/newsfirstlive-kannada/media/post_attachments/wp-content/uploads/2025/01/KSRTC-1.jpg)
ರಾಜ್ಯದ ಜನರಿಗೆ ಗ್ಯಾರಂಟಿ ಗಮ್ಮತ್ತು ತೋರಿಸಿ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಮೇಲಿಂದ ಮೇಲೆ ರಾಜ್ಯದ ಜನರಿಗೆ ಶಾಕ್ ಕೊಡ್ತಿದೆ. ಕಾಕಾ ಪಾಟೀಲ್ ನಿಂಗೂ ಫ್ರೀ, ಮಹದೇವಪ್ಪ ನಿಂಗೂ ಫ್ರೀ ಅಂತಿದ್ದ ಸಿಎಂ ಸಿದ್ದರಾಮಯ್ಯ ಈಗ ಜನರಿಗೆ ಫ್ರೀ ಜೊತೆಗೆ ಬೆಲೆ ಹೆಚ್ಚಳನೂ ಅಂತಿದ್ದಾರೆ. ಸರ್ಕಾರ ಒಂದೊಂದೇ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ದುಬಾರಿ ಬರೆ ಎಳೆಯುತ್ತಿದೆ. ಹೆಣ್ಮಕ್ಕಳಿಗೆ ಫ್ರೀ ಶಕ್ತಿ ಕೊಡುತ್ತಿರುವ ಸರ್ಕಾರ ಪುರುಷರ ಜೇಬಿಗೆ ಕೈ ಹಾಕಿ ನಿಶ್ಯಕ್ತಿ ಬರುವಂತೆ ಮಾಡಿದೆ. ತಡರಾತ್ರಿ ಚಳಿಯಲ್ಲಿ ಚುರುಕ್ ಅನ್ನುವಂತೆ ಭಾರೀ ಶಾಕ್ ಕೊಟ್ಟಿದೆ.
ಕೆಎಸ್ಆರ್ಟಿಸಿ ವೇಗದೂತ ಬಸ್‌ಗಳ ಟಿಕೆಟ್ ದರ ಹೆಚ್ಚಳ!
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳ ದರ ಏರಿಕೆ ಆಗಿದೆ. 2020ರಿಂದಲೂ ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಹೀಗಾಗಿ ಈ ಬಾರಿ ಬಸ್ ಪ್ರಯಾಣ ದರ ಪರಿಷ್ಕರಣೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಮಧ್ಯರಾತ್ರಿಯಿಂದ 15ರಷ್ಟು ಟಿಕೆಟ್ ದರ ಏರಿಕೆಯಾಗಿದೆ. ಕೆಎಸ್ಆರ್ಟಿಸಿ ವೇಗದೂತ ಸಾರಿಗೆಯ ಪರಿಷ್ಕೃತ ದರದ ಬಗ್ಗೆ ಮಾಹಿತಿ ನೀಡಿದ್ದು 10 ರಿಂದ 100 ರೂಪಾಯಿವರೆಗೆ ಬಸ್ ಟಿಕೆಟ್ ದರ ಏರಿಕೆಯಾಗಿದೆ.
ಮಾರ್ಗದ ಹೊಸ ದರ ಹೀಗಿದೆ
- ಬೆಂಗಳೂರು ಟು ಮಂಗಳೂರಿಗೆ ಹಿಂದಿನ ದರ 398 ರೂಪಾಯಿ ಇದ್ದು ಹೊಸ ದರ 454 ರೂಪಾಯಿ ಆಗಿದೆ. ₹56 ಹೆಚ್ಚಳ.
- ಬೆಂಗಳೂರು ಟು ಮೈಸೂರಿಗೆ ಹಿಂದಿನ ದರ 141 ರೂಪಾಯಿ ಇದ್ದು, ಹೊಸ ದರ 162 ರೂಪಾಯಿ ಆಗಿದ್ದು ₹21 ಏರಿಸಿದ್ದಾರೆ.
- ಬೆಂಗಳೂರು ಟು ಶಿವಮೊಗ್ಗಕ್ಕೆ ಹಿಂದಿನ ದರ 312 ರೂಪಾಯಿ ಆಗಿದ್ದು ಹೊಸ ದರ 356 ರೂಪಾಯಿ ₹44 ಏರಿಕೆ ಆಗಿದೆ.
- ಬೆಂಗಳೂರು ಟು ಕಲಬುರಗಿಗೆ ಹಿಂದಿನ ದರ 706 ರೂಪಾಯಿ ಆಗಿದ್ದು ಹೊಸ ದರ 805 ಆಗಿದ್ದು ₹99 ಏರಿಕೆ ಆಗಿದೆ
- ಬೆಂಗಳೂರು ಟು ಕೊಪ್ಪಳಕ್ಕೆ ಹಿಂದಿನ ದರ 447 ರೂಪಾಯಿ ಆಗಿದ್ದು ಹೊಸ ದರ 506 ರೂಪಾಯಿ, ₹59 ಹೆಚ್ಚಳ
- ಬೆಂಗಳೂರು ಟು ಬಾಗಲಕೋಟೆಗೆ ಹಿಂದಿನ ದರ 605 ರೂಪಾಯಿ ಆಗಿದ್ದು ಹೊಸ ದರ 685 ರೂಪಾಯಿ ಆಗಿದೆ. ₹80 ಏರಿಕೆ
ಇನ್ನು BMTC ಕೂಡ ಏರಿಕೆಯಾಗಿರೋ ಪರಿಷ್ಕೃತ ದರವನ್ನ ಪ್ರಕಟಿಸಿದ್ದು ಅವು ಹೀಗಿವೆ.
- ಮೆಜೆಸ್ಟಿಕ್ ಟು ಜೆ.ಪಿ ನಗರ ಹಿಂದಿನ ದರ 20 ರೂಪಾಯಿ ಇದ್ದು ಪರಿಷ್ಕೃತ ದರ 24 ರೂಪಾಯಿ ಆಗಿದೆ.
- ಮೆಜೆಸ್ಟಿಕ್ ಟು ನಂದಿನಿ ಲೇಔಟ್ ಹಿಂದಿನ ದರ 25 ರೂಪಾಯಿ ಇದ್ದು ಪರಿಷ್ಕೃತ ದರ 28 ರೂಪಾಯಿ
- ಮೆಜೆಸ್ಟಿಕ್ ಟು ಯಶವಂತಪುರ ರೈಲ್ವೆ ಸ್ಟೇಷನ್ ಹಿಂದಿನ ದರ 20 ಇದ್ದು 23 ರೂಪಾಯಿ ಆಗಿದೆ.
- ಮೆಜೆಸ್ಟಿಕ್ ಟು ಅತ್ತಿಬೆಲೆ 25 ರೂಪಾಯಿ ಇದ್ದ ದರ 30 ರೂಪಾಯಿ ಆಗಿದೆ.
- ಮೆಜೆಸ್ಟಿಕ್ ಟು ದೊಡ್ಡಬಳ್ಳಾಪುರ ಹಿಂದಿನ ದರ 25 ರೂಪಾರಿ ಇದ್ದು ಹೊಸ 30 ರೂಪಾಯಿ ಆಗಿದೆ.
- ಮೆಜೆಸ್ಟಿಕ್ ಟು ಕುಮಾರಸ್ವಾಮಿ ಲೇಔಟ್ ಹಿಂದಿನ ದರ 25 ರೂಪಾಯಿ ಇದ್ದು ಹೊಸ ದರ 28 ರೂಪಾಯಿ
- ಮೆಜೆಸ್ಟಿಕ್ ಟು ಬಿಟಿಎಂ ಲೇಔಟ್ ಹಿಂದಿನ ದರ 25 ರೂಪಾಯಿ ಇದ್ದು ಹೊಸ ದರ 28 ರೂಪಾಯಿ ಆಗಿದೆ.
ಇದನ್ನೂ ಓದಿ:DRDOನಲ್ಲಿ JRFಗೆ ಅರ್ಜಿ ಸಲ್ಲಿಕೆ ಮಾಡಬಹುದು.. ಪರೀಕ್ಷೆ ಇಲ್ಲ, ಸಂದರ್ಶನದಲ್ಲೇ ಅಭ್ಯರ್ಥಿಗಳ ಆಯ್ಕೆ
ಸರ್ಕಾರ ಜನರಿಗೆ ಫ್ರೀ ಕೊಡ್ತಿದ್ದೇವೆ ಎನ್ನುತ್ತಾ ಮತ್ತೊಂದು ಕಡೆ ದರ ಏರಿಕೆ ಮಾಡಿ ಬರೆ ಹಾಕುತ್ತಿದೆ. ಹೊಸ ವರ್ಷದ ಹೊಸ್ತಿಲಲ್ಲೇ ಸರ್ಕಾರಗಳು ಕೊಡ್ತಿರೋ ಶಾಕ್‌ಗೆ ಜನರು ಥಂಡಾ ಹೊಡೆದಿದ್ದಾರೆ. ದುಬಾರಿ ದುನಿಯಾದಲ್ಲಿ ಹೇಗಪ್ಪ ಜೀವನ ನಡೆಸೋದು ಅಂತ ಚಿಂತಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ