newsfirstkannada.com

ಭೀಕರ ಅಪಘಾತ.. ಪುಟಾಣಿ ಮಕ್ಕಳು ಸೇರಿ 24 ಮಂದಿ ದಾರುಣ ಸಾವು; ಉಳಿದವರಿಗಾಗಿ ಹುಡುಕಾಟ!

Share :

Published August 23, 2024 at 7:42pm

    ಮರ್ಷ್ಯಾಂಗಡಿ ನದಿಗೆ ಬಿದ್ದ 43 ಪ್ರಯಾಣಿಕರಿರುವ ಭಾರತೀಯರ ಬಸ್​

    ಭೀಕರ ದುರಂತದಲ್ಲಿ 24 ಪ್ರಯಾಣಿಕರ ಭೀಕರ ಸಾವು, ಇಬ್ಬರು ನಾಪತ್ತೆ

    ಮಹಾರಾಷ್ಟ್ರದಿಂದ ಹೊರಟಿದ್ದ ಬಸ್​ ಆಯತಪ್ಪಿ ನದಿಗೆ ಬಿದ್ದು ದುರಂತ

ಕಠ್ಮಂಡು:  ನೇಪಾಳದಲ್ಲಿ ನದಿಗೆ ಬಸ್​ ಬಿದ್ದು ಭಾರೀ ದುರಂತ ಸಂಭವಿಸಿದೆ. ಘಟನೆಯಲ್ಲಿ 8 ವರ್ಷದ ಮಗು ಸೇರಿ ಒಟ್ಟು 24 ಜನರು ದುರ್ಮರಣಕ್ಕೀಡಾಗಿದ್ದಾರೆ. 43 ಜನರನ್ನು ಹೊತ್ತುಕೊಂಡು ಮಹಾರಾಷ್ಟ್ರದಿಂದ ಹೊರಟಿದ್ದ ಬಸ್ ಉತ್ತರಪ್ರದೇಶದ ಮಹರಾಜಗಂಜ್ ಜಿಲ್ಲೆಯ 130 ಕಿಲೋ ಮೀಟರ್ ದೂರದಲ್ಲಿ ಬಸ್ ಮರ್ಷ್ಯಾಂಗಡಿ ನದಿಗೆ ಬಿದ್ದು ಬಿಟ್ಟಿದೆ. ಈ ಭೀಕರ ಅಪಘಾತದಲ್ಲಿ ಡ್ರೈವರ್ ಕಂಡಕ್ಟರ್ ಹಾಗೂ 8 ವರ್ಷದ ಮಗು ಸೇರಿ ಒಟ್ಟು 24 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದು 22 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: 120 ವರ್ಷಗಳ ಬಳಿಕ ವಿಶ್ವದ 2ನೇ ಅತಿ ದೊಡ್ಡ ವಜ್ರ ಪತ್ತೆ; ಏನಿದರ ವಿಶೇಷ?

ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬೆಳಗ್ಗೆ ಸುಮಾರು 11.30ಕ್ಕೆ ಈ ಘಟನೆ ನಡೆದಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಗೋರಖಪುರ್ ಮೂಲದ ವಿಷ್ಣು ಕೇಸರವಾಣಿ ಅನ್ನುವವರು ಕೇಸರವಾಡಿ ಟ್ರಾವೆಲ್ಸ್​ನ ಮಾಲೀಕರು. ಮಹಾರಾಷ್ಟ್ರ ಟೂರಿಸ್ಟ್ ಪ್ಯಾಕೇಜ್ ಅಡಿಯಲ್ಲಿ ಮೂರು ಬಸ್​ಗಳನ್ನು ಬಿಟ್ಟಿದ್ದರು. ಪ್ರಯಾಣಿಕರು ಮಹಾರಾಷ್ಟ್ರದ ಭೂಸವಾಲಾದಲ್ಲಿ ಬಸ್ ಪ್ರಯಾಣ ಆರಂಭಿಸಿದ್ದರು.

ಇದನ್ನೂ ಓದಿ: ಹೆಂಡ್ತಿಗೆ ಹಾವಿನ ವಿಷದ ಇಂಜೆಕ್ಷನ್ ಕೊಟ್ಟು ಸಾಯಿಸಿದ ಗಂಡ; ಕಾರಣವೇನು? ಸಿಕ್ಕಿಬಿದ್ದಿದ್ದೇ ರೋಚಕ!

ಪೋಖರಾದಿಂದ ಕಠ್ಮಂಡುವಿಗೆ ಹೋಗುವ ಹಾದಿಯಲ್ಲಿ ಬಸ್ ಆಯತಪ್ಪಿ ನದಿಗೆ ಬಿದ್ದಿದೆ. ಉತ್ತರಪ್ರದೇಶದ ರಕ್ಷಣಾ ತಂಡ ಹೇಳುವ ಪ್ರಕಾರ, ಒಟ್ಟು 43 ಮಂದಿ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ 17 ಮಂದಿ ಪುರುಷರು ಹಾಗೂ 26 ಮಂದಿ ಮಹಿಳೆಯರು ಇದ್ದರು. ಈಗಾಗಲೇ ರಕ್ಷಣಾ ಪಡೆ 41 ಜನರನ್ನು ನದಿಯಿಂದ ಮೇಲಕ್ಕೆ ತಂದಿದ್ದು ಇಬ್ಬರು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಬಸ್​ನ ಡ್ರೈವರ್ ಮುಸ್ತಫಾ ಖಾನ್, ಮತ್ತು ಕಂಡಕ್ಟರ್ ರಾಮಜೀತ್ ಕೂಡ ಸಾವನ್ನಪ್ಪಿದ್ದಾರೆ.

ಇನ್ನೂ ಘಟನೆಯಲ್ಲಿ ಬದುಕುಳಿದವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗಿದೆ. ನೇಪಾಳದಲ್ಲಿರುವ ರಾಯಭಾರಿ ಕಚೇರಿ ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ ಘಟನೆಯಲ್ಲಿ 24 ಜನರು ಮೃತಪಟ್ಟಿದ್ದಾರೆ, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ.. ಪುಟಾಣಿ ಮಕ್ಕಳು ಸೇರಿ 24 ಮಂದಿ ದಾರುಣ ಸಾವು; ಉಳಿದವರಿಗಾಗಿ ಹುಡುಕಾಟ!

https://newsfirstlive.com/wp-content/uploads/2024/08/KATHMANDU-ACCIDENT.jpg

Load More