/newsfirstlive-kannada/media/post_attachments/wp-content/uploads/2025/06/CONGRESS_AAP.jpg)
ದೇಶದ ನಾಲ್ಕು ರಾಜ್ಯಗಳ ಪಂಚ ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಇಂದು (ಜೂನ್ 23) ಪ್ರಕಟವಾಗಿದೆ. ಕೇರಳ, ಪಶ್ಚಿಮ ಬಂಗಾಳ, ಗುಜರಾತ್, ಪಂಜಾಬ್ ರಾಜ್ಯಗಳಲ್ಲಿ ವಿವಿಧ ಕಾರಣಗಳಿಂದ 5 ವಿಧಾನಸಭಾ ಸ್ಥಾನಗಳು ಖಾಲಿಯಾಗಿದ್ದವು. ಕಳೆದ ವಾರ ನಡೆದಿದ್ದ ಚುನಾವಣೆಯ ಮತ ಎಣಿಕೆ ಇಂದು ನಡೆದಿದೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷ ಜಯ ಗಳಿಸಿದೆ ಅಂತ ನೋಡುವುದಾದರೇ, 3 ಕ್ಷೇತ್ರಗಳಲ್ಲಿ ಆಯಾ ರಾಜ್ಯಗಳ ಆಡಳಿತರೂಢ ಪಕ್ಷಗಳು ಬೈ ಎಲೆಕ್ಷನ್​​ನಲ್ಲಿ ನಿರೀಕ್ಷೆಯಂತೆ ಗೆಲುವು ಸಾಧಿಸಿವೆ. 2 ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ಜಯಗಳಿಸಿವೆ.
/newsfirstlive-kannada/media/post_attachments/wp-content/uploads/2025/06/TMC.jpg)
ಆರ್ಯಧನ್ ಶೌಕತ್ ಗೆಲುವು
ಕೇರಳ ರಾಜ್ಯದ ವಯನಾಡ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನೀಲಂಬರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭರ್ಜರಿ ಜಯ ಸಾಧಿಸಿದ್ದಾರೆ. ವಯನಾಡ್ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್​ನ ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿ ಆರ್ಯಧನ್ ಶೌಕತ್ ಗೆಲುವು ಸಾಧಿಸಿದ್ದಾರೆ. ಎಡಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿ ಸ್ವರಾಜ್ ಸೋಲು ಅನುಭವಿಸಿದ್ದಾರೆ.
ಇನ್ನೂ ಪಂಜಾಬ್ ರಾಜ್ಯದ ಲೂಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಸಂಜೀವ್ ಅರೋರಾ 35 ಸಾವಿರ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಂಜೀವ್ ಅರೋರಾ ಹಾಲಿ ರಾಜ್ಯಸಭಾ ಸದಸ್ಯರು. ಈಗ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವರು. ತೆರವಾಗುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆಯೂ ದೇಶದಲ್ಲಿ ನಡೆಯುತ್ತಿದೆ.
/newsfirstlive-kannada/media/post_attachments/wp-content/uploads/2025/06/AAP.jpg)
ವಿಶಾವಧರ, ಕಡಿ ವಿಧಾನಸಭಾ ಕ್ಷೇತ್ರಗಳಿಗೆ ಬೈಲೆಕ್ಷನ್
ಇನ್ನೂ ಗುಜರಾತ್ ರಾಜ್ಯದ ವಿಶಾವಧರ, ಕಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ವಿಶಾವಧರ ಕ್ಷೇತ್ರವನ್ನು ಗುಜರಾತ್​ನ ಆಪ್ ಸಂಚಾಲಕ ಗೋಪಾಲ್ ಇಟಾಲಿಯಾ 17,554 ಮತಗಳ ಅಂತರದಿಂದ ಗೆದ್ದು ಕೊಂಡಿದ್ದಾರೆ. ಕಡಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ರಾಜೇಂದ್ರ ಚವ್ಡಾ 39 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇನ್ನೂ ಪಶ್ಚಿಮ ಬಂಗಾಳದ ಕಾಲಿಗಂಜ್ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಆಡಳಿತರೂಢ ಟಿಎಂಸಿ ಪಕ್ಷದ ಅಭ್ಯರ್ಥಿ ಅಲಿಫಾ ಅಹ್ಮದ್ ಗೆಲುವು ಸಾಧಿಸಿದ್ದಾರೆ. ಅಲಿಫಾ ಅಹ್ಮದ್ ತಂದೆ ನಾಸೀರುದ್ದೀನ್ ಅಹ್ಮದ್ ಫೆಬ್ರವರಿಯಲ್ಲಿ ನಿಧನರಾಗಿದ್ದರು. ಆ ಸ್ಥಾನಕ್ಕೆ ಟಿಎಂಸಿ ಪಕ್ಷ ನಾಸಿರುದ್ದೀನ್ ಅಹ್ಮದ್ ಮಗಳು ಅಲಿಫಾ ಅಹ್ಮದ್​​ಗೆ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us