/newsfirstlive-kannada/media/post_attachments/wp-content/uploads/2025/03/VIJAYENDRA.jpg)
ಭಾರತೀಯ ಚಿತ್ರರಂಗದಲ್ಲೇ ಕನ್ನಡ ಚಿತ್ರರಂಗ ದೊಡ್ಡ ಹೆಸರು ಮಾಡಿದೆ. ಇಲ್ಲಿನ ನಟರು ಒಳ್ಳೊಳ್ಳೆ ಸಿನಿಮಾಗಳ ಮೂಲಕ ಇಡೀ ಚಿತ್ರರಂಗವನ್ನೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆದ್ರೆ ಬೆಂಗಳೂರಿನಲ್ಲಿ ನಡೆಯುತ್ತಿರುವ 18ನೇ ಬೆಂಗಳೂರು ಅಂತಾರಾಷ್ಟ್ರೀ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಆಡಿದ ಮಾತು ಸದ್ಯ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕೇವಲ ರಾಜಕೀಯ ಪಕ್ಷಗಳ ನಡುವೆ ಮಾತ್ರವಲ್ಲ.. ಕನ್ನಡ ಚಿತ್ರರಂಗದ ಕಲಾವಿದರೂ ಕೂಡ ಡಿಕೆಶಿ ಮಾತಿಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಲ್ಲಂಗಡಿ ಹಣ್ಣು, ಕರ್ಬೂಜ.. ಸಕ್ಕರೆ ಕಾಯಿಲೆಗೆ ಎರಡರಲ್ಲಿ ಯಾವ ಹಣ್ಣು ಉತ್ತಮ? ತಜ್ಞರು ಏನು ಹೇಳುತ್ತಾರೆ?
ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು
ವಿಶ್ವ ವಿಖ್ಯಾತ ಮೈಸೂರು ದಸರಾದಂತೆ ಈ ವರ್ಷವು ಕೂಡ ಅದ್ಧೂರಿಯಾಗಿ ಹಂಪಿ ಉತ್ಸವ ನಡೆದಿದೆ. ಹಂಪಿ ಉತ್ಸವದ ಕೊನೆಯ ದಿನ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಪಾಲ್ಗೊಂಡು ಮತ್ತಷ್ಟು ಮೆರಗು ನೀಡಿದ್ರು. ಆದ್ರೆ ಇದೇ ವೇಳೆ ಕಲಾವಿದರ ಬಗ್ಗೆ ಡಿಸಿಎಂ ಡಿಕೆಶಿ ಹೇಳಿಕೆ ಬಗ್ಗೆ ನಟಿ ರಮ್ಯಾ ಸರ್ಮಥಿಸಿಕೊಂಡ್ರು.. ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಸಾಹೇಬರು ಹೇಳೋದ್ರಲ್ಲಿ ತಪ್ಪೇನಿಲ್ಲಾ. ನೀರಿನ ವಿಚಾರ ಬಂದಾಗ ಕಲಾವಿದರೇಲ್ಲರೂ ಬೆಂಬಲಿಸಬೇಕು. ಡಿಸಿಎಂ ಡಿಕೆ ಶಿವಕುಮಾರ್ ಅದನ್ನೇ ಹೇಳಿರೋದು. ಅದಕ್ಕೆ ನನ್ನ ಸಹಮತವಿದೆ ಎಂದಿದ್ದಾರೆ.
ಇದನ್ನೂ ಓದಿ: ಅಮೃತಧಾರೆ ಖ್ಯಾತಿಯ ‘ಅಕ್ಕೊರೆ’ ಮಲ್ಲಿ ಜಬರ್ದಸ್ತ್ ಡ್ಯಾನ್ಸ್ ನೋಡಿ ಫ್ಯಾನ್ಸ್ ಶಾಕ್! VIDEO
ಕಲಾವಿದರ ನಟ್ಟು ಬೋಲ್ಟು ಟೈಟ್ ಮಾಡೋದು ಗೊತ್ತಿದೆ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ವಿಪಕ್ಷಗಳು ಕಿಡಿಕಾರಿವೆ. ಡಿ.ಕೆ.ಶಿವಕುಮಾರ್ ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹೇಳಲಾಗದ ಮಾತನ್ನು ಸಿನಿಮಾ ಇಂಡಸ್ಟ್ರಿಯವರಿಗೆ ಹೇಳಿ ತೀರಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಬ್ಬಾಳಿಕೆ ದೌರ್ಜನ್ಯಕ್ಕೆ ಅವಕಾಶ ಇಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ರಾಜಣ್ಣ ಸಹಿತ ಇತರ ಸಚಿವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದೊಳಗಿನ ಗೊಂದಲ ಅರಿವಾಗುತ್ತದೆ. ಪಕ್ಷದ ಬೆಳವಣಿಗೆಯಿಂದ ಡಿ.ಕೆ.ಶಿವಕುಮಾರ್ ವಿಚಲಿತರಾಗಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಹೇಳಲಾಗದ ಮಾತನ್ನು ಸಿನಿಮಾ ಇಂಡಸ್ಟ್ರಿಯವರಿಗೆ ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಬ್ಬಾಳಿಕೆ, ದೌರ್ಜನ್ಯಕ್ಕೆ ಅವಕಾಶ ಇಲ್ಲ-ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಡಿಸಿಎಂ ಡಿಕೆಶಿ ಮಾತ್ರ.. ಯಾರು ಏನೇ ಹೇಳಲಿ.. ನನಗೆ ಗೊತ್ತಿರುವ ಸತ್ಯವನ್ನೇ ಹೇಳಿದ್ದಾನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟಾರೆ.. ನಟ್ಟು, ಬೋಲ್ಟ್, ಟೈಟ್ ಮಾತು ಚಿತ್ರರಂಗಕ್ಕೂ ನಿದ್ದೆಗೆಡಿಸಿದೆ. ಇದು ಸರ್ಕಾರ ಮತ್ತು ಚಿತ್ರರಂಗದ ಮಧ್ಯೆ ಸಮರಕ್ಕೂ ನಾಂದಿ ಹಾಡಿದೆ. ಇದನ್ನೆಲ್ಲಾ ನೋಡ್ತಿದ್ರೆ ಪಕ್ಕದ ರಾಜ್ಯದಲ್ಲಿ ಕಂಡಿದ್ದ ರಾಜಕಾರಣ-ಸಿನಿಮಾ ರಂಗದ ಜಟಾಪಟಿ ಕರ್ನಾಟಕದಲ್ಲೂ ಶುರುವಾಯ್ತಾ ಎಂಬ ಪ್ರಶ್ನೆ ಮೂಡಿಸಿದೆ.
ಇದನ್ನೂ ಓದಿ: ದಾಖಲೆಯ ಬಜೆಟ್ ಮಂಡನೆಗೆ ಸಜ್ಜಾದ ಸಿಎಂ ಸಿದ್ದು.. ವಿಪಕ್ಷಗಳು ಮಾಡಿಕೊಂಡಿರುವ ಪ್ಲ್ಯಾನ್ಗಳೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ