newsfirstkannada.com

ಮಂಡ್ಯ ಜಿದ್ದಾಜಿದ್ದಿನಲ್ಲಿ ಸುಮಲತಾಗೆ ಬಿಗ್‌ಶಾಕ್‌.. ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಫೈನಲ್‌?

Share :

Published March 12, 2024 at 5:25pm

Update March 12, 2024 at 5:31pm

    ದೋಸ್ತಿ ಹೊಂದಾಣಿಕೆಯಲ್ಲಿ ಮಂಡ್ಯ ಟಿಕೆಟ್ ಜೆಡಿಎಸ್‌ ಪಾಲು

    ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾ ಅವರಿಗೆ ನಿರಾಸೆ

    ಮಂಡ್ಯ ಜೆಡಿಎಸ್‌ ನಾಯಕರಿಗೆ ಕುಮಾರಸ್ವಾಮಿ ಖಡಕ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ರಂಗು ದಿನಕಳೆದಂತೆ ಜೋರಾಗುತ್ತಿದೆ. 28 ಕ್ಷೇತ್ರದಲ್ಲೂ ರಾಜಕೀಯ ಬೆಳವಣಿಗೆಗಳು ಭರ್ಜರಿಯಾಗಿದ್ದು ಸೋಲು, ಗೆಲುವಿನ ಲೆಕ್ಕಾಚಾರಗಳು ಶುರುವಾಗಿದೆ. ಮಂಡ್ಯ ಜಿಲ್ಲೆ ಈ ಬಾರಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಕ್ಕೂ ಪ್ರತಿಷ್ಠೆಯ ಲೋಕಸಭಾ ಕ್ಷೇತ್ರವಾಗಿದೆ.

ಜೆಡಿಎಸ್ ನಾಯಕರು ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಗೆದ್ದೇ ಗೆಲ್ಲಲೇಬೇಕು ಅಂತ ಪಣತೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್‌ ದೋಸ್ತಿ ಹೊಂದಾಣಿಕೆಯಲ್ಲಿ ಮಂಡ್ಯ ಟಿಕೆಟ್ ಬಹುತೇಕ ದಳಪತಿಗಳ ತೆಕ್ಕೆಗೆ ಹೋಗುವ ಸಾಧ್ಯತೆ ಇದೆ. ಅಳೆದು ತೂಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ಒಪ್ಪಿದೆ ಎನ್ನಲಾಗಿದೆ.

ದಳಪತಿಗಳಿಗೆ ಭದ್ರಕೋಟೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್‌ ಅಸ್ತು ಎಂದಿದೆ ಎನ್ನಲಾಗಿದೆ. ಮಂಡ್ಯ ಕ್ಷೇತ್ರ ತಮಗೆ ಕನ್ಫರ್ಮ್ ಆಗ್ತಿದ್ದಂತೆ ದಳ ನಾಯಕರು ಫುಲ್‌ ಆ್ಯಕ್ಟಿವ್ ಆಗಿದ್ದಾರೆ. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಂಸದೆ ಸುಮಲತಾ ಅವರಿಗೆ ಸೆಡ್ಡು ಹೊಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಮಂಡ್ಯಕ್ಕೆ ಮೈತ್ರಿ ಅಭ್ಯರ್ಥಿ ಫೈನಲ್‌! 

ಬಿಜೆಪಿ ಹೈಕಮಾಂಡ್‌ನಿಂದ ಮಂಡ್ಯ ಲೋಕಸಭಾ ಕ್ಷೇತ್ರ ಫಿಕ್ಸ್ ಆಗುತ್ತಿದ್ದಂತೆ ಜೆಡಿಎಸ್ ನಾಯಕರು ಅಭ್ಯರ್ಥಿಯನ್ನೂ ಫೈನಲ್ ಮಾಡಿದ್ದಾರೆ. ಜಿಲ್ಲಾ ನಾಯಕರ ಬಂಡಾಯ ಶಮನಗೊಳಿಸಲಾಗಿದ್ದು, ಮೂವರು ಟಿಕೆಟ್ ಆಕಾಂಕ್ಷಿಗಳ ಪೈಕಿ ಒಬ್ಬರು ಹೆಸರು ಅಂತಿಮಗೊಳಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಜೆಡಿಎಸ್ ನಾಯಕರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನೇ ಕಣಕ್ಕಿಳಿಯೋದು ಬಹುತೇಕ ಫಿಕ್ಸ್ ಆಗಿದೆ. ಮಂಡ್ಯದ ಕೆಲ ಮಾಜಿ ಶಾಸಕರು ಮಾಜಿ ಸಚಿವ ಪುಟ್ಟರಾಜು ಅವರ ಸ್ಪರ್ಧೆಗೆ ವಿರೋಧಿಸಿದ್ದರು. ಸುರೇಶಗೌಡ, ರವೀಂದ್ರ ಶ್ರೀಕಂಠಯ್ಯ, ಡಿ.ಸಿ.ತಮ್ಮಣ್ಣರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಂಡ್ಯ ನಾಯಕರ ಸಂಧಾನ ಸಫಲವಾಗಿದೆ. ಪಕ್ಷ ಹಾಗೂ ನಿಮ್ಮ ರಾಜಕೀಯ ಭವಿಷ್ಯಕ್ಕಾಗಿ ಈ ಬಾರಿ ಗೆಲ್ಲಲೇಬೇಕು. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡುವಂತೆ ಹೆಚ್​ಡಿಕೆ ಖಡಕ್ ಸಂದೇಶ ನೀಡಿದ್ದಾರೆ. ಹೆಚ್​ಡಿಕೆ ಸೂಚನೆಯಂತೆ ಮಾಜಿ ಶಾಸಕರು ಪುಟ್ಟರಾಜು ಆಯ್ಕೆಯನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಅಧಿಕೃತವಾಗ್ತಿದ್ದಂತೆ ಪುಟ್ಟರಾಜು ಹೆಸರು ಘೋಷಣೆಗೆ ದಳಪತಿಗಳು ನಿರ್ಧಾರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ಜಿದ್ದಾಜಿದ್ದಿನಲ್ಲಿ ಸುಮಲತಾಗೆ ಬಿಗ್‌ಶಾಕ್‌.. ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಫೈನಲ್‌?

https://newsfirstlive.com/wp-content/uploads/2024/03/Mandya-Sumalatha-JDS.jpg

Load More