/newsfirstlive-kannada/media/post_attachments/wp-content/uploads/2025/02/Naveen9.png)
ಸಾಧನೆ ಅನ್ನೋದಕ್ಕೆ ವಯಸ್ಸಿನ ಮಿತಿ ಇದ್ಯಾ? ಖಂಡಿತಾ ಇಲ್ಲ. ಆದ್ರೂ 50-60ರ ನಂತ್ರ ಉದ್ಯಮ ಕ್ಷೇತ್ರದ ಸಾಧಕರನ್ನ ಗುರುತಿಸೋದು, ಸನ್ಮಾನಿಸೋದು ಸಾಮಾನ್ಯ. ಆದ್ರೆ ದೇಶದಲ್ಲಿ ವಿಶೇಷವಾದ ಪ್ರಶಸ್ತಿಯೊಂದಿದೆ. ಅದು 40ರೊಳಗಿನ ಉದ್ಯಮಿಗಳನ್ನ, ಸಾಧಕರನ್ನ ಗುರುತಿಸೋ ಪ್ರಶಸ್ತಿ. ಆ ಪ್ರಶಸ್ತಿಗೆ ಈ ಬಾರಿ ನಮ್ಮ ಕನ್ನಡಿಗರೊಬ್ಬರು ಭಾಜನರಾಗಿದ್ದಾರೆ.
ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕನ್ನಡಿಗನಿಗೆ ಸನ್ಮಾನ. ಬ್ಯುಸಿನೆಸ್ ವರ್ಲ್ಡ್ ಎಜುಕೇಶನ್ 40 ಅಂಡರ್ 40 ಪ್ರಶಸ್ತಿಗೆ ಭಾಜನರಾದ ಏಕೈಕ ಕನ್ನಡಿಗ ನವೀನ್ ಕೆ.ಎಂ. ಇದು ಶಿಕ್ಷಣ ಕ್ಷೇತ್ರದಲ್ಲಿನ 17 ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಗೌರವ.
ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬೆಂಗಳೂರಿನ ಟ್ರಯೋ ವರ್ಲ್ಡ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ನವೀನ್ ಕೆ.ಎಂ ಅವ್ರ ಸಾಧನೆಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರೋ ಕೊಡುಗೆ ಹಿನ್ನೆಲೆಯಲ್ಲಿ ಬ್ಯುಸಿನೆಸ್ ವರ್ಲ್ಡ್ ಎಜುಕೇಶನ್ 40 ಅಂಡರ್ 40 ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ನವೀನ್ ಕೆ.ಎಂ. ಶಿಕ್ಷಣ ಕ್ಷೇತ್ರದಲ್ಲಿ ಅವ್ರ ಸಾಧನೆ, ಅವ್ರಿಗೆ ಸಿಕ್ಕ ಗೌರವಗಳು, ಎದುರಿಸಿದಂತಹ ಸವಾಲುಗಳು ಇದೆಲ್ಲವನ್ನೂ ಮೌಲ್ಯಾಂಕನ ಮಾಡಿ ನವೀನ್ ಕೆ.ಎಂ ಅವ್ರನ್ನ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಅನುರಾಗ್ ಭಾತ್ರಾ ಏನಂದ್ರು?
ಈ ಬಗ್ಗೆ ಮಾತಾಡಿದ ಬಿಡಬ್ಲ್ಯು & ಎಕ್ಸ್‌ಚೇಂಜ್ ಫಾರ್ ಮೀಡಿಯಾ ಚೇರ್ಮನ್ ಅನುರಾಗ್ ಭಾತ್ರಾ ಅವರು, ಪ್ರಶಸ್ತಿ ಗೆದ್ದ ಎಲ್ಲರಿಗೂ ಅಭಿನಂದನೆಗಳು. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನವೀನ್ ಕೆ.ಎಂ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಇವರಿಗೆ ಅಭಿನಂದನೆಗಳು. ನವೀನ್ ಕೆ.ಎಂ ಅವರ 17 ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಗೌರವ ಇದು ಎಂದರು.
ಅನೀಲ್ ಸಹಸ್ರಬುಧೇ ಏನಂದ್ರು?
ಇನ್ನು, NAAC ಮತ್ತು NETF ಚೇರ್ಮನ್ ಅನೀಲ್ ಸಹಸ್ರಬುಧೇ ಅವರು ಮಾತನಾಡಿ, ಬಿಡಬ್ಲ್ಯು & ಎಕ್ಸ್‌ಚೇಂಜ್ ಫಾರ್ ಮೀಡಿಯಾ ಅವರಿಗೆ ಪ್ರಶಸ್ತಿ ಸಿಕ್ಕಿದ್ದು ಖುಷಿ ತಂದಿದೆ. ಅದರಲ್ಲೂ ನವೀನ್ ಕೆ.ಎಂ ಅವರಿಗೆ ಅವಾರ್ಡ್ ಸಿಕ್ಕಿದ್ದು ನನ್ನ ಖುಷಿಯನ್ನು ಹೆಚ್ಚಿಸಿದೆ. ಇನ್ನಷ್ಟು ಅವಾರ್ಡ್ಗಳು ಸಿಗಲಿ ಎಂದರು.
ನವೀನ್ ಕೆ. ಎಂ ಅವ್ರು ಆಂತ್ರೆಪ್ರೆನರ್ ಕೂಡ ಹೌದು. ಎಡುಪ್ರೆನರ್ ಕೂಡ ಹೌದು. ನವೀನ್ ಅವ್ರ ಸಾರಥ್ಯದಲ್ಲಿ ನಡೀತಿರೋ ಟ್ರಯೋ ವರ್ಲ್ಡ್ ಆಕಾಡೆಮಿ, ಪ್ರತಿಷ್ಠಿತ ಐಬಿ ವರ್ಲ್ಡ್ ಸ್ಕೂಲ್‌ನಿಂದ ಗುರುತಿಸಲ್ಪಟ್ಟಿರೋ ಶಾಲೆ. ಜೊತೆೆಗೆ ಇನ್‌ಸ್ಟಿಟ್ಯೂಶನ್ ಆಫ್ ಹ್ಯಾಪಿನೆಸ್ ಅನ್ನೋ ವಿಶೇಷ ಪ್ರಶಸ್ತಿ ಪಡೆದಿದೆ. ಟ್ರಯೋ ವರ್ಲ್ಡ್ ಅಕಾಡೆಮಿಯಲ್ಲಿ ICSE ಶಿಕ್ಷಣ ನೀಡ್ತಿದ್ದು, ಮಕ್ಕಳಲ್ಲಿರೋ ಪ್ರತಿಭೆಗೆ ಪ್ರೋತ್ಸಾಹ ನೀಡ್ಲಾಗ್ತಿದೆ. ಸುಮಾರು 22 ದೇಶಗಳ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ನ್ಯೂಸ್‌ಫಸ್ಟ್ ಜೊತೆ ಮಾತ್ನಾಡಿದ ನವೀನ್ ಕೆ.ಎಂ ಅವ್ರು ಪ್ರಶಸ್ತಿಯನ್ನ ತಮ್ಮ ಟ್ರಯೋ ಫ್ಯಾಮಿಲಿಗೆ ಅರ್ಪಿಸಿದ್ದಾರೆ.
ನವೀನ್ ಕೆ.ಎಂ ಏನಂದ್ರು?
ತಮಗೆ ಸಿಕ್ಕ ಅವಾರ್ಡ್ ಬಗ್ಗೆ ಟ್ರಯೋ ವರ್ಲ್ಡ್ ಅಕಾಡೆಮಿ ಎಂಡಿ ಆಗಿರೋ ನವೀನ್ ಕೆ.ಎಂ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನನಗೆ ಅವಾರ್ಡ್ ಸಿಕ್ಕಿದ್ದು ಖುಷಿ ತಂದಿದೆ. ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ಪ್ರಶಸ್ತಿಯನ್ನು ನಮ್ಮ ಶಿಕ್ಷಕರು, ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಅರ್ಪಿಸುತ್ತೇನೆ ಎಂದರು.
ಟ್ರಯೋ ವರ್ಲ್ಡ್ ಅಕಾಡೆಮಿ ಜೊತೆ ಜೊತೆಗೆ ನವೀನ್ ಎಂ.ಕೆ ಅವ್ರು ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ನೀಡ್ತಿರೋ ಇಂಡಿಯಾ ಫಾರ್ ಐಎಎಸ್‌ನ ಫೌಂಡರ್ ಡೈರೆಕ್ಟರ್ ಕೂಡ ಹೌದು. ಒಟ್ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನವೀನ್ ಕೆ.ಎಂ ಅವ್ರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿರೋದು ನಿಜಕ್ಕೂ ಹೆಮ್ಮೆಯ ಸಂಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ