newsfirstkannada.com

ಬೆಂಗಳೂರಿನ ತನ್ನ ಅತಿದೊಡ್ಡ ಕಚೇರಿಯನ್ನು ಖಾಲಿ ಮಾಡಿದ ಬೈಜೂಸ್​​; ಕಾರಣವೇನು?

Share :

Published July 24, 2023 at 10:04pm

Update July 24, 2023 at 10:39pm

    ಬೈಜೂಸ್​​ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬೈಜು ರವೀಂದ್ರನ್

    ತನ್ನ ದೊಡ್ಡ ಕಚೇರಿಯನ್ನು ಖಾಲಿ ಮಾಡಿದ ಶಿಕ್ಷಣ ಸಂಸ್ಥೆ!

    ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದ ಬೈಜೂಸ್​​

ಬೆಂಗಳೂರು: ದೇಶದಲ್ಲೇ ಅತಿ ದೊಡ್ಡ ಶಿಕ್ಷಣ ಸಂಸ್ಥೆಯಾದ ಬೈಜೂಸ್ ಕಂಪನಿಯು ಈಗ ಬೆಂಗಳೂರಿನಲ್ಲಿದ್ದ ತನ್ನ ದೊಡ್ಡದಾದ ಕಚೇರಿಯನ್ನು ಸಂಪೂರ್ಣವಾಗಿ ಖಾಲಿ ಮಾಡಿದೆ ಎಂದು ವರದಿಯಾಗಿದೆ. ಜತೆಗೆ ಪ್ರೆಸ್ಟೀಜ್ ಟೆಕ್‌ ಪಾರ್ಕ್‌ನಲ್ಲಿರುವ ತನ್ನ ಒಂಬತ್ತು ಮಹಡಿಗಳ ಕಚೇರಿಯಲ್ಲಿ ಎರಡು ಅಂತಸ್ತುಗಳನ್ನು ಬಾಡಿಗೆಗೆ ಬಿಟ್ಟು ಕೊಟ್ಟಿದೆ. ಬೈಜೂಸ್ ಕಂಪನಿಯು ಹಣ ಉಳಿತಾಯ ಮಾಡಲು ಹಾಗೂ ಬಂಡವಾಳವನ್ನು ಹೆಚ್ಚಿಸಲು ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ರವೀಂದ್ರನ್ ಅವರು ಬೈಜೂಸ್ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ.

ಬೈಜೂಸ್ ಕಂಪನಿಯು ಅತ್ಯಂತ ದೊಡ್ಡದಾದ ಆಫೀಸ್‌ ಕಲ್ಯಾಣಿ ಟೆಕ್‌ ಪಾರ್ಕ್‌ನಲ್ಲಿ ಹೊಂದಿದೆ. ಆ ಜಾಗವು ಒಟ್ಟು 5.58 ಲಕ್ಷ ಚದರ ಅಡಿ ಜಾಗ ಹೊಂದಿದೆ. ಬೈಜೂಸ್ ಬೆಂಗಳೂರಿನಲ್ಲಿ ಒಟ್ಟು ಮೂರು ಕಚೇರಿಗಳನ್ನು ಹೊಂದಿದೆ. ಇದೀಗ ಬೆಂಗಳೂರು ಹೊರವಲಯದ ಬ್ರೂಕ್‌ಫಿಲ್‌ನ ಕಲ್ಯಾಣಿ ಟೆಕ್ ಪಾರ್ಕ್‌ ದೊಡ್ಡ ಆಫೀಸ್‌ ಅನ್ನು ಖಾಲಿ ಮಾಡಿದೆ. ಹೀಗಾಗಿ ಬೈಜೂಸ್​ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ವರ್ಕ್ ಪ್ರಮ್ ಹೋಂ ಅಥವಾ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಮುಖ್ಯ ಕಚೇರಿ ಸೇರಿದಂತೆ ದೇಶದ ಇತರ ಕಚೇರಿಗಳಿಂದ ಕೆಲಸ ಮಾಡಲು ಬೈಜೂಸ್ ಸಂಸ್ಥೆ ಸೂಚನೆ ನೀಡಿದೆ. ಒಟ್ಟಾರೆಯಾಗಿ ಬೈಜೂಸ್ ಭಾರತಾದ್ಯಂತ ಒಟ್ಟು 30 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಹೊಂದಿದೆ.

ಇನ್ನು, ಕಳೆದ ತಿಂಗಳು ಬೈಜೂಸ್ ಸಂಸ್ಥೆಯು ಒಟ್ಟು 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಮತ್ತೊಂದು ವೆಚ್ಚ ಕಡಿತದ ಉಪಕ್ರಮವಾಗಿದೆ. ಬೈಜೂಸ್ ಶಿಕ್ಷಣ ಸಂಸ್ಥೆಯು 4 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಕೋಚಿಂಗ್ ನೀಡುವುದರ ಜೊತೆಗೆ ಲರ್ನಿಂಗ್ ಆಪ್‌ನ ಮೂಲಕ ಹೊಸ ಹೊಸ ಮಾಹಿತಿಯನ್ನು ನೀಡುವ ಒಂದು ಸಂಸ್ಥೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ತನ್ನ ಅತಿದೊಡ್ಡ ಕಚೇರಿಯನ್ನು ಖಾಲಿ ಮಾಡಿದ ಬೈಜೂಸ್​​; ಕಾರಣವೇನು?

https://newsfirstlive.com/wp-content/uploads/2023/07/byjus-2.jpg

Load More