/newsfirstlive-kannada/media/post_attachments/wp-content/uploads/2025/01/Busbys-stoop-chair-1.jpg)
ಪಟ್ಟಕ್ಕಾಗಿ ಚರಿತ್ರೆಯುದ್ಧಕ್ಕೂ ಯುದ್ಧಗಳೇ ನಡೆದಿವೆ. ಇಂದಿಗೂ ರಾಜಕಾರಣದಲ್ಲಿ ಕುರ್ಚಿಗಾಗಿ ಕುಸ್ತಿ ನಡೀತಾನೇ ಇದೆ. ತೀರಾ ಬಸ್ನಲ್ಲೂ ಸೀಟ್ಗಾಗಿ ಜಗಳ ಆಗುತ್ತದೆ. ಆದರೇ, ಇಲ್ಲೊಂದು ಕುರ್ಚಿ ಇದೆ. ಆ ಕುರ್ಚಿ ಮೇಲೆ ಕುಳಿತುಕೊಳ್ಳೋದಕ್ಕೆ ಜನ ಅಕ್ಷರಶಃ ಬೆಚ್ಚಿಬೀಳ್ತಾರೆ. ಇದೊಂದು ಕುರ್ಚಿ ನೋಡಿದ ಕೂಡಲೇ ಜನ ಬೆವೆತು ಹೋಗುತ್ತಾರೆ.
ಬರೀ ಕುರ್ಚಿ ಅಲ್ಲ..
ಇದು ಸಾಮಾನ್ಯ ಕುರ್ಚಿ ಅಲ್ಲ. ಒಂದು ಕಾಲಕ್ಕೆ ಅವನೊಬ್ಬನ ಅಚ್ಚುಮೆಚ್ಚಿನ ಆರಾಮಾದ ಚೇರ್ ಆಗಿತ್ತು. ಆ ಚೇರ್ ಮೇಲೆ ಯಾರೂ ಕೂರದಂತೆ ನೋಡಿಕೊಳ್ಳುತ್ತಿದ್ದ. ಇದೇ ಕುರ್ಚಿಗಾಗಿಯೇ ಕೊಲೆಯನ್ನು ಮಾಡಿದ. ಆ ಬಳಿಕ ಕೊಲೆಯ ಅಪರಾಧ ಸಾಬೀತಾಗಿ ಕೋರ್ಟ್ ಮರಣದಂಡನೆ ವಿಧಿಸಿತ್ತು. ಇದೇ ಕುರ್ಚಿಗಾಗಿ ಪ್ರಾಣವನ್ನೂ ಕಳೆದುಕೊಂಡ. ಆ ಬಳಿಕ ಯಾರೇ ಈ ಕುರ್ಚಿ ಮೇಲೆ ಕುಳಿತರೂ ಕ್ಷಣಾರ್ಧದಲ್ಲಿ ಸಾಯುತ್ತಿದ್ದಾರೆ.. ಅತ್ಯಂತ ಭೀಕರ ಅನಿಸೋ ಚರಿತ್ರೆಯನ್ನು ಈ ಸಾವಿನ ಸಿಂಹಾಸನ ಹೇಳುತ್ತಿದೆ.
ಥಾಮಸ್ ಬಿಸ್ಪಿ ಕುರ್ಚಿಗಾಗಿ ಜೀವ ತೆಗೆದಿದ್ದ
ಇದು 17ನೇ ಶತಮಾನದ ಅತ್ಯಂತ ಹಳೆಯ ಕುರ್ಚಿ. ಬ್ರಿಟನ್ನ ಉತ್ತರ ಯಾರ್ಕ್ಶೈರ್ನ ಥ್ರಿಷ್ಕ್ ಪಟ್ಟಣದಲ್ಲಿ ಥಾಮಸ್ ಬಸ್ಬಿ ಅನ್ನೋ ನಕಲಿ ನಾಣ್ಯ ತಯಾರಕ ಇದ್ದ. ಇವನಿಗೆ ಹೆಂಡ್ತಿ ಮಕ್ಕಳಿಗಿಂತ್ಲೂ ಹೆಚ್ಚಾಗಿ ಇವನ ಆರಾಮ್ ಚೇರ್ ಮೇಲೆ ಪ್ರೀತಿ ಇತ್ತು. ಮತ್ತೊಬ್ಬರು ತನ್ನ ಕುರ್ಚಿ ಮೇಲೆ ಕೂರದಂತೆ ನೋಡಿಕೊಳ್ಳುತ್ತಿದ್ದ. ಒಮ್ಮೆ ಇವನ ಮಾವ ಡೇನಿಯಲ್ ಆ್ಯಟಿ ಸುಸ್ತಾಯ್ತು ಅಂತ ಇದೇ ಕುರ್ಚಿ ಮೇಲೆ ಕುಳಿತಿದ್ದ. ಆ ದೃಶ್ಯ ನೋಡಿ ಕೂಡಲೇ ಬಸ್ಬಿ ಮಾವನನ್ನು ಅಕ್ಷರಶಃ ಜೀವ ತೆಗೆದಿದ್ದ. ಕೋರ್ಟ್ ಮರಣ ದಂಡನೆ ವಿಧಿಸಿತ್ತು.
ಇದನ್ನೂ ಓದಿ: 13 ವರ್ಷದ ವಿದ್ಯಾರ್ಥಿ ಜತೆ ಮಲಗಿ ಮಗು ಮಾಡಿಕೊಂಡ ಶಿಕ್ಷಕಿ; ಬೆಡ್ರೂಮ್ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?
10ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದರು
1704ರಲ್ಲಿ ಥಾಮಸ್ ಬಸ್ಪಿಯನ್ನು ಗಲ್ಲಿಗೇರಿಸಲಾಯಿತು. ಆ ದಿನದಿಂದ ಇಲ್ಲಿಯ ತನಕ ಸುಮಾರು 10ಕ್ಕೂ ಅಧಿಕ ಮಂದಿ ಈ ಕುರ್ಚಿ ಮೇಲೆ ಕೂತರೇ ಏನಾಗುತ್ತದೆ ಅನ್ನೋ ಹುಂಬ ಧೈರ್ಯ ಮಾಡಿ ಪರೀಕ್ಷಿಸೋದಕ್ಕೆ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಬಸ್ಬಿಯ ಅತೃಪ್ತ ಆತ್ಮದಿಂದಾಗಿಯೇ ಇದೆಲ್ಲಾ ನಡೀತಿದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. 1967ರಲ್ಲೂ ಸಹ ರಾಯಲ್ ಏರ್ ಫೋರ್ಸ್ನ ಬ್ರಿಟಿಷ್ ಸೈನಿಕರಿಬ್ಬರು ಈ ಕುರ್ಚಿ ಮೇಲೆ ಕುಳಿತ ಕೂಡಲೇ ಪ್ರಾಣ ಬಿಟ್ಟರು. ಇದೇ ಕಾರಣಕ್ಕೆ ಈ ಕುರ್ಚಿಯನ್ನ ಜನ ಜೀವ ತೆಗೆಯುವ ಸಿಂಹಾಸನ ಅಂತಿದ್ದಾರೆ. ಇಂದಿಗೂ ಬ್ರಿಟನ್ನ ಥ್ರಿಷ್ಕ್ ಮ್ಯೂಸಿಯಂನಲ್ಲಿರೋ ಈ ಕುರ್ಚಿ ಬೆಚ್ಚಿ ಬೀಳಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ