newsfirstkannada.com

ನೀರನ್ನು ಅನಗತ್ಯ ವೇಸ್ಟ್​ ಮಾಡೋರೇ ಹುಷಾರ್​​.. ಚೂರು ಯಾಮಾರಿದ್ರೂ ಬೀಳುತ್ತೆ 5 ಸಾವಿರ ದಂಡ!

Share :

Published March 9, 2024 at 6:03am

    ಮನೋರಂಜಕವಾಗಿ ಕಾರಂಜಿಯ ಆಕರ್ಷಕ ವ್ಯವಸ್ಥೆ

    ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ ಕುಡಿಯುವ ನೀರು ನಿಷೇಧ

    ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣ

ಬೆಂಗಳೂರು: ಬೇಸಿಗೆ ಬೆವರಿನ ಮಧ್ಯೆ ನೀರಿಲ್ಲದೇ ರಾಜ್ಯ ರಾಜಾಧಾನಿ ಜನರ ಗಂಟಲು ಒಣಗುತ್ತಿದೆ. ಆದ್ರೆ, ಅತ್ತ ಕೆಲವರು ಕುಡಿಯುವ ನೀರಿನ್ನ ಬೇಕಾಬಿಟ್ಟಿ ಬಳಸ್ತಿದ್ದಾರೆ. ಹೀಗಾಗಿ, ನೀರು ಪೋಲಾಗುವುದನ್ನ ತಡೆಯಲು BWSSB ದಂಡಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ. ಕುಡಿಯೋ ನೀರನ್ನ ಯಾವುದಕ್ಕೆಲ್ಲಾ ಬಳಸಬಾರದು ಅನ್ನೋ ಸೂಚನೆಯನ್ನೂ ಕೊಟ್ಟಿದೆ.

ಕುಡಿಯುವ ನೀರಿನ್ನ ಬೇಕಾ ಬಿಟ್ಟಿ ಬಳಿಸಿದ್ರೆ ಬೀಳುತ್ತೆ ಫೈನ್​!

ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗ್ತಿದ್ದಂತೆ BWSSB ಅಲರ್ಟ್​ ಆಗಿದೆ. ಜೊತೆಗೆ ಸಾರ್ವಜನಿಕರು ಕುಡಿಯುವ ನೀರಿನ್ನ ಮಿತವಾಗಿ ಬಳಸುವಂತೆ ಸೂಚನೆ ಕೊಟ್ಟಿದೆ. ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಕಾಯ್ದೆ 1964/33&34ರ ಅನುಸಾರ ಕುಡಿಯುವ ನೀರಿನ್ನ ಕುಡಿಯೋದಕ್ಕೆ ಬಿಟ್ಟು ಇತರೆ ಕೆಲಸಗಳಿಗೆ ಬಳಸದಂತೆ ನಿಷೇಧ ಹೇರಿದೆ. ಒಂದು ವೇಳೆ ರೂಲ್ಸ್ ಫಾಲೋ ಮಾಡದಿದ್ರೆ ಮೊದಲಿಗೆ ₹5000 ದಂಡ, ಮತ್ತೆ ನಿಯಮ ಉಲ್ಲಂಘನೆ ಮರುಕಳಿಸಿದ್ರೆ ಹೆಚ್ಚುವರಿಯಾಗಿ ಪ್ರತಿದಿನ 500 ದಂಡ ವಿಧಿಸಲಾಗುವುದೆಂದು ಎಚ್ಚರಿಕೆ ನೀಡಿದೆ.

ಯಾವುದಕ್ಕೆ ನಿಷೇಧ?

  • ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ
  • ಮನೋರಂಜಕವಾಗಿ ಕಾರಂಜಿಯ ಆಕರ್ಷಕ ವ್ಯವಸ್ಥೆಗೆ
  • ರಸ್ತೆ ನಿರ್ಮಾಣ & ಸ್ವಚ್ಚತೆಗೆ ಕುಡಿಯುವ ನೀರು ನಿಷೇಧ

ಇನ್ನು, ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್​.ಅಶೋಕ್​, ರಾಜ್ಯದಲ್ಲಿ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್‌ನವರೇ ಕಾರಣ. ಕುಡಿಯುವ ನೀರಿಗೆ ಇಷ್ಟು ಸಮಸ್ಯೆ ಬಂದಿದೆ ಅಂದ್ರೆ, ನಮ್ಮಲ್ಲಿದ್ದ ನೀರನ್ನು ತಮಿಳುನಾಡಿಗೆ ಹರಿಸಿದ್ದೇ ಕಾರಣ ಎಂದು ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಒಟ್ಟಿನಲ್ಲಿ ನಗರದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಜನರು ಕೂಡ ಇದನ್ನರಿತು ಸುಖಾಸುಮ್ಮನೆ ನೀರನ್ನ ಪೋಲು ಮಾಡದೇ ಮಿತವಾಗಿ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀರನ್ನು ಅನಗತ್ಯ ವೇಸ್ಟ್​ ಮಾಡೋರೇ ಹುಷಾರ್​​.. ಚೂರು ಯಾಮಾರಿದ್ರೂ ಬೀಳುತ್ತೆ 5 ಸಾವಿರ ದಂಡ!

https://newsfirstlive.com/wp-content/uploads/2023/10/water.jpg

Load More