newsfirstkannada.com

ಕೇಂದ್ರ-ರಾಜ್ಯ ಸರ್ಕಾರದ ಕೊಂಡಿಯಾಗಿ ಜನಮನ್ನಣೆ ಗಳಿಸಿದ್ದ ಬೈಕೆರೆ ನಾಗೇಶ್ ನಿಧನ

Share :

Published January 23, 2024 at 12:06pm

Update January 23, 2024 at 12:07pm

  ಬೈಕೆರೆ ನಾಗೇಶ್ ಬೆಂಗಳೂರಲ್ಲಿ ನಿಧನರಾಗಿದ್ದಾರೆ

  ಬೆಂಗಳೂರಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ

  ನಾಳೆ ಹಾಸನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ

ಕರ್ನಾಟಕ ಸರ್ಕಾರದ ದೆಹಲಿಯ ಮಾಜಿ ಪ್ರತಿನಿಧಿ ಬೈಕೆರೆ ನಾಗೇಶ್ ಬ್ರೈನ್ ಹ್ಯಾಮರೇಜ್​ನಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೇಂದ್ರದ ರೈಲ್ವೇ ಇಲಾಖೆ, ರಸಗೊಬ್ಬರ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರ-ರಾಜ್ಯ ಸರ್ಕಾರದ ಕೊಂಡಿಯಾಗಿ ಇವರು ಕೆಲಸ ನಿರ್ವಹಿಸಿದ್ದ ಕೀರ್ತಿ ಇವರದ್ದಾಗಿದೆ.

ಬೆಂಗಳೂರಿನ ಎಸ್‌ಬಿಎಂ ಕಾಲೋನಿಯ ಆನಂದನಗರದಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಹಾಸನ ಜಿಲ್ಲೆಯ ಬೈಕೆರೆ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನದ ಬಳಿಕ ಹಾಸನ ಜಿಲ್ಲೆಯ ಬೈಕೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಬೈಕೆರೆ ಗ್ರಾಮವನ್ನು ಮಾದರಿ ಗ್ರಾಮವಾಗಿ ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಇವರದ್ದು. ಜಾಫರ್ ಷರೀಫ್, ಅನಂತಕುಮಾರ್‌ ಅವರ ವಿಶೇಷ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರ-ರಾಜ್ಯ ಸರ್ಕಾರದ ಕೊಂಡಿಯಾಗಿ ಜನಮನ್ನಣೆ ಗಳಿಸಿದ್ದ ಬೈಕೆರೆ ನಾಗೇಶ್ ನಿಧನ

https://newsfirstlive.com/wp-content/uploads/2024/01/Bykere-Nagesh.jpg

Load More