/newsfirstlive-kannada/media/post_attachments/wp-content/uploads/2025/07/BYOGI_TN.jpg)
ಶ್ರೀ ರವಿಶಂಕರ್ ಗುರೂಜಿ ಅವರು ಒಬ್ಬ ಪ್ರಮುಖ ಆಧ್ಯಾತ್ಮಿಕ ಗುರುಗಳು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು. ಅವರ ಕಾರ್ಯಗಳು ಜಾಗತಿಕವಾಗಿ ಹೆಚ್ಚು ಮನ್ನಣೆ ಪಡೆದಿವೆ. ಆಧ್ಯಾತ್ಮಿಕದ ಜೊತೆ ಜೊತೆಗೆ ಕಲಿಕೆ ಹಾಗೂ ಮಾನವೀಯ ಮೌಲ್ಯಗಳಿಗೂ ಹೆಚ್ಚಿನ ಹೊತ್ತು ಕೊಡುತ್ತಾರೆ. ಹೀಗಾಗಿಯೇ ಕೊರೊನಾ ಸಮಯದಲ್ಲಿ ಕಂಗೆಟ್ಟು ಹೋಗಿದ್ದ ಗಾರ್ಮೆಂಟ್ ಉದ್ಯಮಿಗಳು ಜೀವನದ ಕೊನೆ ನಿರ್ಧಾರಕ್ಕೆ ಹೋಗಿದ್ದರಂತೆ. ಅಂತಹವರ ಕೈ ಹಿಡಿದು ಆ ಉದ್ಯಮಕ್ಕೆ ಈಗ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಮರುಜೀವ ನೀಡಿದ್ದಾರೆ.
ತಮಿಳುಮಾಡಿನ ತಿರುವಣ್ಣಾಮಲೈ ಮೂಲದ ಕೆಲ ಗಾರ್ಮೆಂಟ್ ಉದ್ಯಮಿಗಳು, ಮಾಲೀಕರು, ಕಾರ್ಮಿಕರು ಕೊರೊನಾ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಿರಾಶೆಗೊಂಡಿದ್ದರು. ಇದರಲ್ಲಿ ಕೆಲವರು ಜೀವನದ ಕೊನೆ ನಿರ್ಧಾರ ಮಾಡಿದ್ದರು. ಆದರೆ ಇದೇ ವೇಳೆ ಗಾರ್ಮೆಂಟ್ ಉದ್ಯಮಿಗಳು ಶ್ರೀ ಶ್ರೀ ರವಿ ಶಂಕರ್ ಗುರುಗಳನ್ನು ಸಂಪರ್ಕಿಸಿ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರು. ಇದಕ್ಕೆ ಮಿಡಿದ ಶ್ರೀ ರವಿಶಂಕರ್ ಗುರೂಜಿ ಅವರು ಹೃದಯ ಇದಕ್ಕೆ ಏನು ಮಾಡಬಹುದು ಎಂದು ಶ್ರೀವಿದ್ಯಾ ವರ್ಚಸ್ವಿ ಅವರನ್ನು ಕೇಳಿದ್ದರು.
ಅದೇ ಸಮಯದಲ್ಲಿ ಈ ಬಿಯೋಗಿ ಎಂಬ ಕಲ್ಪನೆ ಹುಟ್ಟಿಕೊಂಡಿತು. ಸದ್ಯ ಬಿಯೋಗಿ ಅಂದಿನಿಂದ ಇಲ್ಲಿಯವರೆಗೆ, ಈ ಲೇಬಲ್ ಸುಸ್ಥಿರ ಫ್ಯಾಷನ್, ಆರೈಕೆ ಹಾಗೂ ಲೌಂಜ್‌ವೇರ್ ಕ್ಷೇತ್ರದಲ್ಲಿ ಪ್ರಮುಖ ಬ್ರಾಂಡ್ ಆಗಿ ಅಭಿವೃದ್ಧಿ ಹೊಂದಿದೆ. ಸ್ಥಳೀಯ ಕೌಶಲ್ಯಗಳನ್ನು ತೊಡಗಿಸಿಕೊಳ್ಳುತ್ತಾ, ಹೊಸತನ್ನು ರೂಪಿಸುತ್ತಾ, ಆರಾಮದಾಯಕ ಹಾಗೂ ಸುಸ್ಥಿರ ಬಟ್ಟೆಗಳನ್ನು ರೂಪಿಸಲಾಗುತ್ತಿದೆ. ಲಾಭ, ಮಾರ್ಕೆಟಿಂಗ್ ಹಾಗೂ ಅಭಿಮಾನಿಗಳಿಗಾಗಿ ಬಿಯೋಗಿ ಕೆಲಸ ಮಾಡುತ್ತಿಲ್ಲ.
ಬದಲಾಗಿ ತಮಿಳುನಾಡಿನ ಗಾರ್ಮೆಂಟ್ಸ್ ಮಾಲೀಕರಿಗೆ, ಮಹಿಳಾ ಉದ್ಯೋಗಿಗಳಿಗೆ ದೌರ್ಜನ್ಯಕ್ಕೆ ಒಳಗಾದವರಿಗೆ, ಆರ್ಥಿಕ ತೊಂದರೆಯಿಂದ ಹೊರ ಬಂದವರಿಗೆ, ನೆಯ್ಗಾರರಿಗೂ ಬಿಯೋಗಿ ಜೀವಧಾರೆ ಆಗಿದೆ. ಉದ್ಯೋಗ ಗೊತ್ತಿಲ್ಲ ಎಂದರೂ ತರಬೇತಿ ನೀಡಿ ಬಳಿಕ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ. ಸ್ಥಳೀಯರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ ಎಂದು ಬಿಯೋಗಿ ಸಂಸ್ಥೆಯ ವಿಶ್ವ ವ್ಯಾಪಾರದ ಮುಖ್ಯಸ್ಥೆ ಶ್ರೀವಿದ್ಯಾ ವರ್ಚಸ್ವಿ ಹೇಳುತ್ತಾರೆ.
ಆರ್ಟ್ ಆಫ್ ಲಿವಿಂಗ್‌ನ ತತ್ವಗಳಲ್ಲಿ ಬೇರೂರಿ, ಕರಕುಶಲತೆ, ಆರೈಕೆಯ ಮೌಲ್ಯಗಳು ಹಾಗೂ ಸಾಮಾಜಿಕ ಪರಿವರ್ತನೆ ಒಟ್ಟಿಗೆ ಬಿಯೋಗಿ ವಿಕಸನಗೊಳ್ಳುತ್ತಿದೆ. ಬಿಯೋಗಿ ಕೇಂದ್ರಗಳಲ್ಲಿ ಎಲ್ಲರಿಗೂ ಒಂದೇ ರೀತಿಯ ಉಡುಪು ಧರಿಸಿರುತ್ತಾರೆ. ಪುಟ್ಟ ಮಕ್ಕಳಿರುವ ತಾಯಂದಿರು ಇಲ್ಲಿ ಕೆಲಸ ಮಾಡ್ತಾರೆ. ಅವರ ಮಕ್ಕಳನ್ನು ಇಲ್ಲಿಯೇ ನೋಡಿಕೊಳ್ಳಲಾಗುತ್ತದೆ. ಶಾಲೆ ಮುಗಿಸಿ ಮಕ್ಕಳು ಬಂದ ಮೇಲು ತಾಯಂದಿರಿಗಾಗಿ ಕಾಯಲು ಅವಕಾಶ ಕೂಡ ಸ್ಥಳ ಇದೆ.
ಇದನ್ನೂ ಓದಿ:ಬೆಂಗಳೂರಲ್ಲಿ 114 Km ಎಲಿವೇಟೆಡ್ ಕಾರಿಡಾರ್.. ಭೂಮಿ ಬೆಲೆ ಏರಿಕೆ, ರಿಯಲ್ ಎಸ್ಟೇಟ್ಗೆ ಭಾರೀ ಲಾಭ?
ಬಿಯೋಗಿ ಕೇಂದ್ರದ ಇನ್ನೊಂದು ವಿಶೇಷ ಎಂದರೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ವ್ಯವಸ್ಥೆ ಇದೆ. ಊಟಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಉಚಿತವಾಗಿ ನೀಡಲಾಗುತ್ತದೆ. ಯೋಗ, ಪ್ರಾಣಾಯಾಮ, ಧ್ಯಾನ ಮೂಲಕ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಲಾಗುತ್ತದೆ. ಜೊತೆಗೆ ಬಿಯೋಗಿ ಕೇಂದ್ರದಲ್ಲಿ ಸಂಜೆ 5:30ಕ್ಕೆ ಎಲ್ಲರ ಕೆಲಸ ಮುಕ್ತಾಯವಾಗಿ ಸಂತಸದಿಂದ ಉದ್ಯೋಗಿಗಳು ಮನೆಗೆ ಹೋಗಬಹುದು. ಅಂದು ಸಂಕಷ್ಟದಲ್ಲಿದ್ದವರು ಇಂದು ಬಿಯೋಗಿಯಿಂದ ಆರ್ಥಿಕವಾಗಿ ಸದೃಢವಾಗಿ ಸಾಮಾಜದಲ್ಲಿ ಗೌರವ ಸಂಪಾದಿಸಿದ್ದಾರೆ ಎಂದು ಶ್ರೀವಿದ್ಯಾ ವರ್ಚಸ್ವಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ