newsfirstkannada.com

ವೇಗವಾಗಿ ಬಂದು ಕಂದಕಕ್ಕೆ ಉರುಳಿ ಬಿದ್ದ ಬಸ್; 28 ಮಂದಿ ಸಾವು, 22 ಜನರು ಗಂಭೀ​ರ

Share :

Published May 29, 2024 at 1:19pm

    ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರು ತುಂಬಿದ್ದ ಬಸ್​

    ಮಹಿಳೆ ಮತ್ತು ಮಕ್ಕಳು ಸೇರಿ ಬಸ್​ನಲ್ಲಿದ್ದ 28 ಜನರು ಸಾವು

    ಬಸ್​ ಅಪಘಾತದಲ್ಲಿ 22 ಮಂದಿಗೆ ಗಂಭೀರ ಗಾಯ, ಮುಂದುವರೆದ ಚಿಕಿತ್ಸೆ

ಪ್ರಯಾಣಿಕರನ್ನು ತುಂಬಿದ್ದ ಬಸ್​ವೊಂದು ಕಂದಕಕ್ಕೆ ಉರುಳಿ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಪರಿಣಾಮ ಮಹಿಳೆ ಮತ್ತು ಮಕ್ಕಳು ಸೇರಿ 28 ಜನರು ಸಾವನ್ನಪ್ಪಿದ್ದಾರೆ.

ಬಲೂಚಿಸ್ತಾನ್​ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಟರ್ಬತ್​ನಿಂದ ಕ್ವೆಟ್ಟಾಗೆ ತೆರಳುತ್ತಿದ್ದ ಬಸ್​ ಬಲೂಚಿಸ್ತಾನ್​​ನಿಂದ 700 ಕಿಮೀ ದೂರದಲ್ಲಿರುವ ವಾಶುಕ್​​ ಪಟ್ಟಣದಲ್ಲಿ ಬರುವ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್​ ವೇಗವಾಗಿ ಸಂಚರಿಸುತ್ತಿದ್ದ ಕಾರಣ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಕಾಲುವೆಗೆ ಉರುಳಿ ಬಿದ್ದ ಕಾರು; 6 ಜನರು ಸಾವು, ಓರ್ವ ಮಹಿಳೆ ಗಂಭೀರ

ಬಸ್​​ ಟೈರ್​​ ಒಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 22 ಜನರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬಾಸಿಮಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇಗವಾಗಿ ಬಂದು ಕಂದಕಕ್ಕೆ ಉರುಳಿ ಬಿದ್ದ ಬಸ್; 28 ಮಂದಿ ಸಾವು, 22 ಜನರು ಗಂಭೀ​ರ

https://newsfirstlive.com/wp-content/uploads/2024/05/Bus-Accident-3.jpg

Load More