Advertisment

ಸ್ಟೇರಿಂಗ್​ ಕಟ್​​! ಸರ್ಕಾರಿ ಬಸ್​ ಪಲ್ಟಿ; 30ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಾಯ, ಓರ್ವ ವಿದ್ಯಾರ್ಥಿನಿ ಗಂಭೀರ

author-image
AS Harshith
Updated On
ಸ್ಟೇರಿಂಗ್​ ಕಟ್​​! ಸರ್ಕಾರಿ ಬಸ್​ ಪಲ್ಟಿ; 30ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಗಾಯ, ಓರ್ವ ವಿದ್ಯಾರ್ಥಿನಿ ಗಂಭೀರ
Advertisment
  • ಸ್ಟೇರಿಂಗ್​ ಕಟ್​ ಆಗಿ ಪಲ್ಟಿ ಹೊಡೆದ ಸರ್ಕಾರಿ ಬಸ್​
  • ಈಶಾನ್ಯ ಸಾರಿಗೆ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು
  • ಬಸ್​ ಪಲ್ಟಿ ಹೊಡೆದ ಪರಿಣಾಮ 30ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ರಾಯಚೂರು: ಸ್ಟೇರಿಂಗ್ ಕಟ್ ಆಗಿ ಈಶಾನ್ಯ ಸಾರಿಗೆ ಬಸ್ ಪಲ್ಟಿ ಹೊಡೆದ ಘಟನೆ ನಡೆದಿದೆ. ರಾಯಚೂರು ತಾಲೂಕಿನ ಸಗಮಕುಂಟಾ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಬಸ್​ ಪಲ್ಟಿ ಹೊಡೆದ ಪರಿಣಾಮ ಬಸ್​​ನಲ್ಲಿದ್ದ 30ಕ್ಕೂ ಹೆಚ್ಚು ಸ್ಕೂಲ್ ಮಕ್ಕಳಿಗೆ ಗಾಯಗಳಾಗಿವೆ.

Advertisment

ಇದನ್ನೂ ಓದಿ: ಮದುವೆ ಮುಗಿಸಿ ಬರುವಾಗ ಕಾರು ಅಪಘಾತ.. ಓರ್ವ ಸಾವು, ಇಬ್ಬರಿಗೆ ಗಾಯ

ಕೊರ್ವಿಹಾಳದಿಂದ ರಾಯಚೂರಿಗೆ ಬರುತ್ತಿದ್ದ ಈಶಾನ್ಯ ಸಾರಿಗೆ ಬಸ್ ಪಲ್ಟಿ ಹೊಡೆದಿದೆ. ಬಸ್ ನಲ್ಲಿದ್ದ ಕೊರ್ವಿಹಾಳ ಗ್ರಾಮದ ವಿದ್ಯಾರ್ಥಿನಿ ‌ಸಂಗೀತಾಗೆ ಗಂಭೀರ ಗಾಯವಾಗಿದೆ. ಗಾಯಗೊಂಡ 9ನೇ ತರಗತಿ ವಿದ್ಯಾರ್ಥಿನಿಯನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment