ಏಕಾಏಕಿ ಕಳಚಿ ಬಿದ್ದ ಖಾಸಗಿ ಬಸ್ ಟಯರ್
ನಡುರಸ್ತೆಯಲ್ಲೇ ಕಳಚಿದ ಸುಗಮ ಬಸ್ ಟಯರ್
ಪ್ರಯಾಣಿಕರಿದ್ದ ಬಸ್.. ಈಗ ಅವರ ಸ್ಥಿತಿಗತಿ ಹೇಗಿದೆ?
ಚಿಕ್ಕಮಗಳೂರು: ಚಲಿಸುತ್ತಿದ್ದ ಬಸ್ನ ಟಯರ್ ಏಕಾಏಕಿ ಕಳಚಿ ಬಿದ್ದ ಘಟನೆ ದೃಶ್ಯ ಸಮೇತ ಸೆರೆಯಾಗಿದೆ. ಕೂದಲೆಳೆ ಅಂತರದಲ್ಲಿ ಭಾರೀ ದುರ್ಘಟನೆಯೊಂದು ಕೈ ತಪ್ಪಿದೆ.
ಇದನ್ನೂ ಓದಿ: ಪಂಚೆ ಧರಿಸಿ ಬಂದ ರೈತನಿಗೆ GT ಮಾಲ್ ಅಪಮಾನ! ಧೋತಿ ಧರಿಸಿದ್ದಕ್ಕೆ ಮಾಲ್ ಪ್ರವೇಶ ನಿರ್ಬಂಧ!
NR ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ರೋಟರಿ ಸರ್ಕಲ್ನಲ್ಲಿ ಘಟನೆ ನಡೆದಿದೆ. ಸುಗಮ ಹೆಸರಿನ ಖಾಸಗಿ ಬಸ್ ಚಲಿಸುತ್ತಿದ್ದಾಗಲೇ ಟಯರ್ ಕಳಚಿದೆ. ಬಸ್ ನಿಧಾನಗತಿಯಲ್ಲಿದ್ದ ಕಾರಣ ರಸ್ತೆಯಲ್ಲಿ ಬಸ್ ನಿಂತಿದೆ. ಈ ದೃಶ್ಯ ಅಲ್ಲಿನ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ.. ಇಬ್ಬರು ಯುವಕರು ಸಾವು
ಪ್ರಯಾಣಿಕರನ್ನು ತುಂಬಿ ಸಾಗುತ್ತಿದ್ದ ಸುಗಮ ಬಸ್ ಬೆಂಗಳೂರಿನಿಂದ ಶೃಂಗೇರಿಗೆ ಪ್ರಯಾಣ ಬೆಳೆಸಿತ್ತು. ಸರ್ಕಲ್ ಬಳಿ ತಲುಪುತ್ತಿದ್ದಾಗ ಡ್ರೈವರ್ ನಿಧಾನಗತಿಯಲ್ಲಿ ಬಸ್ ಚಾಲನೆ ಮಾಡುತ್ತಿದ್ದರಿಂದ ದೊಡ್ಡ ಅವಾಂತರ ತಪ್ಪಿ ಹೋಗಿದೆ. ಬಸ್ಸಿನ ಎರಡು ಟೈಯರ್ಗಳು ಕಳಚಿ ರಸ್ತೆಯಲ್ಲಿ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ