯಾಕ್ಟರ್ನಲ್ಲಿ ಬಂದಿದ್ದರು. ದರ್ಶನ ಪಡೆದು ಮನೆಗೆ ಮರಳುವಾಗ ವೇಗವಾಗಿ ಬಂದ ಬಸ್ವೊಂದು ಟ್ರ್ಯಾಕ್ಟರ್ ಹಿಂಬದಿಗೆ ಗುದ್ದಿದೆ. ಹೊಸಪೇಟೆ ಮೂಲದ ಟೂರಿಸ್ಟ್ ಹಾಗೂ ಟ್ರಾವೆಲ್ಸ್ ಬಸ್ ನಿಂದ ಅಪಘಾತ ಸಂಭವಿಸಿದೆ. ಬಸ್ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿತ್ತು. ಸುಮಾರು 25 ಕ್ಕೂ ಹೆಚ್ಚು ಜನರು ಟ್ರ್ಯಾಕ್ಟರ್ನಲ್ಲಿ ಇದ್ದರು. ಅಪಘಾತ ಸಂಭವಿಸಿದಂತೆ ಬಸ್ ಚಾಲಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಮೊದಲೊಂದು ಮದುವೆ, 2 ಮಕ್ಕಳು.. ಆದ್ರೂ ಸೀರಿಯಲ್ ಗೆಳತಿ ನೆನಪಿನಲ್ಲೇ ನಟ ಚಂದು ಆತ್ಮಹತ್ಯೆ ಮಾಡಿಕೊಂಡ್ರಾ?
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ಸುಮಾರು 9 ಜನರಿಗೆ ಗಂಭೀರ ಗಾಯಗಳಾಗಿವೆ. ತಲೆ ಭಾಗ, ಎದೆ ಭಾಗ, ಕಾಲಿಗೆ ಪೆಟ್ಟು ಬಿದ್ದು ನರಳಾಡುತ್ತಿದ್ದರು. ಕೂಡಲೇ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ನಟಿ ಪವಿತ್ರಾ ಸಾವನ್ನು ಕಣ್ಣಾರೆ ಕಂಡ ಚಂದು.. ಗೆಳತಿ ಸಾವು ಅರಗಿಸಿಕೊಳ್ಳಲಾಗದೆ ಕಿರುತೆರೆ ನಟ ಆತ್ಮಹತ್ಯೆ
ಓವರ್ ಟೇಕ್ ಮಾಡಿದ ಚಾಲಕ
ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಯಶೋಧಾ ವಂಟಗೋಡಿ. ಬಸ್ ಚಾಲಕನಿಂದ ಈ ಅಪಘಾತ ನಡೆದಿದೆ ಎಂದು ಹೇಳಿದ್ದಾರೆ. ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಇದ್ದವರು ಕೈಯಲ್ಲಿ ಸಿಗ್ನಲ್ ಮಾಡಿದ್ರು, ಆದರೂ ಓವರ್ ಟೇಕ್ ಮಾಡಲು ಹೋಗಿ ಗುದ್ದಿದ್ದಾನೆ. ಗುದ್ದಿ ರಭಸಕ್ಕೆ ಬಸ್ ನ ಮುಂಭಾಗ ಸಂಪೂರ್ಣ ಡ್ಯಾಮೇಜ್ ಆಗಿದೆ. ಅಪಘಾತ ಹಿನ್ನೆಲೆ ರಾತ್ರಿಯೆಲ್ಲ ಟ್ರಾಫಿಕ್ ಜಾಮ್ ಆಗಿದೆ ಎಂದು ಹೇಳಿದ್ದಾರೆ.
ಪೊಲೀಸರು ಬಸ್, ಟ್ರ್ಯಾಕ್ಟರ್ ತೆರವುಗೊಳಿಸಲು ರಾತ್ರಿಯೆಲ್ಲ ಹರಸಹಾಸ ಪಟ್ಟಿದ್ದಾರೆ. ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ