/newsfirstlive-kannada/media/post_attachments/wp-content/uploads/2025/01/TN_TIGER_CLEW.jpg)
ನಾವು ಏನೋ ಮಾಡಲು ಅಂತ ಹೋಗಿರ್ತೀವಿ, ಅದು ಮತ್ತೊಂದೇನೋ ಆಗಿ, ಹಲವು ಯಡವಟ್ಟಾಗಿ ಸಂಕಟಗಳು ಕೊನೆಗೆ ಬಂದು ಕೊರಳು ಸುತ್ತಿಕೊಳ್ಳುತ್ತವೆ. ನಮ್ಮ ಊಹೆಗೂ ಮೀರಿದ ಘಟನೆಗಳು ನಡೆದು ಹೋಗುತ್ತವೆ ಅದಕ್ಕೆ ದೊಡ್ಡ ನಿದರ್ಶನ ತಮಿಳುನಾಡಿನ ಕೊಯಮತ್ತೂರಿನ 54 ವರ್ಷದ ಉದ್ಯಮಿ. ಇನ್​ಸ್ಟಾಗ್ರಾಮ್​ನಲ್ಲಿ ಬಂದ ಅವರ ಒಂದು ವಿಡಿಯೋ ಅವರಿಗೆ ಮುಳುವಾಗಿದೆ. ಪೊಲೀಸರು ಅರೆಸ್ಟ್ ಮಾಡಿಕೊಂಡು ಹೋಗುವ ಮಟ್ಟಕ್ಕೆ ಹೋಗಿದೆ.
ಕಾರಣವಿಷ್ಟೇ ಕೊಯಮತ್ತೂರಿನ ಉದ್ಯಮಿ ಪಲೈಕುಲಮ್​ನ ನಿವಾಸಿ ಬಾಲಕೃಷ್ಣನ್​​ ಎಂಬುವವವರು ವ್ಲಾಗರ್​ಗೆ ನೀಡುವ ಸಂದರ್ಶನದ ವಿಡಿಯೋವೊಂದರಲ್ಲಿ ತಮ್ಮ ಕುತ್ತಿಗೆಯಲ್ಲಿರುವ ಹುಲಿ ಉಗುರುನ್ನು ತೋರಿಸಿದ್ದಾರೆ. ಅದರ ಬಗ್ಗೆ ಕೇಳಿದಾಗ ಇದು ಹುಲಿಯ ಅಸಲಿ ಉಗುರು, ಇದನ್ನು ನಾನು ಆಂಧ್ರಪ್ರದೇಶದಿಂದ ತೆಗೆದುಕೊಂಡು ಬಂದಿದ್ದೇನೆ. ಹಾಗಂತ ನಾನೇನು ಯಾವ ಹುಲಿಯ ಬೇಟೆಯನ್ನು ಆಡಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಹಲವು ಅನುಮಾನಗಳು ಸೃಷ್ಟಿಯಾಗಿವೆ. ಅದರಲ್ಲೂ ಭಾರತೀಯ ಕಾನೂನಿನ ಅನ್ವಯದಲ್ಲಿ ಹುಲಿಯ ಸಂರಕ್ಷಣೆಗೆ ವಿಶೇಷ ಕಾಳಜಿ ನೀಡಲಾಗುತ್ತದೆ.
ಇದನ್ನೂ ಓದಿ:ಪ್ರೀತಿಸಿದವನನ್ನು ಮದುವೆಯಾಗಲು ಒಪ್ಪದ ಮನೆಯವರು; ಶೋಲೆ ಸಿನಿಮಾ ನೆನಪಿಸಿದ ಹುಡುಗಿ; ಮಾಡಿದ್ದೇನು?
ಯಾವಾಗ ಈ ವಿಡಿಯೋ ಸಂಪೂರ್ಣವಾಗಿ ವೈರಲ್ ಆಯ್ತೊ ಅರಣ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಕೂಡಲೇ ತನಿಖೆಯನ್ನು ಕೈಗೆತ್ತಿಕೊಂಡು ಬಾಲಕೃಷ್ಣನ್ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಬಾಲಕೃಷ್ಣನ್ ಮನೆಯಲ್ಲಿ ಜಿಂಕೆಯ ಕೊಂಬುಗಳು ಕೂಡ ಕಂಡು ಸಿಕ್ಕಿವೆ. ಅದರ ಜೊತೆಗೆ ಹುಲಿ ಉಗುರಿನ ಪೆಂಡೆಂಟ್ ಕೂಡ ಸಿಕ್ಕಿದೆ. ಹುಲಿಯುಗುರನ್ನು ಸೈಂಟಿಫಿಕ್ ಅನಾಲಿಸಸ್​ಗೆ ಕಳುಹಿಸಿದಾಗ ಅದು ಹುಲಿಯ ಅಸಲಿ ಉಗುರು ಎಂದು ತಿಳಿದು ಬಂದಿದೆ. ಸದ್ಯ ಬಾಲಕೃಷ್ಣನ್​ರನ್ನ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಬಾಲಕೃಷ್ಣನ್ ಬಂಧನ ಹಿಂದೆಯೇ ಈಗ ಹಲವು ಪ್ರಶ್ನೆಗಳು ಹುಟ್ಟುತ್ತಿವೆ. ಇಷ್ಟೆಲ್ಲಾ ಕಟ್ಟುನಿಟ್ಟಿನ ಕಾಯ್ದೆಗಳಿದ್ದರು ವನ್ಯಜೀವಿಗಳ ಮೃತದೇಹದ ಭಾಗಗಳು ಬ್ಲ್ಯಾಕ್ ಮಾರುಕಟ್ಟೆಯಲ್ಲಿ ಇಷ್ಟು ಸರಳವಾಗಿ ಹೇಗೆ ಸಿಗುತ್ತಿವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us