/newsfirstlive-kannada/media/post_attachments/wp-content/uploads/2025/01/BU-PASS.jpg)
ಬಸ್ ಟಿಕೆಟ್ ರೇಟ್ ಏರಿಕೆ ಬೆನ್ನಲ್ಲೆ ಈಗ ಸರ್ಕಾರ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕೊಟ್ಟಿದೆ. ಸಾಮಾನ್ಯ ಟಿಕೆಟ್ ದರ ಏರಿಕೆ ನಂತರ ಬಸ್​ ಪಾಸ್ ದರದಲ್ಲೂ ಕೂಡ ಏರಿಕೆ ಮಾಡಿದೆ. ಬಿಎಂಟಿಸಿ ಬಸ್​ ಪಾಸ್​ ದರ ಪರಿಷ್ಕೃತ ದರಪಟ್ಟಿ ಇಂದಿನಿಂದ ಜಾರಿ ಬರಲಿದೆ. ದಿನದ ಪಾಸ್, ವಾರದ ಪಾಸ್ ಹಾಗೂ ತಿಂಗಳ ಪಾಸ್​ಗಳ ಬೆಲೆ ಏರಿಕೆಯಾಗಲಿದೆ.
ಸಾಮಾನ್ಯ ಬಸ್​ಪಾಸ್ ದರ ಪರಿಷ್ಕರಣೆ ಹೀಗಿದೆ
ದಿನದ ಪಾಸುಗಳ ಪ್ರಸ್ತುತ ದರ 70 ರೂಪಾಯಿ ಇದೆ. ಇದು ಇಂದಿನಿಂದ 80 ರೂಪಾಯಿ ಆಗಲಿದೆ.. ವಾರದ ಪಾಸು ಪ್ರಸ್ತುತ ದರ 300 ರೂಪಾಯಿ ಇದ್ದು, ನೂತನ ದರ 350 ರೂಪಾಯಿ ಆಗಲಿದೆ. ಮಾಸಿಕ ಪಾಸು ಪ್ರಸ್ತುತ ದರ 1050 ರೂಪಾಯಿ ಇದ್ದು ಇದರ ನೂತನ ದರ 1200 ರೂಪಾಯಿಯಾಗಿದಲಿದೆ. ಇನ್ನು ವಜ್ರ ಮತತು ವಾಯು ವಜ್ರಗಳ ದಿನದ ಪಾಸುಗಳ ದರ 120 ರಿಂದ 140ಕ್ಕೆ ತಲುಪಲಿದೆ. ಮಾಸಿಕ ಪಾಸಿನ ದರ 1800 ರೂಪಾಯಿಯಿಂದ 200 ರೂಪಾಯಿವರೆಗೆ ತಲುಪಲಿದ್ದು. ವಾಯುವಜ್ರ ಬಸ್ ಪಾಸ್ ನೂತನ ದರ 4 ಸಾವಿರ ರೂಪಾಯಿಗೆ ತಲುಪಲಿದೆ. ಇನ್ನು ವಜ್ರ ಬಸ್​ ವಿದ್ಯಾರ್ಥಿಗಳ ಮಾಸಿಕ ಪಾಸಿನ ದರ ಸದ್ಯ 1200 ರೂಪಾಯಿ ಇದೆ. ಅದು 1400ಕ್ಕೆ ತಲುಪುವುದು ಖಚಿತವಾಗಿದೆ.
ಇಂದಿನಿಂದ ಬಸ್ ಪಾಸ್ ದರ ಏರಿಕೆ
ಟಿಕೆಟ್ ದರ ಏರಿಕೆ ಬೆನ್ನಿನಲ್ಲೆ ಇಂದಿನಂದಲೇ ಎಲ್ಲಾ ಬಸ್ ಪಾಸ್ ದರ ಏರಿಕೆಯಾಗಲಿದೆ. ಈ ತಿಂಗಳ ಪಾಸ್​ಗಳನ್ನು ಸಾರ್ವಜನಿಕರು ಈಗಾಗಲೇ ಖರೀದಿಸಿದ್ದಾರೆ. ಇವತ್ತಿನಿಂದ ಖರೀದಿ ಮಾಡುವರಿಗೆ ಪರಿಷ್ಕೃತ ದರ ಅನ್ವಯವಾಗಲಿದೆ. ಕಾರರಣಾಂತರಗಳಿಂದ ಲೇಟ್ ಗಿ ಪಾಸ್ ಖರೀದಿ ಮಾಡುತ್ತಿರುವವರಿಗೆ ಶಾಕ್ ಕಾದಿದೆ. ಟಿಕೆಟ್ ರೇಟ್ ಜಾಸ್ತಿ ಆದಾಗಲೇ ಪಾಸ್ ರೇಟ್​ ಜಾಸ್ತಿ ಆಗುತ್ತೆ ಅಂತ ನಿರೀಕ್ಷೆ ಇಟ್ಟಿದ್ದರು ಜನರು. ನಿರೀಕ್ಷೆಯಂತೆ ಪಾಸ್ ದರ ಏರಿಕೆಯಾಇಗದೆ.
ಇದನ್ನೂ ಓದಿ:ಡಿನ್ನರ್ ಪಾಲಿಟಿಕ್ಸ್​ ಬೆನ್ನಲ್ಲೇ 2 ಪ್ರತಿಷ್ಠಿತ ದೇವಾಲಯಗಳಿಗೆ ಇಂದು ಡಿ.ಕೆ ಶಿವಕುಮಾರ್ ಭೇಟಿ
ಆದರೆ ಹಿರಿಯ ನಾಗರಿಕರಿಗಾದರೂ ರಿಯಾಯಿತಿ ಕೊಡಬೇಕಿತ್ತು ಎಂಬ ಅಭಿಪ್ರಯಾ ಮೂಡಿದೆ. ಶೇಕಡಾ 50 ಪಾವಿತ ಮಾಡುವಂತಹ ಯೋಜನೆ ಹಿರಿಯ ನಾಗರಿಕರಿಗೆ ಬರಬೇಕು. ಬಡಜನರಿಗೆ ಪಾಸ್ ದರ ಏರಿಕೆ ಕಷ್ಟ ಆಗುತ್ತದೆ. ಹಿರಿ ನಾಗರಿಕರಿಗಂಊ ಇದು ಇನ್ನೂ ಹೊರೆಯಾಗಲಿದೆ. ಕೆಲಸ ಮಾಡಲ್ಲ, ಸಂಬಳ ಇಲ್ಲ, ಬೆಲೆ ಏರಿಸಿದ್ರೆ ಹೇಗೆ ಎಂಬ ಬೇಸರ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us