/newsfirstlive-kannada/media/post_attachments/wp-content/uploads/2025/02/Accident.jpg)
ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಲಾರಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರು ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಡ್ರೈವರ್ ವಿರುದ್ಧ ಕೇಸ್ ಮಾಡಿದ್ದಾರೆ.
ಇನ್ನು, ಪಕ್ಷದ ಕಡೆಯಿಂದ ವಿಜಯೇಂದ್ರ ಅವರಿಗೆ ನೀಡಲಾದ ಅಧಿಕೃತ ಕಾರು ಇದಾಗಿತ್ತು. ವಿಜಯೇಂದ್ರ ಅವರು ತಮ್ಮ ಪರ್ಸನಲ್ ಕಾರಿನಲ್ಲಿ ಇದ್ದರು. ಪಕ್ಷ ನೀಡಿದ್ದ ಕಾರಿನಲ್ಲಿ ವಿಜಯೇಂದ್ರ ಅವರ ಫೋಟೋಗ್ರಾಫರ್ ಮತ್ತು ಪಿಎ ಸಂಚರಿಸುತ್ತಿದ್ದರು. ಚಿಕ್ಕಮಗಳೂರಿನಿಂದ ಶಿಖಾರಿಪುರ ತೆರಳುವ ವೇಳೆ ಆ್ಯಕ್ಸಿಡೆಂಟ್ ಆಗಿದೆ.
ಇದನ್ನೂ ಓದಿ:ಎಲ್ಲ ಉತ್ಪನ್ನಗಳ ಮೇಲೂ ಕನ್ನಡ ಕಡ್ಡಾಯ; CM ಸಿದ್ದರಾಮಯ್ಯ ಸರ್ಕಾರ ಮಹತ್ವದ ಆದೇಶ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ