ರೋಡಲಿ ಸಾಗುತ ಹೊಂಡವ ದಾಟುತ.. ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಖ್ಯಾತ ಉದ್ಯಮಿಗಳ ವ್ಯಂಗ್ಯ! VIDEO

author-image
admin
Updated On
ರೋಡಲಿ ಸಾಗುತ ಹೊಂಡವ ದಾಟುತ.. ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಖ್ಯಾತ ಉದ್ಯಮಿಗಳ ವ್ಯಂಗ್ಯ! VIDEO
Advertisment
  • ರೋಡಲಿ ಸಾಗುತ ಹೊಂಡವ ದಾಟುತ.. ವಿಡಿಯೋ ವೈರಲ್‌!
  • ಗುಂಡಿ ಬಿದ್ದ ರಸ್ತೆ ವಿಡಿಯೋ ಟ್ವೀಟ್ ಮಾಡಿದ ಮೋಹನ್ ದಾಸ್ ಪೈ
  • ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಕೂಡ ಬೇಸರ

ಬೆಂಗಳೂರು: ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಬ್ರ್ಯಾಂಡ್ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚದೇ ಇರೋದಕ್ಕೆ ಉದ್ಯಮಿ ಮೋಹನ್ ದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಶಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳ ರೀಲ್ಸ್‌ ವಿಡಿಯೋವನ್ನು ಟ್ವೀಟ್ ಮಾಡಿದ ಇಬ್ಬರು ದೈತ್ಯ ಉದ್ಯಮಿಗಳು ಸರ್ಕಾರ ಹಾಗೂ ಜನಪ್ರತಿನಿಧಿಗಳ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬೆಂಗಳೂರು ಮಂದಿಗೆ ಬಿಗ್ ಶಾಕ್; ನೀರಲ್ಲಿ ಮುಳುಗಿದ ಕಾರು.. ಕೆಟ್ಟು ನಿಂತ ಆ್ಯಂಬುಲೆನ್ಸ್​.. ಏನೆಲ್ಲ ಆಗ್ತಿದೆ?

ಗುಂಡಿ ಬಿದ್ದ ರಸ್ತೆಯ ವಿಡಿಯೋ ಟ್ವೀಟ್ ಮಾಡಿದ ಮೋಹನ್ ದಾಸ್ ಪೈ ಅವರು, ಇದು ಕರ್ನಾಟಕದ ದುಃಖದ ಕಥೆ. ಕಳೆದ 20 ವರ್ಷಗಳಲ್ಲಿ ಭ್ರಷ್ಟಾಚಾರ ಮುಂದುವರಿದ ಪರಿಣಾಮ ಇದು. 21ನೇ ಶತಮಾನದಲ್ಲಿ ಕರ್ನಾಟಕವು ಗುಂಡಿ ಮುಕ್ತ ರಸ್ತೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ? ದೊಡ್ಡ ನಾಚಿಕೆಗೇಡಿನ ಸಂಗತಿ ಎಂದು ಸಿಎಂಗೆ ಈ ವಿಡಿಯೋವನ್ನು ಮೋಹನ್ ದಾಸ್ ಪೈ ಅವರು ಟ್ಯಾಗ್ ಮಾಡಿದ್ದಾರೆ.


">August 19, 2024

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಸರ್ಜಾಪುರ ರಸ್ತೆಯ ವಿಡಿಯೋ ಟ್ವೀಟ್‌ ಮಾಡಿ ತಮ್ಮ ಬೇಸರ ಹೊರ ಹಾಕಿದ್ದಾರೆ. ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ ಅನ್ನು ಮೋಹನ್ ದಾಸ್ ಪೈ ಅವರು ರೀಟ್ವೀಟ್ ಮಾಡಿದ್ದಾರೆ. ಇಬ್ಬರು ದೈತ್ಯ ಉದ್ಯಮಿಗಳ ಟ್ವೀಟ್ ಹಾಗೂ ರೀಲ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


">August 18, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment