/newsfirstlive-kannada/media/post_attachments/wp-content/uploads/2024/11/voting.jpg)
ಮಿನಿಸಮರದ ಮತಯುದ್ಧಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಂದು ಬೆಳಗ್ಗೆಯಿಂದ ಮತದಾನ ಶುರುವಾಗಿರಲಿದೆ. ಮೂರು ಕ್ಷೇತ್ರಗಳಲ್ಲಿ ಮೂರು ಪಕ್ಷಗಳು ಅಬ್ಬರದ ಪ್ರಚಾರ ಮಾಡಿದ್ದು, ಇಂದು ಅಭ್ಯರ್ಥಿಗಳ ಭವಿಷ್ಯವನ್ನ ಮತದಾರ ಬರೆಯಲಿದ್ದಾನೆ. ಬೈ ಎಲೆಕ್ಷನ್ ನಡೀತಿರೋ ಕ್ಷೇತ್ರಗಳಲ್ಲಿ ಚುನಾವಣೆಗೆ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಲ್ಲಿ ಎಲ್ಲಾ ಪ್ರಯತ್ನಗಳು ವಿಫಲವಾಗಿವೆಯಾ? ಹಾಗಿದ್ರೆ ಈ ನಿಯಮಗಳನ್ನು ಪಾಲಿಸಿ
ಚನ್ನಪಟ್ಟಣ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಈ ಕ್ಷೇತ್ರದಲ್ಲಿ ಚುನಾವಣಾ ಕಾರ್ಯಕ್ಕೆ 1 ಸಾವಿರದ 252 ಮಂದಿ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಶಾಂತಿಯುತ ಚುನಾವಣೆಗೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, 8 ಪ್ಯಾರಾ ಮಿಲಿಟರಿ ಪೋರ್ಸ್ ಹಾಗೂ 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಸುಸೂತ್ರ ಮತದಾನಕ್ಕೆ ಪ್ರಿಪರೇಷನ್!
ಹಾವೇರಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ಉಪಚುನಾವಣೆಗೆ ಎಲೆಕ್ಷನ್ ಕಮಿಷನ್ ಪ್ರಿಪರೇಷನ್ ಮಾಡಿಕೊಂಡಿದೆ. ಕ್ಷೇತ್ರದ ಜೆಎಂಜೆ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ಮಾಡಲಾಗಿದೆ. ಶಿಗ್ಗಾಂವಿಯಲ್ಲಿ ಒಟ್ಟು 241 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಮತದಾನ ಕೇಂದ್ರಗಳಿಗೆ 1 ಸಾವಿರದ 060 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಸಂಡೂರು ಮಿನಿ ಕದನ ಕಣದಲ್ಲಿ ಮತದಾನಕ್ಕೆ ಸಿದ್ಧತೆ
ಸಂಡೂರು ಕ್ಷೇತ್ರದಲ್ಲಿ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದೆ. 294 ಮತಗಟ್ಟೆ ಅಧಿಕಾರಿಗಳು, 294 ಸಹಾಯಕ ಅಧಿಕಾರಿಗಳು, 588 ಮತದಾನ ಸಹಾಯಕ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ 3 ಡಿವೈಎಸ್‌ಪಿ, 6 ಸಿಪಿಐ, 14 ಪಿಎಸ್ಐ, 22 ಎಎಸ್ಐ,193 ಹೆಡ್ ಕಾನ್ಸ್‌ಟೇಬಲ್ಸ್, 281 ಕಾನ್ಸ್‌ಟೇಬಲ್, 14 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಇವತ್ತು ಮನೆ ಮನೆ ಪ್ರಚಾರ ನಡೆಸಿ ಕೊನೆ ಹಂತದ ಮತಬೇಟೆಯಾಡಿದ್ದಾರೆ. ಸದ್ಯ ಇಂದು ಮೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮತದಾರ ಪ್ರಭು ಯಾರಿಗೆ ಗೆಲುವಿನ ಚುಕ್ಕಾಣಿ, ಯಾರಿಗೆ ಸೋಲಿನ ರುಚಿ ತೋರಿಸ್ತಾನೆ ಅನ್ನೋದು ನವೆಂಬರ್ 23ಕ್ಕೆ ಗೊತ್ತಾಗಲಿದೆ.
‘ಮಿನಿ’ ಯುದ್ಧ
ಚನ್ನಪಟ್ಟಣ
ಸಿ.ಪಿ. ಯೋಗೇಶ್ವರ್ VS ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್ ಅಭ್ಯರ್ಥಿ
ಶಿಗ್ಗಾಂವಿ
ಯಾಸೀರ್ ಪಠಾಣ್ VS ಭರತ್ ಬೊಮ್ಮಾಯಿ
ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ
ಸಂಡೂರು
ಅನ್ನಪೂರ್ಣ ತುಕಾರಾಂ VS ಬಂಗಾರು ಹನುಮಂತು
ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ