/newsfirstlive-kannada/media/post_attachments/wp-content/uploads/2025/02/Chinnaswamy_Stadium.jpg)
ಬೆಂಗಳೂರು: ಐಪಿಎಲ್ ಪಂದ್ಯದ ವೇಳೆ ಎಂ ಚಿನ್ನಸ್ವಾಮಿ ಸ್ಟೇಡಿಯಂ ಮೈದಾನಕ್ಕೆ ನೀರನ್ನು ಬಳಕೆ ಮಾಡಬಾರದು ಎಂದು ಜಲಮಂಡಳಿ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ಬೇಸಿಗೆ ಆರಂಭ ಆಗುತ್ತಿದ್ದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲುಎಸ್​ಎಸ್​ಬಿ) ಅಲರ್ಟ್ ಆಗಿದೆ. ಬೆಂಗಳೂರಲ್ಲಿ ನಡೆಯುವ ಐಪಿಎಲ್ ಪಂದ್ಯದ ಸಮಯದಲ್ಲಿ ಕುಡಿಯುವ ನೀರನ್ನು ಎಂ ಚಿನ್ನಸ್ವಾಮಿ ಸ್ಟೇಡಿಯಂನ ಮೈದಾನಕ್ಕೆ ಬಳಸದಂತೆ ತಿಳಿಸಲಾಗಿದೆ. ಈಗಾಗಲೇ ಆಯೋಜಕರಿಗೆ ಬಿಡಬ್ಲುಎಸ್​ಎಸ್​ಬಿ ಸೂಚನೆ ನೀಡಿದೆ.
ಇದನ್ನೂ ಓದಿ: Champions Trophy; ಟೀಮ್ ಇಂಡಿಯಾ ಸೆಮಿಫೈನಲ್​ಗೆ.. ಪಾಕಿಸ್ತಾನ, ಬಾಂಗ್ಲಾದೇಶ ಮನೆಗೆ
/newsfirstlive-kannada/media/post_attachments/wp-content/uploads/2025/02/Chinnaswamy_Stadium_1.jpg)
ಮಾರ್ಚ್ 22 ರಂದು 2025ರ ಐಪಿಎಲ್ ಆರಂಭವಾಗಲಿದೆ. ಪ್ರತಿ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ 75 ಸಾವಿರ ಲೀಟರ್ ನೀರುಣಿಸಲಾಗುತ್ತದೆ. ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಬೇಡಿಕೆ ಹೆಚ್ಚಿರಲಿದೆ. ಅಂತರ್ಜಲ ಮಟ್ಟ ಕುಸಿದಿರುವ ಬಗ್ಗೆ ವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಐಪಿಎಲ್ ಪಂದ್ಯದ ವೇಳೆ ಕುಡಿಯುವ ನೀರನ್ನ ಬಳಸಬಾರದು. ಬದಲಿಗೆ ಕಬ್ಬನ್ ಉದ್ಯಾನದ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಸಂಸ್ಕರಿಸಿದ ನೀರನ್ನಷ್ಟೇ ಕ್ರೀಡಾಂಗಣಕ್ಕೆ ಸರಬರಾಜು ಮಾಡಲು ಜಲಮಂಡಳಿ ಅನುಮತಿ ನೀಡಿದೆ.
ಜಲಮಂಡಳಿ ಅಧ್ಯಕ್ಷ ಡಾ.ವಿ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಕುಡಿಯುವ ನೀರನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಬಾರದು. ವಾಹನ ತೊಳೆಯಲು, ಕೈ ತೋಟಕ್ಕೆ, ನಿರ್ಮಾಣ ಕಾಮಗಾರಿಗಳಿಗೆ ನೀರನ್ನು ಬಳಕೆ ಮಾಡಬಾರದು. ನೀರನ್ನು ದುರ್ಬಳಕೆ ಮಾಡಿದ 112 ಜನರ ವಿರುದ್ಧ ದಂಡ ಹಾಕಲಾಗಿದೆ. 5 ಲಕ್ಷದ 60 ಸಾವಿರ ರೂಪಾಯಿ ದಂಡದಿಂದ ಬಂದಿದೆ. ಕುಡಿಯುವ ನೀರು ಪೋಲು ಮಾಡದಂತೆ ಎಲ್ಲ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಸಂಸ್ಕರಿಸಿದ ನೀರನ್ನು ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿ ಬಳಕೆ ಮಾಡಬಹುದು. ಕುಡಿಯುವ ನೀರನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us